ರಾಹುಲ್​ ಕೈ ಹಿಡಿದು ಓಡಿದ ಸಿದ್ಧರಾಮಯ್ಯ: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ! | Siddaramaiah runs away holding Rahul Gandhi’s hand, says if anyone wants to stop him, stop it


ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಕೂಡ ಯುವಕರಂತೆ ಓಡಿದರು. ಸಿದ್ದರಾಮಯ್ಯರ ಫಿಟ್ನೆಸ್​ ನೋಡಿ ರಾಹುಲ್ ಗಾಂಧಿ ಬೆನ್ನುತಟ್ಟಿದರು.

ರಾಹುಲ್​ ಕೈ ಹಿಡಿದು ಓಡಿದ ಸಿದ್ಧರಾಮಯ್ಯ: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ!

ಸಿದ್ದರಾಮಯ್ಯ, ರಾಹುಲ್ ಗಾಂಧಿ


ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಕೂಡ ಯುವಕರಂತೆ ಓಡಿದರು. ಸಿದ್ದರಾಮಯ್ಯರ ಫಿಟ್ನೆಸ್​ ನೋಡಿ ರಾಹುಲ್ ಗಾಂಧಿ ಬೆನ್ನುತಟ್ಟಿದರು. ಸದ್ಯ​ ರಾಹುಲ್ ಜತೆ ಓಡಿದ ವಿಡಿಯೋ ಜೊತೆಗೆ ಸಂದೇಶವನ್ನು ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಆರೋಗ್ಯದ ಗುಟ್ಟು ಅವರ ಆರೋಗ್ಯಕರ ಮನಸ್ಸು. ರಾಹುಲ್ ಜೊತೆ ಹೆಜ್ಜೆ ಹಾಕುತ್ತಾ ನಾನೂ ಯುವಕನಾದೆ. ಭರವಸೆಯ ಕೈಗಳು ಹೀಗೆಯೇ ಕೈ ಹಿಡಿದರೆ, ದಾರಿ ಎಷ್ಟೇ ದುರ್ಗಮವಾಗಿದ್ದರೂ ಗುರಿ ಮುಟ್ಟುವುದು ಖಚಿತ. ನಮ್ಮ ನಾಯಕ‌ ನಮ್ಮ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. 75 ರ ಹರೆಯದ ಸಿದ್ದರಾಮಯ್ಯ ರಾಹುಲ್ ಗಾಂಧಿ ಕೈ ಹಿಡಿದು ಜೋಶ್​ನಲ್ಲಿ ಓಡಿದನ್ನು ಕಂಡು ಕಾರ್ಯಕರ್ತರು ಹರ್ಷಗೊಂಡರು.

ಸಿದ್ದರಾಮಯ್ಯ ಫೇಸ್‌ಬುಕ್‌ ಪೋಸ್ಟ್‌ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿ‌ಎಂ ಸ್ಥಾನದ ಗುರಿ ಮುಟ್ಟುವ ಮಾತನಾಡಿದ್ರಾ ಸಿದ್ದರಾಮಯ್ಯ? ಪೋಸ್ಟ್‌ ಹಾಕಿ ಸ್ವಪಕ್ಷೀಯರಿಗೂ ಸಂದೇಶ ನೀಡಿದ್ರಾ ಸಿದ್ದರಾಮಯ್ಯ? ರಾಹುಲ್ ಕೈಹಿಡಿದು ಗುರಿಮುಟ್ಟುವ ಮಾತನಾಡಿದ ಸಿದ್ದರಾಮಯ್ಯ ಹೀಗೆ ಪೋಸ್ಟ್‌ ಬಗ್ಗೆ ಕಾಂಗ್ರೆಸ್‌ ಪಡೆಯಲ್ಲಿಯೇ ಹೊಸ ಚರ್ಚೆಗಳು ಶುರುವಾಗಿವೆ.

ಇನ್ನೂ ಇದೇ ವಿಡಿಯೋವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಫೇಸ್‌ಬುಕ್‌ನಲ್ಲಿಯೂ ಹಂಚಿಕೊಂಡಿದ್ದು,  ಯಾರಾದರೂ ತಡೆಯುವುದಿದ್ದರೆ ತಡೆಯಿರಿ (ಕೋಯಿ ರೋಕ್ ಸಕೇತೋ ರೋಕ್ ಲೋ) ಎಂದು ಸಂದೇಶ ಬರೆದುಕೊಂಡಿದ್ದಾರೆ. ಇದು ರಾಜಕೀಯ ವಿರೋಧಿಗಳಿಗೂ ರಾಹುಲ್‌ ಖಡಕ್ ಸಂದೇಶ ಎನ್ನಲಾಗುತ್ತಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.