‘ರಿಯಲ್ ಟೆಸ್ಟ್’​ಗೆ ಟೀಮ್ ಇಂಡಿಯಾ ಸಜ್ಜು- ನಂ.1 ಪಟ್ಟದ ಮೇಲೆ ಕೋಚ್ ದ್ರಾವಿಡ್ ಕಣ್ಣು

ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿ ಮುಕ್ತಾಯಗೊಂಡಿದೆ. ವೈಟ್​ವಾಶ್​ ಸಾಧನೆಯೊಂದಿಗೆ ರಾಹುಲ್ ದ್ರಾವಿಡ್-ರೋಹಿತ್​​​​​​​ ಶರ್ಮಾರ​​ ಹವಾ ಶುರುವಾಗಿದೆ. ಆದ್ರೀಗ ಟೆಸ್ಟ್​ ಸರಣಿಯತ್ತ ಚಿತ್ತ ನಟ್ಟಿರುವ ದ್ರಾವಿಡ್ ಮಾರ್ಗದರ್ಶನದ ಟೀಮ್ ಇಂಡಿಯಾ, ಈ ಸರಣಿಯಲ್ಲೂ ಕ್ಲೀನ್​​ಸ್ವೀಪ್ ಮಾಡೋದರ ಮೇಲೆ ದೃಷ್ಟಿ ನೆಟ್ಟಿದೆ.

ಟಿ20 ವಿಶ್ವಕಪ್​ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ವೈಟ್​​​ವಾಶ್​ ಸಾಧನೆಯೊಂದಿಗೆ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ಈಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಡಿ ಕಿವೀಸ್​ ತಂಡವನ್ನ ಎದುರಿಸಲಿದೆ. ಟಿ20 ಸರಣಿಯನ್ನ ಗೆದ್ದಿರುವ ಟೀಮ್ ಇಂಡಿಯಾ, ಈಗ ಅಜಿಂಕ್ಯಾ ರಹಾನೆ ಮುಂದಾಳತ್ವದಲ್ಲಿ ಟೆಸ್ಟ್​ ಸರಣಿಯ ಅಗ್ನಿಪರೀಕ್ಷೆ ಸನ್ನದ್ಧವಾಗಿದೆ. ಆದ್ರೆ ಈ ಸರಣಿಯಲ್ಲಿ ಮತ್ತೆ ತನ್ನ ಅಧಿಪತ್ಯ ಮರೆಯಲು ಮಹಾದಾಸೆ ಹೊಂದಿದೆ.

ದ್ರಾವಿಡ್ ಮಾರ್ಗದರ್ಶನದ ಗುರಿ ನಂ.1 ಪಟ್ಟದ ಮೇಲೆ..!
ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನ ವಿಶ್ವದ ನಂ.1 ತಂಡವಾಗಿ ಟೆಸ್ಟ್​ ಕ್ರಿಕೆಟ್​ ಆಳುತ್ತಿದ್ದ ಟೀಮ್ ಇಂಡಿಯಾ, 2020ರ ಮಾರ್ಚ್ ತನಕ ಟೆಸ್ಟ್​​ ಕ್ರಿಕೆಟ್​ನ ಅಧಿಪತಿಯಾಗಿ ಮೆರೆದಿತ್ತು. ಅತ್ತ ನ್ಯೂಜಿಲೆಂಡ್ ಪಾಕ್ ಸರಣಿ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿ, ಕುಸಿದಿತ್ತು. ನಂತರ ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್, ಟೀಮ್ ಇಂಡಿಯಾದ ನಂ,1 ಪಟ್ಟವನ್ನ ಕಸಿದಿತ್ತು. ಈ ಬಳಿಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನೊಂದಿಗೆ ನಂ.1ಪಟ್ಟಕ್ಕೆ ಮತ್ತಷ್ಟು ದೂರವಾಗಿತ್ತು. ಆದ್ರೀಗ ಮತ್ತೊಮ್ಮೆ ಅಗ್ರಸ್ಥಾಕ್ಕೇರುವ ಸುವರ್ಣವಾಕಾಶ ಟೀಮ್ ಇಂಡಿಯಾ ಮುಂದಿದೆ.

ಟೆಸ್ಟ್​ ಸರಣಿ ಕ್ಲೀನ್​ಸ್ವೀಪ್ ಜೊತೆ ನಂ.1 ಪಟ್ಟ ಕಸಿಯಲು ಪ್ಲಾನ್..!
ಹೌದು..! ಸದ್ಯ ಟಿ20 ಸರಣಿಯನ್ನ ಯಶಸ್ವಿಯಾಗಿ ಮುಗಿಸಿರುವ ಟೀಮ್ ಇಂಡಿಯಾ, ನವೆಂಬರ್ 25ರಿಂದ ಟೆಸ್ಟ್​ ಸರಣಿಯನ್ನಾಡಲಿದೆ. ಆದ್ರೆ ಈ ಸರಣಿಯಲ್ಲಿ ಮತ್ತೊಮ್ಮೆ ವಿಶ್ವ ನಂ.1 ಟೆಸ್ಟ್​ ತಂಡವಾಗಿ ಹೊರಹೊಮ್ಮುವ ಅವಕಾಶ, ಟೀಮ್ ಇಂಡಿಯಾಕ್ಕಿದೆ. ಆದ್ರೆ ಇದಕ್ಕಾಗಿ ಟೀಮ್ ಇಂಡಿಯಾ, ಟಿ20 ಸರಣಿಯಂತೆ ಟೆಸ್ಟ್​ ಸರಣಿಯನ್ನೂ ಕ್ಲೀನ್​ಸ್ವೀಪ್ ಮಾಡಬೇಕಿದೆ.

ಸದ್ಯ 119 ಅಂಕಗಳೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಱಂಕಿಂಗ್​ನ 2ನೇ ಸ್ಥಾನದಲ್ಲಿದ್ರೆ, ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆದ್ರೆ, ಈ ಟೆಸ್ಟ್​ ಸರಣಿಯನ್ನ 2-0 ಅಂತದಿಂದ ಟೀಮ್ ಇಂಡಿಯಾ ಕೈವಶ ಮಾಡಿಕೊಂಡರೆ, ಮತ್ತೆ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ನ ನಂ.1 ತಂಡ ಎನಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ದ್ರಾವಿಡ್ ಮಾರ್ಗದರ್ಶನಲ್ಲಿ ಟೀಮ್ ಇಂಡಿಯಾ ಸಮರಾಭ್ಯಾಸ ನಡೆಸುತ್ತಿದೆ. ಆದ್ರೆ ಇತ್ತಿಚೆಗೆ ಎಲ್ಲಾ ಫಾರ್ಮೆಟ್​ನಲ್ಲೂ ಅದ್ಬುತ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್, ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ಅನ್ನೋದನ್ನ ಮರೆಯುವಂತಿಲ್ಲ.

News First Live Kannada

Leave a comment

Your email address will not be published. Required fields are marked *