ಸ್ಯಾಂಡಲ್​​ವುಡ್​​ನ ಅಚ್ಚು ಮೆಚ್ಚಿನ ರಚ್ಚು ಬೇಬಿ ಸದ್ದಿಲ್ಲದೆ ಶಬರಿಯಾಗಲು ಹೊರಟ್ಟಿದ್ದಾರೆ. ಶಬರಿಯಾಗಿ ಶ್ರೀರಾಮನನ್ನ ಹುಡುಕೋ ಬದ್ಲು ರಾವಣನನ್ನ ಹುಡುಕಲು ಸನ್ನದ್ಧರಾಗಿದ್ದಾರೆ.

ನೋಡ ನೊಡುತ್ತಿದಂಗೆ 36ನೇ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಬುಲ್ ಬುಲ್ ರಚಿತಾ ರಾಮ್. ಕೇವಲ ಎಂಟೇ ವರ್ಷಗಳಲ್ಲಿ ಸ್ಟಾರ್ ನಟಿಯಾಗಿ ಎಲ್ಲಾ ಸ್ಟಾರ್ ನಟರ ಜೊತೆಗೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನರ್ತಿಸೋದು ನಿಜಕ್ಕೂ ರಚಿತಾ ಅವರದ್ದು ಸಿನಿ ಸಾಧನೆಯೇ ಸರಿ.
ಇತ್ತೀಚೆಗೆ ಸ್ಟಾರ್ ನಟರ ಸಿನಿಮಾಗಳ ಜೊತೆ ಜೊತೆಗೆ ಡಿಫರೆಂಟ್ ಸಿನಿಮಾಗಳಲ್ಲೂ ನಟಿಸಲು ಒಪ್ಪಿರೋ ರಚಿತಾ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವುಗಳಲ್ಲೊಂದು ‘‘ಶಬರಿ ಸರ್ಚಿಂಗ್ ಫಾರ್ ರಾವಣ’’.

‘‘ಶಬರಿ ಸರ್ಚಿಂಗ್ ಫಾರ್ ರಾವಣ’’ ಸಿನಿಮಾದ ಪೋಸ್ಟರ್ ಬಿಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದ ರಚ್ಚು ಸದ್ದಿಲ್ಲದೆ ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದಾರೆ. ಯುವ ಪ್ರತಿಭೆ ಕಿರಣ್ ಎಂಬೋ ಹೊಸ ನಿರ್ದೇಶಕನ ಕಲ್ಪನೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಡಿಫ​ರೆಂಟ್ ಫೊಸ್ಟರ್​​​ನಿಂದ ಗಮನ ಸೇಳೆದಿರುವ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದಲ್ಲಿ ರಘು ಮುಖರ್ಜಿ ಅಭಿನಯಿಸುತ್ತಿದ್ದಾರೆ..ರಘು ಅವರದ್ದು ರಾಮನ ಪಾತ್ರವೋ ರಾವಣನ ಮುಖವಾಡದ ಪಾತ್ರವೋ ಗೊತ್ತಿಲ್ಲ.. ಒಟ್ಟಿನಲ್ಲಿ ರಚಿತಾ ರಾಮ್ ಅವರ 36ನೇ ಸಿನಿಮಾದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

 

View this post on Instagram

 

A post shared by Rachita Ram (@rachita_instaofficial)

The post ರಾವಣನಿಗಾಗಿ ಶಬರಿಯ ಸರ್ಚಿಂಗ್ ಶುರು.. ಮುಹೂರ್ತ ನೆರವೇರಿಸಿದ ಚಿತ್ರತಂಡ appeared first on News First Kannada.

Source: newsfirstlive.com

Source link