ಆಟಗಾರರಿಗೆ ಆಮಿಷ ಒಡ್ಡಿದ ಆರೋಪದಡಿಯಲ್ಲಿ ಲಖನೌ ಫ್ರಾಂಚೈಸಿ ವಿರುದ್ಧ, ಬಿಸಿಸಿಐಗೆ ಹಳೆ ಫ್ರಾಂಚೈಸಿಗಳು ದೂರು ನೀಡಿದ್ದು ಹಳೆ ಸುದ್ದಿ. ಈಗ ಅದೇ ದೂರು ಇಬ್ಬರು ಆಟಗಾರರ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಇದರಿಂದಾಗಿ ಈ ಸ್ಟಾರ್ ಆಟಗಾರರು, ಐಪಿಎಲ್ನಿಂದ ಕೆಲ ಕಾಲ ಬ್ಯಾನ್ ಆದ್ರೂ ಅಚ್ಚರಿಯಿಲ್ಲ.
ಕೆಲ ದಿನಗಳಿಂದ ರಿಟೈನ್ ಚರ್ಚೆಯ ಜೊತೆ ಜೊತೆಗೆ ಹೆಚ್ಚು ಸದ್ದು ಮಾಡಿದ್ದು, ಸನ್ರೈಸರ್ಸ್ ಹೈದ್ರಾಬಾದ್ ಹಾಗೂ ಕಿಂಗ್ಸ್ ಪಂಜಾಬ್ ತಂಡ ಬಿಸಿಸಿಐಗೆ ನೀಡಿದ ದೂರು. ನೂತನ ಲಖನೌ ಫ್ರಾಂಚೈಸಿ ಆಟಗಾರರಿಗೆ ಆಮಿಷ ಒಡ್ಡುತ್ತಿದೆ ಎಂದು ಆರೋಪ ಮಾಡಿದ್ದ ಈ ಹಳೆ ಫ್ರಾಂಚೈಸಿಗಳು, ಬಿಗ್ಬಾಸ್ಗಳಿಗೆ ದೂರು ನೀಡಿದ್ರು. ಆ ದೂರಿನಲ್ಲಿ ರಶೀದ್ ಖಾನ್, ಕೆಎಲ್ ರಾಹುಲ್ ಹೆಸರನ್ನೂ ಸೇರಿಸಲಾಗಿದ್ದು, ಇದೇ ಈಗ ಆಟಗಾರರಿಗೆ ಉರುಳಾಗಿ ಪರಿಣಮಿಸಿದೆ.
ಇದನ್ನೂ ಓದಿ: ಸ್ಟಾರ್ ಆಟಗಾರರಿಗೆ ಲಖನೌ ಬಿಗ್ ಆಫರ್: ರಶೀದ್ಗೆ 16 ಕೋಟಿ, ರಾಹುಲ್ಗೆ ಎಷ್ಟು ಕೋಟಿ ಆಫರ್ ಗೊತ್ತಾ..?
ಕೆಎಲ್ ರಾಹುಲ್, ರಶೀದ್ ಖಾನ್ಗೆ ಬ್ಯಾನ್ ಭೀತಿ..?
ನಿಯಮ ಉಲ್ಲಂಘಿಸಿ ತಪ್ಪು ಮಾಡಿದ್ರಾ ಆಟಗಾರರು..?
ಹಳೆಯ ಫ್ರಾಂಚೈಸಿಗಳು ದೂರಿನಲ್ಲಿ ಉಲ್ಲೇಖ ಮಾಡಿರೋದು ಮಾತ್ರವಲ್ಲ. ರಾಹುಲ್ ಹಾಗೂ ರಶೀದ್ ಖಾನ್ ನೂತನ ಫ್ರಾಂಚೈಸಿಯ ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ, ಬಲವಾಗಿ ಕೇಳಿ ಬರ್ತಿದೆ. ಜೊತೆಗೆ ರಾಹುಲ್ಗೆ 20, ರಶೀದ್ಗೆ 16 ಕೋಟಿಯ ಬೃಹತ್ ಆಫರ್ ಕೂಡ ಸಿಕ್ಕಿತ್ತು ಎನ್ನಲಾಗ್ತಿದೆ. ಇದೇ ವಿಚಾರ ಈಗ ಇಬ್ಬರು ಸ್ಟಾರ್ ಆಟಗಾರರಿಗೆ ಬ್ಯಾನ್ ಭೀತಿಯನ್ನ ತಂದಿಟ್ಟಿದೆ. ಒಂದು ಫ್ರಾಂಚೈಸಿಯ ಒಪ್ಪಂದ ಅಂತ್ಯವಾಗದೇ ಇನ್ನೊಂದು ಫ್ರಾಂಚೈಸಿಯನ್ನ ಆಟಗಾರರು ಸಂಪರ್ಕಿಸ ಬಾರದು ಅನ್ನೋದು, ಬಿಸಿಸಿಐನ ನಿಯಮವಾಗಿದೆ. ಈ ನಿಯಮವನ್ನ ಉಲ್ಲಂಘಿಸಿದ್ದೇ, ಇದೀಗ ರಾಹುಲ್ ಹಾಗೂ ರಶೀದ್ಗೆ ಸಂಕಷ್ಟ ತಂದಿಟ್ಟಿದೆ.
