ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ
ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ 500ಕ್ಕೂ ಹೆಚ್ಚು ಹಳೆ ಟೈರ್ಗಳು ಭಸ್ಮವಾಗಿವೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ ನಡೆದಿದೆ. ಶಾಫ್ಟ್ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಅಗ್ನಿ ಅವಘಡ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬೆಂಕಿ ಅವಘಡದ ಸ್ಥಳದ ಪಕ್ಕದಲ್ಲೇ ಮದ್ದಿನ ಮನೆ ಇರುವುದರಿಂದ ಅಪಾಯ ಹೆಚ್ಚಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಳೆದ ಎರಡು ಗಂಟೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ
ಇದನ್ನೂ ಓದಿ: ರಬಕವಿ-ಬನಹಟ್ಟಿಯಲ್ಲಿ ಕಿರಾಣಾ ಅಂಗಡಿಯೊಂದು ಸುಟ್ಟು ಹೋಗುತ್ತಿದ್ದರೂ ಅಗ್ನಿಶಾಮಕ ದಳಕ್ಕೆ ಯಾರೋ ಫೋನ್ ಮಾಡಲ್ಲ!