ರಾಮನಗರ: ಪುಂಡ ಯುವಕರ ವೀಲ್ಹಿಂಗ್ ಕ್ರೇಜ್ಗೆ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ರಾಮನಗರದ ಬೆಂಗಳೂರು -ಮೈಸೂರು ರಸ್ತೆಯಲ್ಲಿ ಯುವಕರ ಗುಂಪು ಮೋಜು ಮಸ್ತಿಗಾಗಿ ಡೇಂಜರಸ್ ವೀಲ್ಹಿಂಗ್ ಮಾಡುತ್ತಿದ್ದಾರೆ.
ಬಿಡದಿಯಿಂದ ರಾಮನಗರವರೆಗೂ ವೀಲ್ಹಿಂಗ್ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಪುಂಡರು 10ಕ್ಕೂ ಹೆಚ್ಚು ಬೈಕ್ಗಳಲ್ಲಿ ಮನ ಬಂದಂತೆ ರೈಡ್ ಮಾಡುತ್ತಿದ್ದಾರೆ. ಬೆಂಗಳೂರು -ಮೈಸೂರು ರಸ್ತೆಯಿಂದ ಹಿಡಿದು ಸುಮಾರು 15 ಕಿ.ಮೀ ವರಗೂ ಪೋಲಿ ಯುವಕರು ಪುಂಡಾಟಿಕೆ ಮೆರೆದಿದ್ದಾರೆ. ಇದರಿಂದ ಯುವಕರ ಮೋಜು ಮಸ್ತಿಗೆ ಹೆದ್ದಾರಿಯಲ್ಲಿ ಸಂಚರಿಸುವ ಇತರೆ ಸವಾರರು ಭಯದಿಂದಲೇ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಯುವಕರ ವೀಲ್ಹಿಂಗ್ಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿ ಪ್ರಶ್ನಿಸಲು ಹೋದ್ರೆ ಅವರ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ವೀಲ್ಹಿಂಗ್ ಮಾಡುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ಡೆಡ್ಲಿ ವೀಲ್ಹಿಂಗ್ಗೆ ಸಾಕಷ್ಟು ಅನಾಹುತಗಳಾದ್ರು ಎಚ್ಚೆತ್ತುಕೊಳ್ಳದ ಯುವಕರು ಮತ್ತದೆ ಚಾಳಿ ಮುಂದುವರೆಸಿದ್ದಾರೆ. ಈ ಕುರಿತು ಪೊಲೀಸರಿಗೆ ಸಾಕಷ್ಟು ಸಲ ತಿಳಿಸಿದರು ಕೂಡ ಖಾಕಿ ಪಡೆ ಮಾತ್ರ ಪೋಲಿ ಬಾಯ್ಸ್ ವಿರುದ್ಧ ಯಾವುದೇ ಌಕ್ಷನ್ ತೆಗೆದುಕೊಳ್ಳುತ್ತಿಲ್ಲವೆಂದು ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
The post ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ವೀಲ್ಹಿಂಗ್: ಪೋಲಿ ಬಾಯ್ಸ್ ಪುಂಡಾಟಕ್ಕೆ ಹೈರಾಣಾದ ಸವಾರರು appeared first on News First Kannada.