ರಾಯಬಾಗ್ ಉರಗ ತಜ್ಞ ಹಾವಿಂದ ಮೂರು ಬಾರಿ ಕಚ್ಚಿಸಿಕೊಂಡರೂ ಬದುಕುಳಿದಿದ್ದಾನೆ! | Despite bitten three times by a snake this self proclaimed snake expert is aliveಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

TV9kannada Web Team


| Edited By: Arun Belly

Sep 14, 2022 | 2:28 PM
ಬೆಳಗಾವಿ: ಈ ವ್ಯಕ್ತಿ ಸ್ವಯಂ ಘೋಷಿ ಉರಗ ತಜ್ಞ (snake expert) ಮಾರಾಯ್ರೇ. ಮೊದಲು ಆತನ ಪರಿಚಯ ಹೇಳ್ತೀವಿ. ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಫಾಲಬಾವಿ ಗ್ರಾಮದ ನಿವಾಸಿ ಮತ್ತು ಹೆಸರು ರಮೇಶ್ ಬಾಗಡೆ (Ramesh Bagade). ವಿಡಿಯೋನಲ್ಲಿ ಭಾರೀ ಗಾತ್ರದ ಹಾವೊಂದನ್ನು ಆತ ಹಿಡಿದಿದ್ದು ನಿಮಗೆ ಕಾಣಿಸುತ್ತದೆ. ಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ (venom) ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿಡಿಯೋದ ಎರಡನೇ ಭಾಗದಲ್ಲಿ ಅವನೇ ಹೇಳುವಂತೆ ಅವನಿಗೆ ಹಾವಿನ ವಿಷ ಏರುವುದಿಲ್ಲ.

TV9 Kannada


Leave a Reply

Your email address will not be published.