ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲೇ ಯಾಕೆ ತಂದಿದ್ದು? ಯುಪಿ, ಮಧ್ಯಪ್ರದೇಶದಲ್ಲಿ ಯಾಕಿಲ್ಲ? ಯಾರು ಈ ರೋಹಿತ್​ ಚಕ್ರತೀರ್ಥ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆಗಳ ಸುರಿಮಳೆ | KPCC President Dk Shivakumar criticises Karnataka textbook revision committee chairman Rohit Chakratirtha


ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲೇ ಯಾಕೆ ತಂದಿದ್ದು? ಯುಪಿ, ಮಧ್ಯಪ್ರದೇಶದಲ್ಲಿ ಯಾಕಿಲ್ಲ? ಯಾರು ಈ ರೋಹಿತ್​ ಚಕ್ರತೀರ್ಥ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆಗಳ ಸುರಿಮಳೆ

ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲೇ ಯಾಕೆ ತಂದಿದ್ದು? ಯುಪಿ, ಮಧ್ಯಪ್ರದೇಶದಲ್ಲಿ ಯಾಕಿಲ್ಲ? ಯಾರು ಈ ರೋಹಿತ್​ ಚಕ್ರತೀರ್ಥ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆಗಳ ಸುರಿಮಳೆ

ಕರ್ನಾಟಕದಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವ್ಯಾಖ್ಯಾನ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಲ್ಲಿಯೇ ಯಾಕೆ ಮೊದಲು ತಂದಿದ್ದು? ಅವರದೇ ಸರಕಾರಗಳಿರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಯಾಕೆ ಇದನ್ನ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶದ ಕಿಡಿಕಾರಿದ್ದಾರೆ. ನಾವು ಮಾತನಾಡಿದ್ರೆ ಕಾಂಗ್ರೆಸ್​ನವರದ್ದು ಅಂತಾರೆ. ಇವರೇನು ಇಲ್ಲೇ ಗೂಟ ಹೊಡೆದು ಕುಳಿತುಕೊಳ್ತಾರಾ? ನಮಗೂ ಕಾಲ ಬರುತ್ತೆ ಆಗ ನಾವು ಮಾಡುತ್ತೇವೆ ಎಂದು ಗುಡುಗಿದ್ದಾರೆ. ಸರ್ಕಾರದ ನೀತಿ ನಿಯಮಗಳ ವಿರುದ್ಧ ಹೋರಾಟ ಮಾಡಿ ಎಂದು ಜನರಿಗೆ ನಾನು ಕರೆ ಕೊಡುತ್ತೇನೆ. ನಮ್ಮ ಕನ್ನಡ ಧ್ವಜವನ್ನ ಉಳಿಸಿಕೊಳ್ಳಬೇಕು. ಕನ್ನಡ ನೆಲ, ಜಲ ಉಳಿಸಿಕೊಳ್ಳಬೇಕಾದ್ರೆ ಹೋರಾಡಿ ಎಂದು ಹುರಿದುಂಬಿಸುತ್ತೇನೆ ಎಂದು ಕನ್ನಡ ಸಂಘಟನೆಗಳಿಗೆ ಡಿಕೆಶಿ (KPCC President Dk Shivakumar) ಕರೆಕೊಟ್ಟಿದ್ದಾರೆ.

ಇನ್ನು ಕರ್ನಾಟಕ ಪಠ್ಯಪುಸ್ತಕ ಪರಿಷ್ಕರನೆ ಸಮಿತಿ ಅಧ್ಯಕ್ಷ ರೋಹಿತ್​ ಚಕ್ರತೀರ್ಥ (Karnataka textbook revision committee chairman Rohit Chakratirtha) ಅವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಡಿಕೇಶಿ ಅವರು ಈ ರೋಹಿತ್​ ಚಕ್ರತೀರ್ಥ ಯಾರು? ಕನ್ನಡ ಬಾವುಟವನ್ನು ಅಂಡರ್ ವೇರ್​ಗೆ ಹೋಲಿಸಿದ್ದವ ಎಂದು ಜರಿದಿರುವ ಡಿ ಕೆ ಶಿವಕುಮಾರ್ ಕನ್ನಡ ಸಂಘಟನೆಗಳು ಏನ್ಮಾಡ್ತಿವೆ, ಇಂತಹವರ ವಿರುದ್ಧ ಹೋರಾಡಬೇಕು ಎಂದು ಡಿಕೆಶಿ ಸೂಚಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನೆಲೆಯಲ್ಲಿಯೇ ಕರ್ನಾಟಕದಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಬಗ್ಗೆ ವ್ಯಾಖ್ಯಾನ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಲ್ಲಿಯೇ ಯಾಕೆ ಮೊದಲು ತಂದಿದ್ದು? ಅವರದೇ ಸರಕಾರಗಳಿರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಯಾಕೆ ಇದನ್ನ ಜಾರಿಗೆ ತರಲಿಲ್ಲ ಎಂದು ಬಿಜೆಪಿ ವಿರುದ್ಧ ಅವರು ಆಕ್ರೋಶ ಹೊರಹಾಕಿದ್ದಾರೆ.

Also Read:

ಸಖೇದಾಶ್ಚರ್ಯದ ಸಂಗತಿ: ನಿಮಿಷಾಂಭ ದೇಗುಲ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬೆಂಗಳೂರಿನ ಬಿಎಂಡಬ್ಲ್ಯೂ ಕಾರು ಪತ್ತೆ!

ಅಲ್ಲಾವುದ್ದೀನನ ಅದ್ಭುತ ದೀಪದಿಂದ ಎದ್ದುಬಂದಂತೆ ಮತ್ತೆ ಹಿಜಾಬ್​ vs ಸಮವಸ್ತ್ರ ವಿವಾದ ಎದ್ದಿದೆ -ಮುಂದೇನು? -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

 

TV9 Kannada


Leave a Reply

Your email address will not be published. Required fields are marked *