ರಾಯಚೂರು: ರಾಯಲಸೀಮಾ ಹಾಗೂ ತೆಲಂಗಾಣ ರೈತರ ನಡುವೆ ನೀರಿಗಾಗಿ ಸಂಘರ್ಷ ನಡೆದಿದ್ದು, ಪೊಲೀಸರು ಎಚ್ಚೆತ್ತುಕೊಂಡಿದ್ರಿಂದ ಭಾರೀ ಅನಾಹುತ ತಪ್ಪಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲಬಂಡಾ ಜಲಾಶಯದ ಕಾಲುವೆ ವಿಚಾರವಾಗಿ ಈ ಸಂಘರ್ಷ ನಡೆದಿದ್ದು, ರಾಜಲಬಂಡಾ ಜಲಾಶಯದಿಂದ ರಾಯಲಸೀಮಾ ಕಡೆ ಕಾಲುವೆ ನಿರ್ಮಾಣ ಮಾಡಲಾಗ್ತಿದೆ. ಈ ಕಾಲುವೆಗೆ ನೀರು ಬಿಟ್ರೆ ನಮ್ ಕಡೆ ನೀರು ಬರಲ್ಲ ಅನ್ನೋ ಆತಂಕದಲ್ಲಿ ತೆಲಂಗಾಣ ರೈತರು, ಕಾಲುವೆ ಕಾಮಗಾರಿ ನಿಲ್ಲಿಸಲು ನೂರಾರು ಸಂಖ್ಯೆಯಲ್ಲಿ ಬಂದಿದ್ರು.

ಈ ವಿಷಯ ತಿಳಿದು ಅದೇ ಸ್ಥಳಕ್ಕೆ ಧಾವಿಸಲು ರಾಯಲಸೀಮಾ ರೈತರು ಮುಂದಾಗಿದ್ದು.. ಜಿಲ್ಲೆಯ ಕೊತ್ತದೊಡ್ಡಿ ಚೆಕ್ ಪೋಸ್ಟ್​ನಲ್ಲೇ ತೆಲಂಗಾಣ ರೈತರನ್ನ ರಾಯಚೂರು ಪೊಲೀಸರು ತಡೆದಿದ್ದಾರೆ. ಪೊಲೀಸರು ರೈತರನ್ನ ತಡೆದಿದ್ರಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜಲಬಂಡಾ ಜಲಾಶಯದ ಸಮೀಪ ಮಾನ್ವಿ ಪೊಲೀಸರ ನಿಯೋಜನೆ ಮಾಡಲಾಗಿದೆ.

The post ರಾಯಲಸೀಮಾ & ತೆಲಂಗಾಣ ರೈತರ ನಡುವೆ ನೀರಿಗಾಗಿ ಜಟಾಪಟಿ.. ಮುಂದೇನಾಯ್ತು..? appeared first on News First Kannada.

Source: newsfirstlive.com

Source link