ರಾಷ್ಟ್ರಾದ್ಯಂತ ಇಂದಿನಿಂದ ರೆಸಿಡೆಂಟ್​ ವೈದ್ಯರ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ನಾವು ಹೊಣೆಯಲ್ಲ ಎಂದ ಡಾಕ್ಟರ್ಸ್​ | Resident doctors have called for a nationwide strike against delay in NEET PG counselling


ರಾಷ್ಟ್ರಾದ್ಯಂತ ಇಂದಿನಿಂದ ರೆಸಿಡೆಂಟ್​ ವೈದ್ಯರ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ನಾವು ಹೊಣೆಯಲ್ಲ ಎಂದ ಡಾಕ್ಟರ್ಸ್​

ದೆಹಲಿಯಲ್ಲಿ ರೆಸಿಡೆಂಟ್​ ವೈದ್ಯರ ಮುಷ್ಕರ (ಫೋಟೋ-ಎಎನ್​ಐ)

ಇಂದಿನಿಂದ ರಾಷ್ಟ್ರವ್ಯಾಪಿ ರೆಸಿಡೆಂಟ್​ ವೈದ್ಯರುಗಳ ಮುಷ್ಕರ ಪ್ರಾರಂಭವಾಗಿದ್ದು, ಹೊರರೋಗಿಗಳ ಸೇವೆ(OPD)ಯಿಂದ ಹಿಂದೆ ಸರಿಯಲು ಅವರು ನಿರ್ಧಾರ ಮಾಡಿದ್ದಾರೆ.  ಇಂದಿನಿಂದ ಮುಷ್ಕರ ಶುರು ಮಾಡಲು ಕರೆ ನೀಡಿರುವ  ರೆಸಿಡೆಂಟ್​ ಡಾಕ್ಟರ್ಸ್ ಅಸೋಸಿಯೇಶನ್​  ಇಂಡಿಯಾ, ನಮ್ಮ ಮುಷ್ಕರಿಂದ ಆರೋಗ್ಯ ಸೇವೆಯಲ್ಲಿ ಉಂಟಾಗುವ ತೊಡಕು, ವ್ಯತ್ಯಯಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಹೇಳಿದ್ದಾರೆ. 

ಅಂದಹಾಗೆ ರೆಸಿಡೆಂಟ್​ ವೈದ್ಯರು, ನೀಟ್​ ಪಿಜಿ ಕೌನ್ಸೆಲಿಂಗ್​ ಮತ್ತು ಪ್ರವೇಶಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮುಷ್ಕರ ಶುರು ಮಾಡಿಕೊಂಡಿದ್ದಾರೆ. ನೀಟ್​ ಪಿಜಿ ಸ್ನಾತಕೋತ್ತರ ಮಟ್ಟದ ಪರೀಕ್ಷೆಯಾಗಿದ್ದು, ವೈದ್ಯರು ಸ್ನಾತಕೋತ್ತರ ಶಿಕ್ಷಣ ಮಾಡಲು ಈ ಪರೀಕ್ಷೆ ಬರೆಯಬೇಕು. ಈಗ ರೆಸಿಡೆಂಟ್ ವೈದ್ಯರು ಪರೀಕ್ಷೆ ಬರೆದಿದ್ದರೂ ಕೌನ್ಸಲಿಂಗ್​ ವಿಳಂಬ ಮಾಡುತ್ತಿರುವ ಕಾರಣ ಅವರಿಗೆ ಪ್ರವೇಶಾತಿ ವಿಳಂಬವಾಗುತ್ತಿದೆ. ಈ ಕೌನ್ಸೆಲಿಂಗ್​ನ್ನು ಅಕ್ಟೋಬರ್ 25ರಿಂದ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ನಡೆಯಲಿಲ್ಲ.

ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (EWS)ದ ಕ್ವೋಟಾ ಕುರಿತಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಇಡಬ್ಲ್ಯೂಎಸ್​ ವಿಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10 ಪರ್ಸಂಟ್​ ಸೀಟ್​ಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.  ಆದರೆ ಈ ಇವಿಎಸ್​ ವರ್ಗಕ್ಕೆ ಸೇರಿದವರು ಎಂದು ಗುರುತಿಸಲು ಕೇಂದ್ರ ಸರ್ಕಾರ ಹಾಕಿರುವ 8 ಲಕ್ಷ ರೂಪಾಯಿ ಆದಾಯದ ಮಿತಿಯ ಬಗ್ಗೆಯೂ ಸುಪ್ರೀಂಕೋರ್ಟ್ ಅನುಮಾನಿಸಿದೆ.  ಹಾಗಾಗಿ ಕೇಂದ್ರ ಸರ್ಕಾರ ಒಂದು ಕಮಿಟಿ ರಚಿಸಿ, ಇನ್ನು ನಾಲ್ಕು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ನೀಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಇನ್ನು ನಾಲ್ಕು ವಾರ ಎಂದರೆ ಒಂದು ತಿಂಗಳಂತೂ ಬೇಕು. ಅಂದಮೇಲೆ ಜನವರಿಯವರೆಗೂ ನೀಟ್ ಪಿಜಿ ಕೌನ್ಸೆಲಿಂಗ್ ನಡೆಯುವುದಿಲ್ಲ. ಕೌನ್ಸೆಲಿಂಗ್ ಆಗದೆ ಪ್ರವೇಶಾತಿಯೂ ಸಿಗುವುದಿಲ್ಲ. ಇನ್ನು ಆರ್ಥಿಕ ದುರ್ಬಲ ವರ್ಗ ಎಂದು ಪರಿಗಣಿಸಲು ಸದ್ಯ ಇರುವ ಕುಟುಂಬ ಆದಾಯದ ಮಿತಿಯಲ್ಲಿ ಬದಲು ಮಾಡಿದರೆ ಒಂದೋ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಸೌಲಭ್ಯದಡಿ ಬರುತ್ತಾರೆ..ಇಲ್ಲವೇ ಇನ್ನೂ ಕಡಿಮೆ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಕೇಂದ್ರ ಸರ್ಕಾರ ಆದಾಯದ ಮಿತಿಯನ್ನು ಹೆಚ್ಚಿಸುತ್ತದೆಯೋ..ಕಡಿಮೆ ಮಾಡುತ್ತದೆಯೋ ಎಂಬುದರ ಮೇಲೆ ಇದು ನಿರ್ಣಯವಾಗಲಿದೆ. ಇಷ್ಟೆಲ್ಲ ಗೊಂದಲ ಕಳೆದಂತೂ ಪ್ರವೇಶಾತಿ ಇರುವುದಿಲ್ಲ.

ಇದನ್ನೂ ಓದಿ: Oppo Reno 7 5G: ಒಪ್ಪೋ ರೆನೋ 7 ಸರಣಿ ಲಾಂಚ್: ಸದ್ಯದಲ್ಲೇ ಭಾರತದಲ್ಲೂ ರಿಲೀಸ್: ಇದರ ಫೀಚರ್ಸ್ ನೋಡಿ

TV9 Kannada


Leave a Reply

Your email address will not be published. Required fields are marked *