ಇತ್ತೀಚೆಗಷ್ಟೇ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಸಂಗಡಿಗರ ಜೊತೆ ಸ್ಪೇಸ್ ಟ್ರಿಪ್ ಮಾಡುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು. ಇದೀಗ ಮತ್ತೊಬ್ಬ ರಿಚೆಸ್ಟ್ ಬ್ಯುಸಿನೆಸ್​ಮನ್ ಜೆಫ್ ಬೆಜೋಸ್ ತಾವೂ ಒಂದು ಸುತ್ತು ಗಗನಯಾತ್ರೆ ಮಾಡಿಬರಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ.

ನಾಳೆ ಸಂಜೆ ಜೆಫ್ ಬೆಜೋಸ್, ಸಹೋದರ ಮಾರ್ಕ್, 82 ವರ್ಷದ ಮಾಜಿ ಪೈಲಟ್ ವಾಲ್ಲಿ ಫುಂಕ್ ಹಾಗೂ 18 ವರ್ಷದ ಯುವಕನೋರ್ವ ನಾಳೆ ಈ ಸ್ಟೇಸ್ ಟ್ರಿಪ್​ನಲ್ಲಿ ಭಾಗಿಯಾಗಲಿದ್ದಾರೆ.

ಜೆಫ್ ಬೆಜೋಸ್​ ಅವರ ಬ್ಲೂ ಒರಿಜಿನ್ ಫ್ಲೈಟ್ ನಾಳೆ ಸಂಜೆ 06:30 ರ ಸುಮಾರಿಗೆ ಟೇಕ್ ಆಫ್ ಆಗಲಿದ್ದು ಭೂಮಿಯಿಂದ 100 ಕಿಮೀ ಎತ್ತರಕ್ಕೆ ಅಂದ್ರೆ ಕಾರ್ಮನ್ ಲೈನ್​ವರೆಗೆ ಕೇವಲ 10 ನಿಮಿಷಗಳಲ್ಲಿ ಹಾರಲಿದೆ. ನಂತರ ಗಗನಯಾತ್ರಿಗಳು ಭೂಮಿಗೆ ವಾಪಸ್ಸಾಗಲಿದ್ದಾರೆ.

ರಾಕೆಟ್ ಉಡಾವಣೆಗೊಂಡ ಐದು ನಿಮಿಷಗಳಲ್ಲೇ ಗಗನಯಾತ್ರಿಗಳನ್ನ ಹೊತ್ತ ಕ್ಯಾಪ್ಸೂಲ್​ ಲಾಂಚರ್​ನಿಂದ ಬೇರ್ಪಟ್ಟು ಕಾರ್ಮನ್ ಲೈನ್ ದಾಟಲಿದೆ. ನಂತರ ಮತ್ತೆ ಭೂಮಿಗೆ ವಾಪಸ್ಸಾಗಲಿರುವ ಕ್ಯಾಪ್ಸೂಲ್ ಮತ್ತೆ 10 ನಿಮಿಷಗಳ ನಂತರ ಪ್ಯಾರಾಚೂಟ್ ಅನ್ನು ತೆರೆದುಕೊಳ್ಳುತ್ತದೆ. ಗಗನಯಾತ್ರಿಗಳು ಗಂಟೆಗೆ 1.6 ಕಿಮೀ ವೇಗದಲ್ಲಿ ಟೆಕ್ಸಾಸ್ ಮರುಭೂಮಿಯಲ್ಲಿ ಲ್ಯಾಂಡ್ ಆಗಲಿದ್ದಾರೆ ಎಂದು ಹೇಳಲಾಗಿದೆ.

The post ರಿಚರ್ಡ್ ಬ್ರಾನ್ಸನ್ ಬೆನ್ನಲ್ಲೇ ಗಗನಕ್ಕೆ ಹಾರಲು ಮುಂದಾದ ಜೆಫ್ ಬೆಜೋಸ್.. ನಾಳೆಯೇ ನಾಲ್ವರ ಯಾನ appeared first on News First Kannada.

Source: newsfirstlive.com

Source link