ರಿಲೀಸ್​ಗೂ ಮೊದಲೇ ಸಾವಿರ ಕೋಟಿ ಸಮೀಪಿಸಿತು ‘ಆರ್​ಆರ್​ಆರ್​’ ಗಳಿಕೆ; ರಾಜಮೌಳಿ ಹೊಸ ದಾಖಲೆ | SS Rajamouli RRR Movie Pre release business is 890 crore


ರಿಲೀಸ್​ಗೂ ಮೊದಲೇ ಸಾವಿರ ಕೋಟಿ ಸಮೀಪಿಸಿತು ‘ಆರ್​ಆರ್​ಆರ್​’ ಗಳಿಕೆ; ರಾಜಮೌಳಿ ಹೊಸ ದಾಖಲೆ

ಆರ್​ಆರ್​ಆರ್​ನಲ್ಲಿ ಎನ್​ಟಿಆರ್​

ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕೆಲಸದ ಬಗ್ಗೆ ಎಲ್ಲರಿಗೂ ದೊಡ್ಡ ಭರವಸೆ ಬಂದಿದೆ. ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿರುವುದಕ್ಕೆ ‘ಆರ್​ಆರ್​ಆರ್​’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್​ ನಟರ ದಂಡೇ ‘ಆರ್​ಆರ್​ಆರ್​’ನಲ್ಲಿದೆ. ಈ ಸಿನಿಮಾದ ಟ್ರೇಲರ್​ನಲ್ಲಿ ಒಂದಷ್ಟು ವಿಚಾರ ರಿವೀಲ್​ ಆಗುವ ಸಾಧ್ಯತೆ ಇದೆ. ಈ ಚಿತ್ರ ರಿಲೀಸ್​ ಆಗುವುದಕ್ಕೂ ಮೊದಲೇ ನೂರಾರು ಕೋಟಿ ಬಿಸ್ನೆಸ್​ ಮಾಡಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದು ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಂಕ್ರಾಂತಿಗೆ ಸಿಗುತ್ತಿರುವ ಅತಿ ದೊಡ್ಡ ಗಿಫ್ಟ್​. ಹಬ್ಬದ ಸಂದರ್ಭವಾದ್ದರಿಂದ ಚಿತ್ರ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪೋಸ್ಟರ್​, ಟೀಸರ್​ ಹಾಗೂ ಹಾಡುಗಳು ಚಿತ್ರದ ನಿರೀಕ್ಷೆಯನ್ನು ಈಗಾಗಲೇ ಹೆಚ್ಚಿಸಿದೆ. ಡಿಸೆಂಬರ್ 9ರಂದು ರಿಲೀಸ್​ ಆಗುವ ಟ್ರೇಲರ್​ ಮೇಲೆಯೂ ಹೆಚ್ಚು ಕುತೂಹಲ ಇಟ್ಟುಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಒಳ್ಳೆಯ ಬಿಸ್ನೆಸ್​ ಮಾಡಿದೆ. ರಿಲೀಸ್​ಗೂ ಮೊದಲೇ ಈ ಚಿತ್ರ ಬರೋಬ್ಬರಿ 890 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ.

ಹೈಪ್​ ಇರುವ ಸಿನಿಮಾಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳೋಕೆ ಒಟಿಟಿ ಪ್ಲಾಟ್​ಫಾರ್ಮ್​​ಗಳು ಪ್ರಯತ್ನಿಸುತ್ತಾರೆ. ಈಗ ‘ಆರ್​ಆರ್​ಆರ್​’ ಪ್ರಸಾರ ಹಕ್ಕನ್ನು ಒಟಿಟಿ ಪ್ಲಾಟ್​ಫಾರ್ಮ್​ ಒಂದು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಹಾಗಂದ ಮಾತ್ರಕ್ಕೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ​ ಆಗುವುದಿಲ್ಲ ಎಂದಲ್ಲ. ಸಿನಿಮಾ ಬಿಡುಗಡೆಯಾದ ಒಂದಷ್ಟು ತಿಂಗಳ ನಂತರದಲ್ಲಿ ಒಟಿಟಿಯಲ್ಲಿ ರಿಲೀಸ್​ ಆಗಲಿದೆ.

ಇನ್ನು, ಸಿನಿಮಾದ ಹಾಡಿನ ಹಕ್ಕು, ಸೆಟಲೈಟ್​ ಹಕ್ಕು ಸೇರಿದಂತೆ ಮತ್ತಿತರ ವಿಚಾರಗಳಲ್ಲಿ ಈಗಾಗಲೇ ಡೀಲ್​ಗಳು ಕುದುರಿವೆ. ಹೀಗಾಗಿ, ಸಿನಿಮಾ ರಿಲೀಸ್​ಗೂ ಮೊದಲೇ ಇಷ್ಟೊಂದು ದೊಡ್ಡ ಮೊತ್ತದ ಬಿಸ್ನೆಸ್​ ಮಾಡಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಸಿನಿಮಾ ತಜ್ಞರ ಪ್ರಕಾರ ಈ ಸಿನಿಮಾ ವಿದೇಶದಲ್ಲಿ 1000+ ಮಲ್ಟಿಫ್ಲೆಕ್ಸ್​ನಲ್ಲಿ ಬಿಡುಗಡೆ ಆಗುತ್ತಿದೆ. ಇದರಿಂದ ಬಾಕ್ಸ್​ ಆಫೀಸ್​ ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ.

TV9 Kannada


Leave a Reply

Your email address will not be published. Required fields are marked *