ಕೋವಿಡ್ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 104 ವರ್ಷದ ಪದ್ಮಶ್ರೀ ಪುರಸ್ಕೃತ ಒಡಿಶಾದ ಅಕ್ಷರ ಸಂತ ನಂದಾ ಸರ್ ಖ್ಯಾತಿಯ ನಂದಕಿಶೋರ್ ಪ್ರಸ್ಟಿ ವಿಧಿವಶರಾಗಿದ್ದಾರೆ.
ಕಳೆದ ನವೆಂಬರ್ 27 ರಿಂದ ಕೋವಿಡ್ ಸೋಂಕು ತಗುಲಿದ ಪರಿಣಾಮ ಅವರನ್ನು ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು ಸಂಜೆ ಕೊನೆಯಿಸಿರೆಳದಿದ್ದಾರೆ.
ಒಡಿಶಾದ ಅಕ್ಷರ ಸಂತ ಎಂದೇ ಖ್ಯಾತರಾಗಿದ್ದ ಇವರು ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದರು. ತಮ್ಮ 100 ನೇ ವಯಸಿನವರೆಗೂ ಅವರು ಈ ಕಾರ್ಯವನ್ನು ನಡೆಸಿಕೊಂಡು ಬಂದು 30 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಿ ಅಕ್ಷರ ಕ್ರಾಂತಿಯನ್ನೇ ಸಾರಿದ್ದರು. ಇವರ ಈ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ ಇವರಿಗೆ 2020ನೇ ಸಾಲಿನ ದೇಶದ ಅತ್ಯುನ್ನತ ಪುರಸ್ಕಾರ ಪದ್ಮಶ್ರೀಯನ್ನು ನೀಡಿ ಗೌರವಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯಾತಿಗಣ್ಯರು ನಂದಾ ಮಾಸ್ಟರ್ ಸಾವಿಗೆ ಕಂಬನಿ ಮಿಡಿದಿದ್ದಾರೆ.