ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ | Bellary girls found in Bengaluru who left house to achieve something after watching reality show


ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ

ರಿಯಾಲಿಟಿ ಶೋ ನೋಡಿ ಸಾಧನೆ ಮಾಡ್ತೀವಿ ಎಂದು ಬಳ್ಳಾರಿ ತೊರೆದಿದ್ದ ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆ

ಬೆಂಗಳೂರು: ಬಳ್ಳಾರಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರು ಬಾಲಕಿಯರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ರಿಯಾಲಿಟಿ ಶೋ ವೀಕ್ಷಿಸಿ ಊರು ತೊರೆದಿದ್ದ ನಾಲ್ವರು ಬಾಲಕಿಯರನ್ನು 12 ಗಂಟೆಯೊಳಗೆ ಪತ್ತೆ ಮಾಡಲಾಗಿದೆ. ಬೆಂಗಳೂರಿನಲ್ಲಿ KSRTC ಸಿಬ್ಬಂದಿ ಬಾಲಕಿಯರನ್ನು ರಕ್ಷಣಿಸಿದ್ದಾರೆ. ಬಾಲಕಿಯರು, ನಾವು ಏನಾದರೂ ಸಾಧನೆ ಮಾಡಿ ಬರ್ತಿವಿ, ನಮ್ಮ ಬಗ್ಗೆ ಚಿಂತಿಸಬೇಡಿ ಎಂದು ಪೋಷಕರ ಮೊಬೈಲ್ನಲ್ಲಿ ಆಡಿಯೋ ಮಾಡಿ ಮನೆ ಬಿಟ್ಟಿದ್ದರು. ಆಡಿಯೋ ಕೇಳಿಸಿಕೊಂಡು ಪೋಷಕರು ಊರೆಲ್ಲಾ ಹುಡುಕಾಡಿದ್ದರು. ಬಳ್ಳಾರಿಯ ಪಾರ್ವತಿನಗರದ ಮನೆಯಿಂದ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಕಾಣೆಯಾಗಿದ್ದವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

TV9 Kannada


Leave a Reply

Your email address will not be published.