ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದ ಸಿನಿಮಾದಲ್ಲಿ ನಟಿಸೋ ಆಸೆ ಇದೆಯಾ..? ಈ ಸ್ಟೋರಿ ಓದಿ


ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ  ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್​ ಅನ್ನು ಉಪೇಂದ್ರ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಕಾಸ್ಟಿಂಗ್​ ಕಾಲ್​ ಮಾಡಿದ್ದಾರೆ. ಉಪ್ಪಿ ತಾವು ಮತ್ತೆ ಡೈರೆಕ್ಟರ್​ ಕ್ಯಾಪ್ ತೊಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನ ಮಾಡಲು ಹೊರಟಿರುವ ಹೊಸ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

14 ರಿಂದ 60 ವರ್ಷ ವಯಸ್ಸಿನವರಿಗೆ  ಉಪೇಂದ್ರ ಅವರ ಚಿತ್ರದಲ್ಲಿ ಅಭಿನಯಿಸುವ ಸುವರ್ಣಾವಕಾಶ ಸಿಕ್ಕಿದೆ. ಆಸಕ್ತಿ ಹೊಂದಿರುವವರು ತಾವು ನಟಿಸಿರುವ ( 2 ನಿಮಿಷ ಮೀರದಂತೆ ) ವಿಡಿಯೋ ತುಣುಕುಗಳನ್ನು [email protected] ಮೈಲ್ ಐಡಿಗೆ ಕಳುಹಿಸಿಕೊಡಬಹುದು. ಮುಂದಿನ ತಿಂಗಳು ಮಾರ್ಚ್-10ನೇ ತಾರೀಖಿನ ಒಳಗೆ ವಿಡಿಯೋವನ್ನು ಕಳುಹಿಸಿಕೊಡಲು ಆವಕಾಶ ನೀಡಲಾಗಿದೆ. ಆಸಕ್ತಿ ಹೊಂದಿರುವವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅದೃಷ್ಟ ಯಾರಿಗಾದರೂ ಒಲಿಯಬಹುದು.

News First Live Kannada


Leave a Reply

Your email address will not be published.