ರಾಷ್ಟಪತಿಗಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿ ಪದ್ಮಶ್ರೀ ಸ್ವೀಕರಿಸಿದ ಓಡಿಶಾದ ಅಕ್ಷರ ಸಂತ


ನವದೆಹಲಿ: ಈ ಬಾರಿಯ ಪದ್ಮ ಪುರಸ್ಕಾರಗಳ ಕಾರ್ಯಕ್ರಮ ಸಾಕಷ್ಟು ವಿಚಾರಗಳಿಂದ ವಿಶೇಷತೆಯಿಂದ ಕೂಡಿದೆ. ಹೌದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಓಡಿಶಾದ 102 ವರ್ಷದ ಶ್ರೀ ನಂದಾ ಪ್ರಸ್ಟಿ ಅವರು ರಾಷ್ಟೊತಿಯಿಂದ ಪ್ರಶಸ್ತಿ ಸ್ವೀಕಾರ ಮಾಡಿ ಅವರಿಗೆ ತಲೆ ಮುಟ್ಟಿ ಹಾರೈಸಿದ್ದಾರೆ.

102 ವರ್ಷದ ಶ್ರೀ ನಂದಾ ಪ್ರಸ್ಟಿ ಅವರು ಒಡಿಶಾದ ಜಾಜ್‌ಪುರ್‌ನಲ್ಲಿ ಹಲವಾರು ದಶಕಗಳಿಂದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹಲವಾರು ಮಕ್ಕಳಿಗೆ ಮತ್ತು ವಯಸ್ಕರಿಗೆ ಉಚಿತ ಶಿಕ್ಷಣ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ. ಹೀಗಾಗಿ ಇವರನ್ನು ಜನ ಪ್ರೀತಿಯಿಂದ “ನಂದಾ ಸರ್” ಎಂದೇ ಕರೆಯುತ್ತಾರೆ.

ಇವರು ಓದಿದ್ದು ಕೇವಲ 7ನೇ ತರಗತಿ. ಮನೆಯಲ್ಲಿನ ಹಲವಾರು ಅಡೆತಡೆಗಳಿಂದ ಮುಂದಿನ ಓದು ಸಾಧ್ಯವಾಗದೇ ಅರ್ಧಕ್ಕೆ ನಿಲ್ಲಿಸಿದ್ದ ಅವರು ಸಾಕ್ಷರತೆಯ ಬೆಳಕನ್ನು ಹಚ್ಚವಲ್ಲಿ ನಿರತರಾದರು. ಜಿಲ್ಲೆಯ ಕಂಠೀರ ಗ್ರಾಮದ ತಮ್ಮ ಮನೆಯ ಸುತ್ತಮುತ್ತ ಮಕ್ಕಳಿಗೆ ಹಾಗೂ ಹಿರಿಯರಿಗೆ ಪಾಠ ಮಾಡುತ್ತಾ ತಮ್ಮದೆಯಾದ ಸೇವೆಯನ್ನ ಸಲ್ಲಿಸುತ್ತಾ ಬಂದವರು.

ಮುಂದೆ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನಿರ್ಧರಿಸಿದ ಅವರು ಸಾಕ್ಷರತೆ ಹರಡುವ ಕಾರ್ಯವನ್ನು ಆರಂಭಿಸಿದ್ದರು. ತಮ್ಮ ಊರಿನ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದ ಅವರು ಇಂದಿಗೂ ಯಾರಿಂದಲೂ ಒಂದು ರೂಪಾಯಿಯನ್ನು ಬೇಡದೇ ಶಿಕ್ಷಣ ನೀಡಿದ್ದಾರೆ. ನನಗೆ ಬೇಕಾಗಿರೋದು ಮಕ್ಕಳು ದೊಡ್ಡವರಾಗಿ ಒಳ್ಳೇಯರಾಗೋದು ಅರೆ ಕ್ಷಣದ ಖುಷಿ ನೀಡುವ ಹಣವಲ್ಲ ಎಂದು ಅವರು ಹೇಳುತ್ತಿದ್ದರು . ಅವರ ಈ ನಿಸ್ವಾರ್ಥ ಸೇವೆಯನ್ನ ಗಮನಿಸಿ ಭಾರತ ಸರ್ಕಾರ ಪ್ರತಿಷ್ಠಿತ ಗೌರವವನ್ನು ನೀಡಿದೆ.

News First Live Kannada


Leave a Reply

Your email address will not be published. Required fields are marked *