ಬಳ್ಳಾರಿ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಇಂದು 51ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ದಾರೆ. ಈ ಖುಷಿಯಲ್ಲಿರುವ ಬಳ್ಳಾರಿಯ ಕಾಂಗ್ರೆಸ್​ ನಾಯಕ ಸಿದ್ದು ಹಳ್ಳೇಗೌಡ ಅವರು ಹುಲಿಯೊಂದನ್ನ ದತ್ತು ಪಡೆದುಕೊಂಡಿದ್ದಾರೆ.

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಸಿದ್ದು ಹಳ್ಳೇಗೌಡ ಅಟಲ್ ಬಿಹಾರಿ ವಾಜಪೆಯಿ ವನ್ಯಸಂರಕ್ಷಣಾ ಧಾಮದಲ್ಲಿರುವ ಹುಲಿಯೊಂದನ್ನ ದತ್ತು ಪಡೆದಿದ್ದಾರೆ. ರಾಹುಲ್ ಗಾಂಧಿ ಹೆಸರಿನಲ್ಲಿ ಅರ್ಜುನ್ ಎಂಬ ಹೆಸರಿನ ಬಿಳಿ ಹುಲಿಯನ್ನು ದತ್ತು ಪಡೆದಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ವಿಧಿಸಲಾಗಿದೆ. ಇದರ ಪರಿಣಾಮ ಪ್ರಾಣಿಗಳ ಮೇಲೂ ಬಿದ್ದಿದೆ. ಝೂಗಳಲ್ಲಿ ಪ್ರಾಣಿ-ಪಕ್ಷಿಗಳ ಆರೈಕೆ ಮಾಡೋದು ತುಂಬಾ ಕಷ್ಟವಾಗಿದೆ. ಇದನ್ನ ಮನಗಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗೆ ಝೂಗಳ ರಕ್ಷಣೆಗೆ ಜನರು ಮುಂದಾಗಬೇಕು ಅಂತಾ ಮನವಿ ಮಾಡಿಕೊಂಡಿದ್ದರು. ಅವರ ಮನವಿ ಬೆನ್ನಲ್ಲೇ ರಾಜ್ಯದ ಪ್ರಮುಖ ಝೂಗಳಿಗೆ ಧನಸಹಾಯ ಹರಿದು ಬರುತ್ತಿದೆ.

The post ರಾಹುಲ್ ಗಾಂಧಿ ಹೆಸರಲ್ಲಿ ಹುಲಿ ದತ್ತು ಪಡೆದ ಕಾಂಗ್ರೆಸ್​ ಮುಖಂಡ appeared first on News First Kannada.

Source: newsfirstlive.com

Source link