ರಾಯಚೂರು: ಜಿಲ್ಲೆಯ ಯರಮರಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಮಂತ್ರಾಲಯದ ಶ್ರೀಗುರುರಾಘವೇಂದ್ರ ಸ್ವಾಮಿ ಹೆಸರಿಡಲು ರಾಯಚೂರು ನಗರಸಭೆಯ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕೆಲಸಗಾತಿ ಅಲ್ಲ, ಪ್ರಚಾರ ಪ್ರಿಯೆ ಅಂತ ಹೇಳೋಕೆ ಬಂದೆ: ಎ. ಮಂಜು

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಿನ್ನೆ ನಡೆದ ಮಹಾಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನ ತೆಗೆದುಕೊಳ್ಳಲಾಗಿದ್ದು, ಎಲ್ಲಾ ಸದಸ್ಯರು ಸರ್ವಾನುಮತದಿಂದ ತೀರ್ಮಾನಕ್ಕೆ ಒಪ್ಪಿಕೊಂಡಿದ್ದಾರೆ. ಮೇಜು ಕುಟ್ಟಿ ಸರ್ವಾನುಮತದಿಂದ ನಿರ್ಣಯವನ್ನ ಸದಸ್ಯರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ವರ್ಲ್ಡ್​ ಚೆಸ್ ಚಾಂಪಿಯನ್ ಜೊತೆಗೆ ಕಿಚ್ಚನ ಆಟ

ಕೋಟ್ಯಂತರ ಭಕ್ತರ ಪಾಲಿನ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು. ವಿಮಾನ ನಿಲ್ದಾಣಕ್ಕೆ ರಾಯರ ಹೆಸರಿಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ ನಗರಸಭೆ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

The post ರಾಯಚೂರು ವಿಮಾನ ನಿಲ್ದಾಣಕ್ಕೆ ಗುರುರಾಯರ ಹೆಸರು- ನಗರಸಭೆಯಲ್ಲಿ ನಿರ್ಣಯ appeared first on Public TV.

Source: publictv.in

Source link