ಅಮೇಜಾನ್​ನಂಥ ದೈತ್ಯ ಸಂಸ್ಥೆಯನ್ನ ಹುಟ್ಟುಹಾಕಿದ ಜೆಫ್ ಬೆಜೋಸ್ ಮತ್ತು ಇತರೆ ಮೂವರು ಇಂದು ಬ್ಲೂ ಒರಿಜಿನ್ಸ್​ ಸಂಸ್ಥೆಯ ರಾಕೆಟ್ ಮೂಲಕ ಸ್ಪೇಸ್ ಟ್ರಿಪ್​ ನಡೆಸಿ ವಾಪಸ್ ಭೂಮಿಗೆ ಮರಳಿದ್ದಾರೆ.

ಜೆಫ್ ಬೆಜೋಸ್ ಅಮೆರಿಕಾದ ಕಾಲಮಾನ ಬೆಳಗ್ಗೆ 8:22 ಕ್ಕೆ ವೆಸ್ಟ್ ಟೆಕ್ಸಾಸ್​​ನಲ್ಲಿ ಲ್ಯಾಂಡ್ ಆಗಿದ್ದಾರೆ. ರಾಕೆಟ್​ ಲಾಂಚ್ ಆದ 10 ನಿಮಿಷಗಳಲ್ಲಿ ಇವರನ್ನ ಹೊತ್ತೊಯ್ದಿದ್ದ ಕ್ಯಾಪ್ಸೂಲ್ ಲ್ಯಾಂಡ್ ಆಗಿದ್ದು ಇದೀಗ ಹೊಸದೊಂದು ಇತಿಹಾಸವೇ ನಿರ್ಮಾಣವಾದಂತಾಗಿದೆ. ಭೂಮಿಯಿಂದ 62 ಮೈಲಿ ಅಂದ್ರೆ 100 ಕಿಮೀಗೂ ಹೆಚ್ಚು ಎತ್ತರಕ್ಕೆ ಹಾರಿದ್ದ ಇವರು ಅಲ್ಲಿ ಜೀರೋ ಗ್ರಾವಿಟಿಯ ಅನುಭವವನ್ನ ಅನುಭವಿಸಿ ಭೂಮಿಗೆ ವಾಪಸ್ಸಾಗಿದ್ದಾರೆ. ಜೆಫ್ ಬೆಜೋಸ್, ಸಹೋದರ ಮಾರ್ಕ್, 82ವರ್ಷ ವಾಲಿ ಫುಂಕ್ ಮತ್ತು ಗಗನಯಾತ್ರೆಯ ತರಬೇತಿ ಪಡೆಯುತ್ತಿರುವ ಓರ್ವ 18 ರ ಯುವಕ ಈ ಸ್ಪೇಸ್​ ಟ್ರಿಪ್​ನಲ್ಲಿ ಪಾಲ್ಗೊಂಡಿದ್ದರು.

ಜೆಫ್ ಬೆಜೋಸ್​ಗೆ ತಾನು 5 ವರ್ಷದ ಬಾಲಕನಾಗಿದ್ದಾಗಿನಿಂದಲೂ ಗಗನಯಾನ ಮಾಡುವ ಕನಸು ಕಟ್ಟಿಕೊಂಡಿದ್ದರಂತೆ. ಈ ಕನಸನ್ನ ನನಸು ಮಾಡಿಕೊಳ್ಳಲು ಮುಂದಾದ ಜೆಫ್ ತಾನು ಕಟ್ಟಿಬೆಳೆಸಿದ ಅಮೆಜಾನ್​ನ ಸ್ಟಾಕ್​ ಮಾರಾಟ ಮಾಡಿ ಬ್ಲೂ ಒರಿಜಿನ್ ಸಂಸ್ಥೆ ನಿರ್ಮಿಸಿದರು. ಇದೀಗ ಈ ಸಂಸ್ಥೆಯಲ್ಲಿ 3,500 ಮಂದಿ ಕೆಲಸ ಮಾಡುತ್ತಿದ್ದು ಸ್ಯಾಟಲೈಟ್​ಗಳನ್ನ ಉಡಾಯಿಸಲು ಬಳಸುವ ರಾಕೆಟ್​ ಎಂಜಿನ್​ಗಳನ್ನ ತಯಾರು ಮಾಡುತ್ತಿದ್ದಾರೆ.

ಬೆಜೋಸ್ ಇತ್ತೀಚೆಗಷ್ಟೇ ಅಮೆಜಾನ್ ಸಿಇಓ ಸ್ಥಾನದಿಂದ ಕೆಳಗಿಳಿದು ಇದೀಗ ಇ ಕಾಮರ್ಸ್​ನ ಎಕ್ಸಿಕ್ಯುಟಿವ್ ಚೇರ್​ಮನ್ ಆಗಿದ್ದಾರೆ.

The post ರಿಚರ್ಡ್ ಬ್ರಾನ್ಸನ್ ಬೆನ್ನಲ್ಲೇ ಅಂತರಿಕ್ಷ ಸುತ್ತಿ ಬಂದ ಅಮೆಜಾನ್ ಒಡೆಯ ಜೆಫ್ ಬೆಜೋಸ್ appeared first on News First Kannada.

Source: newsfirstlive.com

Source link