ಡಾ.ರಾಜ್‌ಕುಮಾರ್ ತಮ್ಮ 50 ವರ್ಷದ ಸಿನಿ ಪಯಣದ ಉದ್ದಕ್ಕೂ ಫಿಟ್‌ನೆಸ್‌ ಮೈಂಟೇನ್ ಮಾಡಿಕೊಂಡು ಬಂದಿದ್ದರು. ಅವರ ಫಿಟ್‌ನೆಸ್‌ ಸೀಕ್ರೆಟ್‌ ಮತ್ತೇನೂ ಅಲ್ಲ, ನಮ್ಮ ನೆಲದ ಶಕ್ತಿಯುತ ವ್ಯಾಯಾಮ ಕಲೆ ಯೋಗ. ಅಣ್ಣಾವ್ರಿಗೆ ಯೋಗ ಕಲಿಸಿಕೊಟ್ಟ ಗುರುವನ್ನೂ ಕೂಡ ಕೊರೊನಾ ಬಿಟ್ಟಿಲ್ಲ.

ಡಾ.ರಾಜ್‌ಕುಮಾರ್‌ ಕೇವಲ ನಟರಲ್ಲ ಯೋಗ ಸಾಧಕರು ಕೂಡ. ಕಠಿಣಾತಿ ಕಠಿಣ ಆಸನಗಳನ್ನ ಸರಾಗವಾಗಿ ಮಾಡ್ತಿದ್ದ ಡಾ.ರಾಜ್‌ಕುಮಾರ್‌, ಯೋಗವನ್ನ ಜೀವನದ ಭಾಗವಾಗಿ ಮಾಡಿಕೊಂಡಿದ್ದರು. ಅಂದ್ಹಾಗೇ, ಡಾ.ರಾಜ್‌ಗೆ ಯೋಗಾಸನ ಕಲಿಸಿಕೊಟ್ಟವರು ಹೊನ್ನಪ್ಪ ಫಕೀರಪ್ಪ ನಾಯ್ಕರ್‌. ದುಃಖದ ವಿಚಾರ ಏನಂದ್ರೆ, 90 ವರ್ಷದ ನಾಯ್ಕರ್ ಅವರ ಇಹಲೋಕದ ನಂಟನ್ನ ಕೊರೊನಾ ದೂರ ಮಾಡಿದೆ. ಹೌದು ಹೊನ್ನಪ್ಪ ಫಕೀರಪ್ಪ ನಾಯ್ಕರ್‌ ಇಂದು ನಿಧನ ಹೊಂದಿದ್ದಾರೆ.

ಡಾ.ರಾಜ್‌ಕುಮಾರ್ ಅವರ ಯೋಗಾಸನ ನೋಡಿ ಇಡೀ ದೇಶವೇ ಬೆರಗಾಗಿತ್ತು. ಸಿನಿಮಾ ನಟರೊಬ್ಬರು ಈ ರೀತಿ ಯೋಗಾಸನ ಮಾಡಲು ಸಾಧ್ಯವೇ ಅಂತಾ ಆಶ್ಚರ್ಯಗೊಂಡವರು ಹಲವರು. ಇದನ್ನ ಸಾಧ್ಯವಾಗಿಸಿದ್ದು, ಇದರ ಹಿಂದಿನ ಶಕ್ತಿ ಮತ್ತ್ಯಾರು ಅಲ್ಲ ಇದೇ ಹೊನ್ನಪ್ಪ ಫಕೀರಪ್ಪ ನಾಯ್ಕರ್‌.

ಕೊರೊನಾ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಪ್ಪ ಫಕೀರಪ್ಪ ನಾಯ್ಕರ್‌ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಗೇರಿದ್ದ ನಾಯ್ಕರ್ ಅವರು ರಾಷ್ಟ್ರಪತಿ ಪದಕ ವಿಜೇತರು. ಮೂಲತಃ ಧಾರವಾಡದವರಾದ ಇವರು ಕನಕಪುರ ರಸ್ತೆಯಲ್ಲಿ ಯೋಗಾಶ್ರಮವನ್ನೂ ನಡೆಸುತ್ತಿದ್ದರು.

ಡಾ.ರಾಜ್‌ಕುಮಾರ್ ಮಾತ್ರವಲ್ಲದೇ ಇಡೀ ಕುಟುಂಬಕ್ಕೆ ಯೋಗಸನ ಹೇಳಿಕೊಟ್ಟಿದ್ದರು ನಾಯ್ಕರ್‌. 1978ನೇ ಇಸವಿಯಿಂದ ಸತತ 28 ವರ್ಷ ಯೋಗಾಭ್ಯಾಸ ಮಾಡಿಸಿದವರು. ಇದೇ ಹೊನ್ನಪ್ಪ ಫಕೀರಪ್ಪ ನಾಯ್ಕರ್‌. ಇವರ ನಿಧನಕ್ಕೆ ಡಾ.ರಾಜ್‌ಕುಮಾರ್ ಕುಟುಂಬ ಕಂಬನಿ ಮಿಡಿದಿದೆ. ರಾಜ್ಯ ಕಂಡ ಯೋಗ ಸಾಧಕರೊಬ್ಬರು ಇಹಲೋಕ ತ್ಯಜಿಸಿರೋದು ನಿಜಕ್ಕೂ ದುಃಖದ ಸಂಗತಿ.

ಇದನ್ನೂ ಓದಿ:ಡಾ.ರಾಜ್​ಕುಮಾರ್​​ ಯೋಗ ಗುರು ಹೊನ್ನಪ್ಪ ನಾಯ್ಕರ್ ನಿಧನ

The post ರಾಷ್ಟ್ರಪತಿ ಪದಕ ವಿಜೇತ, ಅಣ್ಣಾವ್ರ ಯೋಗ ಗುರು ಮಾಸ್ಟರ್​​ ಹೊನ್ನಪ್ಪ ನಾಯ್ಕರ್‌ appeared first on News First Kannada.

Source: newsfirstlive.com

Source link