ರಾಷ್ಟ್ರೀಯ ಹೆದ್ದಾರಿಯಲ್ಲಿದ್ದರು ಅಭಿವೃದ್ದಿ ಕಾಣದ ಸೇತುವೆ ಕಾಮಗಾರಿಗಳು – There were bridge works on the national highway that did not see development


ರಾಷ್ಟ್ರೀಯ ಹೆದ್ದಾರಿ ಆದರೂ ಕುಂಟುತ್ತ ಸಾಗಿದೆ ಸೇತುವೆ ಕಾಮಗಾರಿ, ಓಡಾಡೋ ಜನರಿಗೆ ನೆಮ್ಮದಿಯೆ ಇಲ್ಲದಂತಾಗಿದೆ. ಇದರಿಂದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿದ್ದು ವಾಹನ ಸವಾರರು ಗಂಟೆಗಟ್ಟಲೆ ನಿಂತು ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿದ್ದರು  ಅಭಿವೃದ್ದಿ ಕಾಣದ  ಸೇತುವೆ ಕಾಮಗಾರಿಗಳು

ರಾಷ್ಟ್ರೀಯ ಹೆದ್ದಾರಿ

ಹಾವೇರಿ: ಜಿಲ್ಲೆಯ ಬ್ಯಾಡಗಿ(bydagi) ತಾಲೂಕಿನ ಮೋಟೆಬೆನ್ನೂರು ಮತ್ತು ಛತ್ರ ಗ್ರಾಮದ ಬಳಿ ರಸ್ತೆಯ ಪಕ್ಕಕ್ಕೆ ವಾಹನ ಪಲ್ಟಿ ಹೊಡೆದಿದೆ. ಅರ್ಧಕ್ಕೆ ನಿಂತಿರೋ ಸೇತುವೆ ಕಾಮಗಾರಿಯಿಂದ  ವಾಹನ ದಟ್ಟಣೆ(traffic jam) ಆಗಿ ವಾಹನ ಸವಾರರು ಪರದಾಟ ಎದುರಿಸುತ್ತಿದ್ದಾರೆ. ಮೋಟೆಬೆನ್ನೂರು ಮತ್ತು ಛತ್ರ ಗ್ರಾಮದ ಬಳಿ ಹಾದು ಹೋಗಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ(pune-banglore national highway) ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ. ಆದರೆ ಎರಡೂ ಗ್ರಾಮಗಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟಕ್ಕೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.  ಕಳೆದ ಹಲವು ತಿಂಗಳುಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಹೀಗೆ ಆದರೆ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಎರಡೂ ಸೇತುವೆಗಳ ನಿರ್ಮಾಣ ಕಾಮಗಾರಿ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದು. ಸೇತುವೆಗಳ ಬಳಿ ಸರ್ವೀಸ್ ರಸ್ತೆ ನಿರ್ಮಾಣವಾಗಿದ್ದರು ಕೂಡ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಈಗಾಗಲೆ ಸರ್ವೀಸ್ ರಸ್ತೆಗಳು ಕಿತ್ತು ಹೋಗಿದ್ದಾವೆ. ದೊಡ್ಡ ತಗ್ಗು ಗುಂಡಿಗಳು ನಿರ್ಮಾಣ ಆಗಿದ್ದಾವೆ. ಇದರಿಂದ ವಾಹನ ಸವಾರರು ಸಾಕಷ್ಟು ಪರದಾಡೋ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಹೆದ್ದಾರಿ ಪ್ರಾಧಿಕಾರ‌ ಹಾಗೂ ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎದುರಾಗಿರೋ ಸಮಸ್ಯೆಗಳನ್ನು ಪರಿಹರಿಸಿ, ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.

ವಾಹನ ಸವಾರರೊಬ್ಬರು ಮಾತನಾಡಿ ಕಳೆದ ಹಲವು ತಿಂಗಳುಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದಾವೆ. ಇದರಿಂದ ಪ್ರತಿದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವಂತ ಜನರಿಗೆ ಧೂಳಿನಿಂದ ಸ್ನಾನವಾಗುತ್ತಿದೆ. ಇನ್ನು ಸರ್ವೀಸ್ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದ್ರೆ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್​ನಲ್ಲಿ ಕಾದು ಹೋಗುವ ಪರಿಸ್ಥಿತಿ ಎದುರಾಗಿದೆ.

ಸರ್ವೀಸ್ ರಸ್ತೆಗಳಲ್ಲಿ ಅಪಘಾತವಾದ ವಾಹನಗಳನ್ನು ತೆರೆವು ಮಾಡುವವರೆಗೂ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗಂತೂ ರಸ್ತೆಯಿಂದ ಏಳುವ ಧೂಳಿನಿಂದ ಮುಂದೆ ಮತ್ತು ಹಿಂದೆ ಇರುವ ವಾಹನಗಳು ಕಾಣಿಸುವುದಿಲ್ಲ. ಸೇತುವೆಗಳ ಅಕ್ಕಪಕ್ಕದ ಗ್ರಾಮಗಳ ಜನರಂತೂ ಧೂಳಿನ ಹೊಡೆತಕ್ಕೆ ಸಿಕ್ಕು ತತ್ತರಿಸಿ ಹೋಗಿದ್ದಾರೆ. ಹದಗೆಟ್ಟ ಸರ್ವೀಸ್ ರಸ್ತೆಗಳಲ್ಲಿ ದಿನನಿತ್ಯ ಓಡಾಡುವ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಆದಷ್ಟು ಬೇಗ ಸಂಬಂಧಿಸಿದವರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದರೆ ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರಿಗೆ ಹಾಗೂ ಹೆದ್ದಾರಿ ಪಕ್ಕದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಇನ್ನಷ್ಡು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವರದಿ: ಪ್ರಭುಗೌಡ.ಎನ್.ಪಾಟೀಲ ಟಿವಿ9 ಹಾವೇರಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.