ರಾಯಲ್ ಎನ್​ಫೀಲ್ಡ್​ ಮತ್ತು ಕೆಟಿಎಮ್ 250 ಒಂದಿಗೆ ಸ್ಪರ್ಧೆಗೆ ಬೀಳಲು ಬಂತು ಹಿರೋ ಎಕ್ಸ್​ಪಲ್ಸ್​ 200 4ವಿ!

Hero XPulse 200 4V

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಮ್ 250 ಅಡ್ವೆಂಚರ್ ಬೈಕ್ಗಳಿಗೆ ಪ್ರತಿಸ್ಪರ್ಧಿಯಾಗಿ ಹಿರೋ ಮೊಟೊಕಾರ್ಪ್ ತನ್ನ ಹೊಸ ಹಿರೋ ಎಕ್ಸ್​ಪಲ್ಸ್ 200 4ವಿಯನ್ನು ಲಾಂಚ್ ಮಾಡಿದೆ ಮಾರಾಯ್ರೇ. ಹೊಸ ಹಿರೋ ಎಕ್ಸ್​ಪಲ್ಸ್200 4ವಿ ಬೈಕ್ ಹಿರೋ ಹೊಂಡ ಎಕ್ಸ್​ಪಲ್ಸ್200 ಎಸ್ ಮತ್ತು ಹಿರೋ ಎಕ್ಸ್​ಪಲ್ಸ್ ಟಿ ಕಂಪನಿಯ ಎಕ್ಸ್ಪಲ್ಸ್ ರೇಂಜಿನ ಶ್ರೇಣಿಗೆ ಸೇರ್ಪಡೆಯಾಗುತ್ತಿದೆ. 2021 ಹಿರೋ ಎಕ್ಸ್​ಪಲ್ಸ್ 200 4ವಿ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅವಗಳಲ್ಲಿ ಪ್ರಮುಖ ಆಕರ್ಷಣೆ ಎಂದರೆ, ಎಕ್ಸ್​ಪಲ್ಸ್200 ಆವೃತ್ತಿ ಬೈಕ್ಗಳಿಗಿಂತ ಶೇಕಡಾ 6 ರಷ್ಟು ಹೆಚ್ಚು ಬಲ ನೀಡುವ ಮತ್ತು 5 ಪರ್ಸೆಂಟ್ ನಷ್ಟು ಹೆಚ್ಚುವರಿ ಟಾರ್ಕ್ ಉತ್ಪಾದಿಸುವ 4-ವಾಲ್ವ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಿರೋದು. ರಾಯಲ್ ಎನ್​ಫೀಲ್ಡ್​​ ಹಿಮಾಲಯನ್ ಮತ್ತು ಕೆಟಿಎಮ್ 250 ಅಡ್ವೆಂಚರ್ ಬೈಕ್​​ಗಳಿಗೆ ಸೆಡ್ಡು ಹೊಡೆಯಲಿರುವುದರಿಂದ ಹಿರೋ ಎಕ್ಸ್ಪಲ್ಸ್ 200 4ವಿ ಹೆಚ್ಚಿನ ಸಾಮರ್ಥ್ಯದ ಆಫ್-ರೋಡರ್ ಆಗಿದೆ.

ಅಂದಹಾಗೆ ಹಿರೋ ಎಕ್ಸ್​ಪಲ್ಸ್ 200 4ವಿ ಬೆಲೆ ಎಷ್ಟಿರಬಹುದೆಂದು ತಿಳಿದುಕೊಳ್ಳುವುದು ಸಹ ಅವಶ್ಯಕವಾಗಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ 1,28,150 ರೂ. ಆಗಿದೆ.

ಆಗಲೇ ಹೇಳಿದ ಹಾಗೆ ಹೊಸ ಹೀರೋ ಎಕ್ಸ್ ಪಲ್ಸ್ 200 4 ವಿ ಈಗ ಬಿಎಸ್ 6 200 ಸಿಸಿ, 4 ವಾಲ್ವ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 19.1 ಬಿಹೆಚ್ ಪಿ @8500 ಆರ್ ಪಿಎಂ ಮತ್ತು 17.35 ಎನ್ಎಂ @6500 ಆರ್ ಪಿಎಂ ಟಾರ್ಕ್ ಉತ್ಪಾದಿಸುತ್ತದೆ. 4-ವಾಲ್ವ್ ಆಯಿಲ್-ಕೂಲ್ಡ್ ಎಂಜಿನ್ ಮಿಡ್ ಮತ್ತು ಟಾಪ್-ಎಂಡ್ ಸ್ಪೀಡ್ ರೇಂಜ್ ನಲ್ಲಿ ಉನ್ನತ ಶಕ್ತಿಯನ್ನು ಒದಗಿಸುತ್ತದೆ, ಜೊತೆಗೆ ಹೆಚ್ಚಿನ ವೇಗದಲ್ಲಿ ಕಂಪನಗಳನ್ನು ಕಡಿಮೆ ಮಾಡುತ್ತದೆ.

ಭಾರೀ ದಟ್ಟಣೆಯಲ್ಲಿ ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು ಈಗ 7 ಫಿನ್ ಆಯಿಲ್ ಕೂಲರ್‌ನೊಂದಿಗೆ ನವೀಕರಿಸಲಾಗಿದೆ, ಇದು ಪ್ರಸರಣ ಸೆಟಪ್ ಅನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ಉತ್ತಮ ಶಕ್ತಿ ಮತ್ತು ಬಾಳಿಕೆಯನ್ನು ನೀಡುತ್ತದೆ ಆದರೆ ಗೇರ್ ಅನುಪಾತವನ್ನು ಉತ್ತಮ ವೇಗವರ್ಧನೆಗೆ ನವೀಕರಿಸಲಾಗಿದೆ ಎಂದು ಹಿರೋ ಮೊಟೋಕಾರ್ಪ್ ಕಂಪನಿ ಹೇಳಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ವಿಡಿಯೋ ಮಾಡಲು ಹೋದವರನ್ನು ಅಟ್ಟಾಡಿಸಿದ ಕಾಡಾನೆ! ದೃಶ್ಯ ನೋಡಿ

TV9 Kannada

Leave a comment

Your email address will not be published. Required fields are marked *