ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕ್ತಾರೆ, ಕಳ್ಳರಿಗೆ ಕಾಂಗ್ರೆಸ್​ ಇಷ್ಟವಾಗುತ್ತದೆ -ಕಂಗನಾ


ನಟಿ ಕಂಗಾನಾ ರಣಾವತ್​ ಯಾವಾಗಲೂ ಸುದ್ದಿಯಲ್ಲಿರುವ ಬಿಟೌನ್​ ಬೆಡಗಿ. ಒಂದಿಲ್ಲೊಂದು ವಿಚಾರವಾಗಿ ಪ್ರತಿಕ್ರಿಯೆ ನೀಡೋ ಕಂಗನಾ ಕಣ್ಣು ಇದೀಗ ರಾಜಕೀಯದ ಮೇಲೆ ಬಿದ್ದಿದೆ.

ಸದ್ಯ ಕಂಗನಾ ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕ್ತಾರೆ. ಕಳ್ಳರಾದವರಿಗೆ ಕಾಂಗ್ರೆಸ್​ ಇಷ್ಟವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ವಿವಾದದಲ್ಲಿ ಸಿಲುಕುತ್ತಿರುವ ನಟಿ ಕಂಗನಾ ಕೆಲ ದಿನಗಳಿಂದ ಸುಮ್ಮನಿದ್ದರು. ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ಟ್ವೀಟ್​ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಜೀವನದ ನಾಲ್ಕು ಸೂತ್ರಗಳನ್ನು ನೆನಪಿಡಿ ಎಂದು ಇನ್​ಸ್ಟಾದಲ್ಲಿ ಪೋಸ್ಟ್​ ​ ಮಾಡಿರುವ ಅವರು, 4 ಸೂತ್ರವನ್ನು ಕಾಂಗ್ರೆಸ್  ಹಾಗೂ ಬಿಜೆಪಿಗೆ ಅನುಕರಣೆ ಮಾಡಿದ್ದಾರೆ. ಎಲ್ಲರಿಗೂ ಅವರವರ ಮನಸ್ಥಿತಿಗೆ ತಕ್ಕಂತಹ ಗುರು ಸಿಗುತ್ತಾನೆ. ಒಳ್ಳೆಯವರಾಗಿದ್ರೆ ಒಳ್ಳೆಯ ಗುರು ಸಿಗುತ್ತಾರೆ. ಕೆಟ್ಟವರಾಗಿದ್ರೆ ಕೆಟ್ಟ ಗುರು ಸಿಗುತ್ತಾನೆ. ಈ ಹಿನ್ನೆಲೆಯಲ್ಲಿ ಕಳ್ಳರಿಗೆ ಕಾಂಗ್ರೆಸ್​ ಇಷ್ಟವಾಗುತ್ತದೆ ಎಂದು ಇನ್​​​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *