ಕರೆ ಬಂದ ಕೂಡಲೇ ಸ್ಥಳಕ್ಕ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ರಿಚ್ಮಂಡ್ ಸರ್ಕಲ್ ಬಳಿ ಬಾಂಬ್ ಇಟ್ಟಿರೋದಾಗಿ ಬೆಂಗಳೂರಿನ ಸಂಪಂಗಿರಾಮನಗರದ ಪೊಲೀಸರಿಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದ ಬ್ಯಾಗ್ ಇದೆ. ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾನೆ. ಕರೆ ಬಂದ ಕೂಡಲೇ ಸ್ಥಳಕ್ಕ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದಾರೆ.
ಬಣ್ಣ ಬಣ್ಣದ ದಾರಗಳ ಜೊತೆ ಇಟ್ಟಿದ್ದ ಡೆಕೊರೇಷನ್ ಲೈಟ್ ನಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸಂಪಂಗಿರಾಮನಗರ ಪೊಲೀಸರಿಂದ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ರಿಚ್ಮಂಡ್ ವೃತ್ತದ ಬಳಿ ಅನುಮಾನಾಸ್ಪದ ಬ್ಯಾಗ್ ಇದೆ. ಅದರಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದರು. ಆದ್ರೆ ಬ್ಯಾಗ್ನಲ್ಲಿ ಬಣ್ಣಬಣ್ಣದ ದಾರಗಳ ಜತೆ ಇಟ್ಟಿದ್ದ ಡೆಕೊರೇಷನ್ ಲೈಟ್ಗಳು ಸಿಕ್ಕಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