
ಬರಗೂರು ರಾಮಚಂದ್ರಪ್ಪ
ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿರುವ ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪಠ್ಯ ಪರಿಷ್ಕರಣೆ ವೇಳೆ ಬರೆದದ್ದಲ್ಲ.
ಬೆಂಗಳೂರು: ರಾಷ್ಟ್ರಕವಿ ಕುವೆಂಪು(Kuvempu) ಅವರನ್ನು ಪರಿಚಯಿಸುವ ವಿಚಾರದಲ್ಲಿ ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಉಲ್ಲೇಖ ಮಾಡಲಾಗಿದೆ. ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಸೇರಿರುವ ಈ ಉಲ್ಲೇಖ ಕುವೆಂಪು ಬಗ್ಗೆ ಹೀಗೆ ಬರೆದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸದ್ಯ ಈ ಬಗ್ಗೆ ಬರಗೂರು ರಾಮಚಂದ್ರಪ್ಪ(Baraguru Ramachandrappa) ಸ್ಪಷ್ಟನೆ ನೀಡಿದ್ದಾರೆ. ಈ ಸಾಲು ತಮ್ಮ ಕಾಲದಲ್ಲಿ ಬರೆದಿದ್ದಲ್ಲ ಎಂದು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿಯ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿರುವ ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪಠ್ಯ ಪರಿಷ್ಕರಣೆ ವೇಳೆ ಬರೆದದ್ದಲ್ಲ. ಕುವೆಂಪು ಅವರ ಮನುಜ ಮತ, ವಿಶ್ವಪಥ ಬೆಳಕಿನಲ್ಲಿ ಸಾಗುತ್ತಿರುವವನು ನಾನು. ನಾನು ಮತ್ತು ನನ್ನಂಥವರು ಕುವೆಂಪು ಅವರ ಅಪೂರ್ವ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ. ಪಠ್ಯ ಪುಸ್ತಕ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ಸಿಎಂ ಮಧ್ಯಪ್ರವೇಶಿಸಬೇಕು. ಜನರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಮ್ಮ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಕುವೆಂಪು ಬಗ್ಗೆ ಬರೆದ ಪರಿಚಯವನ್ನು ಬರಗೂರು ರಾಮಚಂದ್ರಪ್ಪ ನೀಡಿದ್ದಾರೆ.