ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಈಶ್ವರಪ್ಪ ಮೇಲೆ ದೇಶದ್ರೋಹದ ಕೇಸ್​​ ಹಾಕಿ.. ಸಿದ್ದರಾಮಯ್ಯ


ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆಯಾದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಸಚಿವ ಕೆ.ಎಸ್​​ ಈಶ್ವರಪ್ಪ ಹಿರಿಯ ರಾಜಕಾರಣಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡೋದು ಅಕ್ಷಮ್ಯ ಅಪರಾಧ. 100 ವರ್ಷವಾಗಲೀ, 200 ವರ್ಷವಾಗಲೀ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದಿದ್ದಾರೆ ಈಶ್ವರಪ್ಪ. ಇದು ಖಂಡನೀಯ ಎಂದು ಹೇಳಿದರು.

ಕೆ.ಎಸ್​ ಈಶ್ವರಪ್ಪ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಬಿಜೆಪಿ ಯಾವ ನಾಯಕರು ಮಾತಾಡಲಿಲ್ಲ. ನಾವು ಈ ಬಗ್ಗೆ ವಿಧಾನಸಭೆ ಪ್ರಸ್ತಾಪ ಮಾಡಿದ್ದೇವೆ. ಆದರೆ, ಸಚಿವ ಮಾಧುಸ್ವಾಮಿ ಈಶ್ವರಪ್ಪ ಅವರನ್ನು ಸಮರ್ಥಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇನ್ನು, ಸದನದಲ್ಲೇ ಡಿ.ಕೆ ಶಿವಕುಮಾರ್​​​ ತಂದೆ ಬಗ್ಗೆ ಏಕವಚನದಲ್ಲಿ ಮಾತಾಡಿದರು ಈಶ್ವರಪ್ಪ. ನಾನು ಇದನ್ನು ಖಂಡಿಸುತ್ತೇನೆ. ಯಾರೇ ಆಗಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ, ಸಂವಿಧಾನಕ್ಕೆ ಅಗೌರವ ತೋರಿದರೆ, ರಾಷ್ಟ್ರಗೀತೆಗೆ ಅಪಮಾನ ಮಾಡಿದರೆ ಸೆಡಿಷನ್​ ಕೇಸ್​ ಹಾಕಬೇಕು. ಈಗ ಈಶ್ವರಪ್ಪನ ಮೇಲೆ ದೇಶದ್ರೋಹದ ಕೇಸ್​ ಹಾಕಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.

News First Live Kannada


Leave a Reply

Your email address will not be published. Required fields are marked *