ರಾಷ್ಟ್ರಮಟ್ಟದಲ್ಲಿ ಮೋದಿ ಒಬ್ಬ ಪವಾಡಸದೃಶ ನಾಯಕನಾಗಿದ್ದಾರೆ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು | At national level Modi is a phenomenal leader says Vice President Venkaiah Naidu ARB


ರಾಷ್ಟ್ರಮಟ್ಟದಲ್ಲಿ ಮೋದಿ ಒಬ್ಬ ಪವಾಡಸದೃಶ ನಾಯಕನಾಗಿದ್ದಾರೆ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಪುಸ್ತಕ ಬಿಡುಗಡೆ ಮಾಡುತ್ತಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ ಪುಸ್ತಕವು ಆಧುನಿಕ ಭಾರತದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ನಾಯಕರಲ್ಲಿ ಒಬ್ಬರಾಗಿರುವ ಮೋದಿಯವರ ರಾಜಕೀಯ ಬದುಕು ವಿಕಸನಗೊಂಡ ಬಗ್ಗೆ ಒಂದು ವಿಹಂಗಮ ಚಿತ್ರಣ ನೀಡುತ್ತದೆ ಎಂದು ನಾಯ್ಡು ಹೇಳಿದರು.

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ಸಾಧ್ಯ ಅಂತ ವಿಶ್ವಕ್ಕೆ ತೋರಿಸಿಕೊಟ್ಟ ನಾಯಕನಾಗಿದ್ದಾರೆ ಎಂದು ಉಪ ರಾಷ್ಟ್ರಪತಿ ಎಮ್ ವೆಂಕಯ್ಯ ನಾಯ್ಡು (Vice President Venkaiah Naidu) ಅವರು ಬಣ್ಣಸಿದರು. ಬುಧವಾರ ನವದೆಹಲಿಯಲ್ಲಿ ನಡೆದ ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ ([email protected]: Dreams Meet Delivery) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತಾಡಿದ ನಾಯ್ಡು ಅವರು, ರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಪವಾಡಸದೃಶ ನಾಯಕರೆನಿಸಿಕೊಂಡಿದ್ದಾರೆ ಎಂದರು. ಮುಂದುವರಿದು ಮಾತಾಡಿದ ಉಪರಾಷ್ಟ್ರಪತಿಗಳು, ಕಳೆದ 20 ವರ್ಷಗಳ ಅವಧಿಯಲ್ಲಿ-13 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಗಳಾಗಿ ಕಳೆದ 8 ವರ್ಷಗಳ ಸಮಯದಲ್ಲಿ ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.

ಪುಸ್ತಕವನ್ನು ಕುರಿತು ಮಾತಾಡಿದ ಉಪರಾಷ್ಟ್ರಪತಿಗಳು ಮೋದಿಯವರು ತುಂಬಾ ನಿಕಟವಾಗಿ ಗುರುತಿಸಿಕೊಂಡಿರುವ ಉತ್ಕೃಷ್ಟವಾದ ಪರಿವರ್ತನಾ ನಾಯಕತ್ವ, ಕ್ರಿಯಾಶೀಲ ಧೋರಣೆ ಮತ್ತು ಒಂದು ಭಿನ್ನ ಬಗೆ ಚಿಂತನೆಯ ಆಯಾಮಗಳನ್ನು ಅದು ಪ್ರತಿಬಿಂಬಿಸುತ್ತದೆ ಎಂದರು. ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ ಒಂದು ಅಪೂರ್ವ ಸಂಗ್ರಹಗಳ ಪುಸ್ತಕವಾಗಿದೆ. ಆಧುನಿಕ ಭಾರತದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ನಾಯಕರಲ್ಲಿ ಒಬ್ಬರಾಗಿರುವ ಮೋದಿಯವರ ರಾಜಕೀಯ ಬದುಕು ವಿಕಸನಗೊಂಡ ಬಗ್ಗೆ ಒಂದು ವಿಹಂಗಮ ಚಿತ್ರಣ ನೀಡುತ್ತದೆ ಎಂದು ನಾಯ್ಡು ಹೇಳಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರು, ಸಾರ್ವಜನಿಕ ಬದುಕಿಗೆ ಮೋದಿಯವರು ನೀಡಿರುವ ಕೊಡುಗೆಯನ್ನು ವಿವರಿಸಿದರು. ಭೂಕಂಪದಿಂದ ತಲ್ಲಣಗೊಂಡಿದ್ದ ಗುಜರಾತಿನ ಮುಖ್ಯಮಂತ್ರಿಯಾಗುವ ಮೊದಲು ಅವರಿಗೆ ಒಂದು ಪಂಚಾಯತ್ ನಿರ್ವಹಿಸಿದ ಅನುಭವವೂ ಇರಲಿಲ್ಲ. ಆದಾಗ್ಯೂ ಅವರು ಅತ್ಯಂತ ಸಮರ್ಪಕವಾಗಿ ಆಡಳಿತ ನಡೆಸಿದರಲ್ಲದೆ ನಿರಂತರವಾಗಿ ಚುನಾವಣೆಗಳಲ್ಲಿ ಜಯಶೀಲರಾದರು ಅಂತ ಶಾ ಹೇಳಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಮಾತಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಭಿವೃದ್ಧಿ-ಕೇಂದ್ರಿತ ರಾಜತಾಂತ್ರಿಕತೆಯನ್ನು ಪ್ರತಿಪಾದಿಸಿದ್ದಾರೆ. ಭದ್ರತೆಗೆ ಸಂಬಂಧಿಸಿದ ಸವಾಲುಗಳೊಂದಿಗೆ ಅವರು ಬಾರ್ಡರ್ ಫ್ರ್ಯಾಕ್ಚರ್ ಅಭಿವೃದ್ಧಿಯತ್ತ ಗಮನ ಹರಿಸಿದರು ಎಂದು ಸಚಿವ ಜೈಶಂಕರ್ ಹೇಳಿದರು.

TV9 Kannada


Leave a Reply

Your email address will not be published. Required fields are marked *