ರಾಹುಲ್, ಜಡೇಜಾ, ಶ್ರೇಯಸ್ ಔಟ್! ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಕೊಡದ ಗೌತಮ್ ಗಂಭೀರ್ | Gautam gambhir picks ishan kishan over kl rahul t20 world cup top 7 players india vs south africa


ರಾಹುಲ್, ಜಡೇಜಾ, ಶ್ರೇಯಸ್ ಔಟ್! ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಕೊಡದ ಗೌತಮ್ ಗಂಭೀರ್

ರಾಹುಲ್, ಕಿಶನ್

T20 World Cup: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 2022 ರ ಟಿ 20 ವಿಶ್ವಕಪ್‌ಗೆ ತಮ್ಮ ಟಾಪ್ 7 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ತಂಡದಲ್ಲಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್‌, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್​ಗೆ ಅವಕಾಶ ನೀಡಲಿಲ್ಲ.

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಟಿ20 ವಿಶ್ವಕಪ್‌ (T20 World Cup)ಗೆ ತಮ್ಮ ಟಾಪ್ 7 ಆಟಗಾರರನ್ನು ಘೋಷಿಸಿದ್ದಾರೆ. ಆದರೆ ಈಗ ಗಂಭೀರ್ ಪ್ರಕಟಿಸಿರುವ ತಂಡ ನೋಡಿ ಎಲ್ಲಾ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ವಾಸ್ತವವಾಗಿ, ಗೌತಮ್ ಗಂಭೀರ್ ತಂಡದಲ್ಲಿ ಕೆಎಲ್ ರಾಹುಲ್, ರವೀಂದ್ರ ಜಡೇಜಾ (KL Rahul , Ravindra Jadeja) ಅವರಂತಹ ಟಾಪ್ ಆಟಗಾರರ ಹೆಸರುಗಳಿಲ್ಲ. ಜೊತೆಗೆ, ಗಂಬೀರ್ ತಂಡದಲ್ಲಿ ಇಬ್ಬರೂ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಈ ಆಟಗಾರರು T20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಇರುತ್ತಾರೆ ಎಂದು ಬಹುಶಃ ಯಾರು ಕೂಡ ನಂಬುವುದಿಲ್ಲ. ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾಮೆಂಟರಿ ಸಮಯದಲ್ಲಿ ಟಿ20 ವಿಶ್ವಕಪ್​ಗಾಗಿ ತಮ್ಮ ಅಗ್ರ 7 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರಿಗೆ ಗಂಭೀರ್ ತಂಡದಿಂದ ಕೋಕ್ ಸಿಕ್ಕಿದೆ. ಗೌತಮ್ ಗಂಭೀರ್ ಅವರು ಬಲ ಮತ್ತು ಎಡಗೈ ಬ್ಯಾಟ್ಸ್‌ಮನ್ ಓಪನಿಂಗ್ ನೋಡಲು ಬಯಸುವುದರಿಂದ ಜೊತೆಗೆ ನಾಯಕ ರೋಹಿತ್ ಶರ್ಮಾ ಖಚಿತವಾಗಿ ಆಡುತ್ತಾರೆ ಎಂಬ ಕಾರಣಕ್ಕಾಗಿ ಕೆಎಲ್ ರಾಹುಲ್ ಅವರನ್ನು ಹೊರಗಿಟ್ಟಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಅದ್ಭುತ ಟಿ20 ದಾಖಲೆಯನ್ನು ಹೊಂದಿರುವುದರಿಂದ ಗೌತಮ್ ಗಂಭೀರ್ ಕೆಎಲ್ ರಾಹುಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಅಲ್ಲದೆ ಸದ್ಯಕ್ಕೆ ಭಾರತ ತಂಡದಲ್ಲಿ ಅವರಂತೆ ದೊಡ್ಡ ಇನ್ನಿಂಗ್ಸ್ ಆಡುವವರು ಯಾರೂ ಇಲ್ಲ. ಜೊತೆಗೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡುವ ಬಗ್ಗೆ ಯೋಚಿಸುವುದಿಲ್ಲ ಎಂದು ಸ್ವತಃ ಇಶಾನ್ ಕಿಶನ್ ಹೇಳಿದ್ದರು.

TV9 Kannada


Leave a Reply

Your email address will not be published.