ದಾವಣಗೆರೆ: ಕೆಲವರು ಸಿಎಂ ಆಗಬೇಕು ಎಂದು ತಿರುಕನ ಕನಸು ಕಾಣ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ ವಿರುದ್ಧ ಮತ್ತೆ ಶಾಸಕ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ.. ಅವರಿಗೆ ಒಬ್ಬ ಪಕ್ಕದ ಕ್ಷೇತ್ರದ ಶಾಸಕನನ್ನ ಗೆಲ್ಲಿಸುವ ತಾಖತ್ತು ಇಲ್ಲ. ಅವರು ನಾನೇ ಸಿಎಂ ಆಗಿಯೇ ಬಿಟ್ಟೆ ಅನ್ನೋ ರೀತಿಯಲ್ಲಿ ಸೂಟು ಬೂಟು ಹೊಲಿಸಿಕೊಂಡು ರೆಡಿಯಾಗಿದ್ರು. ಆದರೆ ಈಗ ಅರುಣ್ ಸಿಂಗ್ ಅವರಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ ಎಂದರು.

65 ಶಾಸಕರ ಸಹಿ ಸಂಗ್ರಹ ಮಾಡಿರೋ ವಿಚಾರದ ಬಗ್ಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಶಾಸಕರ ಸಹಿ ಹೊಂದಿದ ಒಂದು ಕಾಪಿ ಕನ್ನಡದಲ್ಲೆ ರಾಜ್ಯಾಧ್ಯಕ್ಷರಿಗೆ ಮಾಡಿಸಿದ್ದೆ. ಇಂಗ್ಲಿಷ್ ಪ್ರತಿಗಳನ್ನ ಮೋದಿಯವರಿಗೆ, ರಾಷ್ಟ್ರಾಧ್ಯಕ್ಷರಿಗೆ, ಅರುಣ್ ಸಿಂಗ್ ಅವರಿಗೆ ಮಾಡಿಸಿದ್ದೆ.

ಆದರೆ ರಾಜ್ಯಾಧ್ಯಕ್ಷರು ಹಾಗೂ ಯಡಿಯೂರಪ್ಪ ಅವರು ಬೇಡ ಅಂದ್ರು ಅದಕ್ಕೆ ಬಿಟ್ಟೆ. ಕೆಲವರು ಕಾಮಗಾರಿ ಕೆಲಸಗಳ ಫೈಲ್ ಹಿಡಿದು ಓಡಾಡಿದ್ದಾರೆ, ಅಪ ಪ್ರಚಾರ ಮಾಡಿದ್ದಾರೆ. ನಾನು ಹುಲಿ ವೇಷ ಹಾಕಿದ್ದೇನೆ ಅಂತ ಹೇಳಿದ್ರು. ಇವರು ಯಡಿಯೂರಪ್ಪ ವಿರುದ್ಧ ಏನು ಷಡ್ಯಂತ್ರ ಮಾಡಿದ್ದಾರೆ ನಂಗೆ ಗೊತ್ತಿದೆ. ಇವರು ರಾಜ್ಯಾಧ್ಯಕ್ಷರಾಗಿದ್ದಾಗ ನನ್ನನ್ನು ದೆಹಲಿಗೆ ಕರೆಯಿಸಿ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ರು.

ಸಂಗೋಳ್ಳಿ ರಾಯಣ್ಣ ಬ್ರೀಗೆಡ್ ಮಾಡಿದ್ದರಿಂದಲೇ ನಮ್ಮ ಪಕ್ಷ 104ಕ್ಕೆ ಕುಸಿಯಿತು. ಇಲ್ಲದಿದ್ದರೆ ನಮ್ಮ ಪಕ್ಷ 130 ಸ್ಥಾನಗಳನ್ಮ ಗಳಿಸುತಿತ್ತು ಎಂದು ಈಶ್ಬರಪ್ಪ, ಅರವಿಂದ ಬೆಲ್ಲದ ವಿರುದ್ಧ ರೇಣುಕಾಚಾರ್ಯ ಗುಡುಗಿದ್ದಾರೆ.

The post ‘ರಾಯಣ್ಣ ಬ್ರೀಗೆಡ್ ಮಾಡಿದ್ದರಿಂದಲೇ ನಮ್ಮ ಪಕ್ಷ 104ಕ್ಕೆ ಕುಸಿಯಿತು’ appeared first on News First Kannada.

Source: newsfirstlive.com

Source link