ಬಾಲನಟನಾಗಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದ  ನಟ ತೇಜ್ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಹಿರಿಯ ನಟ ಶಂಕರ್ ನಾಗ್ ಅವರ ಜೊತೆ ಮಹೇಶ್ವರ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ನಂತರ 15 ವರ್ಷದವರಿದ್ದಾಗ ಮೀಸೆ ಚಿಗುರಿದಾಗ ಸಿನಿಮಾದಲ್ಲಿಯೂ ನಟಿಸಿದ್ದರು.  ನಂತರ ಸಿನಿಮಾ ರಂಗದ ಕಡೆ ಬಾರದೇ ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದರು.

18 ವರ್ಷಗಳ  ನಂತರ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ. ಹಿಂದೆಯೇ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ತೇಜ್ ಇದುವರೆಗೂ 6 ಸಿನಿಮಾಗಳನ್ನ ಮಾಡಿದ್ದಾರೆ. ಕನ್ನಡ ಅಲ್ಲದೇ ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ತೇಜ್ ಅಭಿನಯಿಸಿದ್ದಾರೆ.

ನಟನೆಯ ಜೊತೆ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಕೂಡ ಹೊತ್ತಿದ್ದಾರೆ ತೇಜ್, ತೇಜ್ ತರಬೇತಿ ಪಡೆದ ನಟನಲ್ಲ, ಆದರೆ ತಮ್ಮ ಅಭಿರುಚಿಗಾಗಿ ಸಿನಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಂದನ ರಿವೈಂಡ್ ಸಿನಿಮಾದಲ್ಲಿ ತೇಜ್ ಗೆ ನಾಯಕಿಯಾಗಿದ್ದಾರೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More