‘ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’
‘ನಮಗೆ ಲಿಖಿತ ಪತ್ರ ಸಿಕ್ಕಿಲ್ಲ. ಆದರೆ, ಲಖನೌ ತಂಡದಿಂದ ಆಟಗಾರರನ್ನ ಸೆಳೆಯಲಾಗುತ್ತಿರುವ ಬಗ್ಗೆ ಎರಡು ಫ್ರಾಂಚೈಸಿಗಳು ಮೌಖಿಕ ದೂರು ಕೊಟ್ಟಿವೆ. ಆ ದೂರನ್ನು ನಾವು ಪರಿಶೀಲಿಸುತ್ತಿದ್ದೇವೆ. ದೂರಿನಲ್ಲ ಸತ್ಯಾಂಶ ಇದ್ದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು’
ಬಿಸಿಸಿಐ ಅಧಿಕಾರಿ
ಇದೇ ಕೇಸಲ್ಲಿ ಬ್ಯಾನ್ ಆಗಿದ್ದು ರವೀಂದ್ರ ಜಡೇಜಾ..!
2010ರಲ್ಲಿ ಇಂತದ್ದೇ ಪ್ರಕರಣ ನಡೆದಿತ್ತು. ಆಗ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರವೀಂದ್ರ ಜಡೇಜಾ, ಒಪ್ಪಂದ ಅಂತ್ಯಕ್ಕೂ ಮೊದಲೇ ಮುಂಬೈ ಇಂಡಿಯನ್ಸ್ ತಂಡ ಸಂಪರ್ಕಿಸಿದ್ರು. ಜೊತೆಗೆ ಮುಂಬೈ ಇಂಡಿಯನ್ಸ್ ಖರೀದಿಗೂ ಪ್ಲಾನ್ ರೆಡಿ ಮಾಡಿತ್ತು. ಇದು ಸಾಬೀತಾದ ಬೆನ್ನಲ್ಲೇ, ಜಡೇಜಾಗೆ ಒಂದು ವರ್ಷ ನಿಷೇಧ ಹೇರಲಾಗಿತ್ತು.
ಇದೀಗ ಕ್ರಿಕೆಟ್ ವಲಯದಲ್ಲಿ ಕೂಡ ರಾಹುಲ್, ರಶೀದ್ ನಿಷೇಧ ಶಿಕ್ಷೆಗೆ ಗುರಿಯಾಗ್ತಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಫ್ರಾಂಚೈಸಿಗಳ ಕಡೆಯಿಂದ ರಿಟೇನ್ ಪ್ರಕ್ರಿಯೆ ಪೂರ್ಣವಾಗುವುದರೊಳಗೆ ಬೇರೆ ಫ್ರಾಂಚೈಸಿಯನ್ನ ಸಂಪರ್ಕಿಸಿದ್ದು ತಪ್ಪು ಎಂಬ ಮಾತೂ ಕೇಳಿ ಬರ್ತಿದೆ. ಅಂತಿಮವಾಗಿ ರಾಹುಲ್ -ರಶೀದ್ ಇಬ್ಬರ ಭವಿಷ್ಯ ಸಧ್ಯ ಬಿಸಿಸಿಐನ ನಡೆ ಮೇಲೆ ನಿಂತಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ: ರಿಟೈನ್ ಪ್ರಕ್ರಿಯೆಯಲ್ಲಿ RCB ಉಳಿಸಿಕೊಂಡ ಆಟಗಾರರು ಯಾಱರು, ಯಾರೆಲ್ಲ ಮಿಸ್..?