ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಪದ್ಮಶ್ರೀ ಸ್ವೀಕರಿಸಿದ ಜೋಗತಿ ಮಂಜಮ್ಮ..ದೃಷ್ಟಿ ತೆಗೆದಿದ್ದು ಯಾಕೆ ಗೊತ್ತಾ?


ನವದೆಹಲಿ: ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಜಮ್ಮ. ಬಿ. ಜೋಗತಿ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆ ಕಾರ್ಯಕ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.

ಆದರೆ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿ ಭವನದ ಸಭಾಂಗಣ ಒಂದು ಅಪರೂಪದದ ಕ್ಷಣಕ್ಕೆ ಸಾಕ್ಷಿಯಾಯ್ತು. ಹೌದು ಮಂಜಮ್ಮ ಜೋಗತಿ ಪ್ರಶಸ್ತಿ ಸ್ವೀಕಾರಕ್ಕೆ ವೇದಿಕೆಗೆ ಬಂದ ಬಳಿಕ ರಾಷ್ಟ್ರಪತಿಯವರಿಗೆ ಆಕಳಿಕೆ (ದೃಷ್ಟಿ)ತೆಗೆದಿದ್ದಾರೆ. ಈ ವೇಳೆ ಅಚ್ಚರಿಯಿಂದ ನೋಡಿದ ರಾಷ್ಟ್ರಪತಿಗಳು ಮಂಜಮ್ಮ ಅವರ ಹಾವಭಾವಗಳಿಗೆ ಬೆರೆಗಾಗಿದ್ದಾರೆ.

ಪ್ರಶಸ್ತಿ ಸ್ವೀಕಾರದ ಬಳಿಕ ನ್ಯೂಸ್​ಫಸ್ಟ್​ನ ಜೊತೆ ಸಂತಸ ಹಂಚಿಕೊಂಡ ಮಂಜಮ್ಮ ಅವರು ಪ್ರಶಸ್ತಿ ಬಂದಿರೋದಕ್ಕ ತುಂಬಾ ಸಂತೋಷವಾಗಿದೆ. ತನ್ನನ್ನು ಗುರ್ತಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅಷ್ಟೇ ಅಲ್ಲದೆ ವೇದಿಕೆ ಮೇಲೆ ದೃಷ್ಟಿ ತೆಗೆದಿದ್ದರ ಕುರಿತು ಅವರು ಮಾತನಾಡಿದರು.

ಇದನ್ನೂ ಓದಿ:ವಿವಿಧತೆಯಲ್ಲಿ ಏಕತೆ; ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಹಾರೈಸಿ ಪದ್ಮಶ್ರೀ ಸ್ವೀಕರಿಸಿದ ಜೋಗತಿ ಮಂಜಮ್ಮ

ದೃಷ್ಟಿ ತೆಗೆಯುವುದು ಉತ್ತರ ಕರ್ನಾಟಕದಲ್ಲಿ ಬಹು ಪರಿಚಿತವಾದದ್ದು. ಅದು ಒಂದು ಸಂಪ್ರದಾಯ ಚಿಕ್ಕ ಮಕ್ಕಳಿಗೆ ದೊಡ್ಡವರಿಗೆ ವಿಶೇಷ ಸಂದರ್ಭದಲ್ಲಿ ನಮ್ಮಂತವರಿಂದ ಇದನ್ನು ಮಾಡಿಸಲಾಗುತ್ತದೆ. ಇನ್ನು ವೇದಿಕೆಯ ಮೇಲೆ ರಾಷ್ಟ್ರಪತಿಗಳಿಗೆ ನಿವಾಳಿಸಿದಾಗ ಅವರು ಅಚ್ಚರಿಗೊಂಡು ಹಿಂದಿಯಲ್ಲಿ ‘ಯೇ ಕ್ಯಾ ಹೈ’ ಎಂದರು. ಆಗ ನಾನು ನೀವು ಮೂರು ದಿನಗಳಿಂದ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು ನಿಮ್ಮ ಮೇಲೆ ಸಾಕಷ್ಟು ದೃಷ್ಟಿಯಾಗಿರುತ್ತೆ.. ಹೀಗಾಗಿ ನಾನು ದೃಷ್ಟಿ ತೆಗೆದೆ ಎಂದಾಗ ಅವರು ನಗುತ್ತಲೇ ಧನ್ಯವಾದಗಳ್ನು ಹೇಳಿದರು ಎಂದು ಮಂಜಮ್ಮ ಅವರು ನಗುತ್ತಲೇ ತಿಳಿಸಿದರು.

News First Live Kannada


Leave a Reply

Your email address will not be published. Required fields are marked *