ರಾಷ್ಟ್ರಪತಿ ರಸ್ತೆಯಲ್ಲಿ ನಾಮಫಲಕ ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶ, ಯುವಕ ಸಾವು
ಮೈಸೂರು: ಮೈಸೂರು ಜಿಲ್ಲೆ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸ್ನೇಹಿತರ ಜೊತೆ ಸೇರಿ ಟ್ಯೂಷನ್ ನಾಮಫಲಕ ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶವಾಗಿ ಯುವಕ ಸಾವಿಗೀಡಾಗಿದ್ದಾನೆ. ತ್ಯಾಗರಾಜ ಕಾಲೋನಿಯ ಶ್ರೀನಿವಾಸ್(21) ಮೃತ ದುರ್ದೈವಿ. ವಿದ್ಯುತ್ ಶಾಕ್ನಿಂದ ಕುಸಿದುಬಿದ್ದು ಶ್ರೀನಿವಾಸ್ ಅಸ್ವಸ್ಥಗೊಂಡಿದ್ದ. ಸ್ನೇಹಿತರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ,