
ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ
ಕಾಂಗ್ರೆಸ್ ವಿರುದ್ದ ಎಂ.ಪಿ.ರೇಣುಕಾಚಾರ್ಯ ಗರಂ ಆಗಿದ್ದು, ಆರ್ಎಸ್ಎಸ್ ವಿರುದ್ದ ಮಾತನಾಡುವವರಿಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕರ ಕಾಲಿನ ಧೂಳಿಗೂ ಕಾಂಗ್ರೆಸ್ ಸಮವಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ಮಾಡಿದರು. ಫೇಸ್ಬುಕ್ನಲ್ಲಿಯೂ ಪೋಸ್ಟ್ ಹಾಕಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಈಗಿನ ಕಾಂಗ್ರೆಸ್ ಆರ್ಎಸ್ಎಸ್ನವರ ಕಾಲಿನ ಧೂಳಿಗೂ ಸಮವಲ್ಲ. ರಾಷ್ಟ್ರ ಭಕ್ತಿ ಸಂಘಟನನೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್ನವರಿಗೆ ಇಲ್ಲಾ ಎಂದು ಆರ್ಎಸ್ಎಸ್ ವಿರುದ್ಧ ಮಾತನಾಡುವವರಿಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಕಾಂಗ್ರೇಸ್ ಅಡ್ರೆಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, ಆರ್ಎಸ್ಎಸ್ ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಭ್ರಮಾ ಲೋಕದಲ್ಲಿದ್ದಾರೆ ಎಂದು ಟಾಂಗ್ ನೀಡಿದರು.
ರಾಷ್ಟ್ರ ಭಕ್ತಿ ಸಂಘಟನೆ RSS ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್ ನವರಿಗೆ ಇಲ್ಲಾ.
ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, RSS ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಬ್ರಮಾ ಲೋಕದಲ್ಲಿದ್ದಾರೆ.
— M P Renukacharya (@MPRBJP) May 30, 2022