ಸ್ಫೋಟಕ ಬ್ಯಾಟ್ಸ್​​ಮನ್​ ಮತ್ತು ಮಿಸ್ಟರ್​​ 360​ ಎಬಿ ಡಿ ವಿಲಿಯರ್ಸ್​​​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುತ್ತಾರೆ ಎಂದು ಕಾದುಕುಳಿತಿದ್ದ ಅಭಿಮಾನಿಗಳ ಕನಸು ನುಚ್ಚು ನೂರಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​​ನಿಂದ ನಿವೃತ್ತಿ ವಾಪಸ್​ ಪಡೆಯದಿರಲು ಎಬಿಡಿ ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್​ ಸೌತ್​ ಆಫ್ರಿಕಾ ಸ್ಪಷ್ಟಪಡಿಸಿದೆ.

ಅಕ್ಟೋಬರ್​​ – ನವೆಂಬರ್​​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸೌತ್​ ಆಫ್ರಿಕಾ ತಂಡದ ಪರ ವಿಲಿಯರ್ಸ್​​​ ಮತ್ತೆ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಈ ಕುರಿತು ತಂಡದ ಕೋಚ್​ ಮಾರ್ಕ್​​ ಬೌಚರ್​​ ಮತ್ತು ಕ್ರಿಕೆಟ್​ ಮಂಡಳಿ ಮಾತುಕತೆ ನಡೆಸಿತು. ಆದರೆ ಮಾತುಕತೆ ಫಲಿಸಲಿಲ್ಲ. ಮೇ 2018ರಲ್ಲಿ ವಿಲಿಯರ್ಸ್ ಕ್ರಿಕೆಟ್‌ ಬದುಕಿಗೆ ನಿವೃತ್ತಿ ಘೋಷಿಸಿದ್ದರು.

ತಮ್ಮ ನಿವೃತ್ತಿ ವಾಪಸ್​ ಪಡೆದು, ಮತ್ತೆ ದೇಶದ ಜೆರ್ಸಿ ತೊಡುವಂತೆ ಎಂದು ಮನವಿ ಮಾಡಿದ್ದೆವು. ಆದರೆ ಪುನಾರಾಗಮನದ ಯಾವುದೇ ಯೋಚನೆ ಇಲ್ಲ. ನೀಡಿರುವ ನಿವೃತ್ತಿ ವಾಪಸ್​​ ಪಡೆಯುವ ಮನಸ್ಸಿಲ್ಲ ಎಂದಿದ್ದಾರೆ ಎಂದು CSA ಹೇಳಿದೆ. ಈ ಮೂಲಕ ಹಲವು ದಿನಗಳಿಂದ ಅವರ ಪುನರಾಗಮನದ ಬಗೆಗಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

The post ರಿಟೈರ್​ಮೆಂಟ್​ ನಿರ್ಧಾರವೇ ಫೈನಲ್- ಕಮ್​ಬ್ಯಾಕ್ ಪ್ರಶ್ನೆಯೇ ಇಲ್ಲ..!- ಡಿವಿಲಿಯರ್ಸ್​​ appeared first on News First Kannada.

Source: newsfirstlive.com

Source link