ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಕಲರವ.. ಪದ್ಮ ಪುರಸ್ಕಾರ ಪಡೆದು ಸಂತಸಪಟ್ಟ ಸಾಧಕರು


ಇಂದು ಮತ್ತು ನೆನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರದಾನ ಮಾಡಿದರು. ಈ ಸಲ 7 ಪದ್ಮವಿಭೂಷಣ. 10 ಪದ್ಮಭೂಷಣ. ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಮದು ಕೂಡ ಹಲವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ. ಗೃಹ ಮಂತ್ರಿ ಅಮಿತ್​ ಶಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪದ್ಮಶ್ರೀಯಲ್ಲಿ ಕನ್ನಡಿಗರು
ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಕರ್ನಾಟಕದ ಆರ್.ಲಕ್ಷ್ಮೀನಾರಾಯಣ ಕಶ್ಯಪ್‌ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಡಾ. ಬಿ. ಎನ್.‌ ಗಂಗಾಧರ್‌ (ವೈದ್ಯಕೀಯ) ವಿಜಯ್​ ಸಂಕೇಶ್ವರ್​. ಹಾಜಬ್ಬ(ಸಾಮಾಜಿಕ ಸೇವೆ) ತುಳಸಿಗೌಡ (ಸಾಮಾಜಿಕ ಸೇವೆ) ಎಂ.ಪಿ ಗಣೇಶ್​ (ಕ್ರೀಡೆ) ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.

The post ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಕಲರವ.. ಪದ್ಮ ಪುರಸ್ಕಾರ ಪಡೆದು ಸಂತಸಪಟ್ಟ ಸಾಧಕರು appeared first on News First Kannada.

News First Live Kannada


Leave a Reply

Your email address will not be published.