ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಸೋಲಿಗೆ ಟೀಮ್​ ಇಂಡಿಯಾದ ಬ್ಯಾಟಿಂಗ್​ ವೈಫಲ್ಯವೇ ನೇರ ಹೊಣೆ ಅನ್ನೋ ಆರೋಪ ಕೇಳಿಬಂದಿದೆ. ಯಾವ ಬ್ಯಾಟ್ಸ್​ಮ್ಯಾನ್​ಗಳು ಕೂಡ ಜವಾಬ್ದಾರಿಯನ್ನರಿತು ಬ್ಯಾಟ್​ ಬೀಸಲೇ ಇಲ್ಲ. ಇದರಿಂದ ವಿಶೇಷ ಸೆನ್ಸೇಷನ್​ ಹುಟ್ಟು ಹಾಕಿದ್ದ​​ ಪಂತ್​ ಕೂಡ ಹೊರತಾಗಲಿಲ್ಲ.

ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 4 ರನ್ ​ಗಳಿಸಿ ಔಟಾದ ಪಂತ್​, 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಸ್ಟಾರ್ಟ್​ ಪಡೆದುಕೊಂಡ್ರು. ಇನ್​ಫ್ಯಾಕ್ಟ್​​​ 2ನೇ ಇನ್ನಿಂಗ್ಸ್​​ನಲ್ಲಿ ಟೀಮ್ ​ಇಂಡಿಯಾ ಪರ ಅತಿ ಹೆಚ್ಚು ರನ್​ ಕಲೆ ಹಾಕಿದ ಬ್ಯಾಟ್ಸ್​​ಮ್ಯಾನ್​ ಕೂಡ ರಿಷಭ್​ ಪಂತ್. ಆದ್ರೆ ಪಂತ್​ ಔಟಾದ ರೀತಿ ಹಾಗೂ ಸಂದರ್ಭ ಈಗ ಚರ್ಚೆಗೆ ಗ್ರಾಸವಾಗಿರೋದು.

ಬ್ಯಾಡ್​​ ಶಾಟ್​​ ಆಡಲು ಹೋಗಿ ಕೈ ಸುಟ್ಟುಕೊಂಡ ರಿಷಭ್​
ಟೀಮ್ ​ಇಂಡಿಯಾ ಸ್ಟಾರ್​ಗಳೇ ಪೆವಿಲಿಯನ್​ ಸೇರಿದಾಗ ತಂಡಕ್ಕೆ ಆಸರೆಯಾಗಿದ್ದ ಪಂತ್​ ಮೇಲೆ ಹೆಚ್ಚಿನ ನಿರೀಕ್ಷೆಯಿತ್ತು. ಆದ್ರೆ 69 ಓವರ್​​ನ 2ನೇ ಎಸೆತದಲ್ಲಿ ಆ ನಿರೀಕ್ಷೆ ಹುಸಿಯಾಯ್ತು. ಬೋಲ್ಟ್​ ಎಸೆತವನ್ನ ಸ್ಲಾಗ್​ ಮಾಡುವ ಯತ್ನದಲ್ಲಿ ಪಂತ್​ ಎಡವಿದ್ರು. ನಿಜಕ್ಕೂ ಪಂದ್ಯದ ಆ ಸ್ಥಿತಿಯಲ್ಲಿ ರಿಷಭ್​ ಆ ಶಾಟ್​​ ಪ್ಲೇ ಮಾಡುವ ಅಗತ್ಯವೇ ಇರಲಿಲ್ಲ.

ಪಂತ್​ಗೆ ತಿಳಿದಿಲ್ಲ ಕೇರ್​ ಫ್ರೀ – ಕೇರ್​ಲೆಸ್​​ ನಡುವಿನ ವ್ಯತ್ಯಾಸ
ಪಂದ್ಯಕ್ಕೂ ಮುನ್ನ ಪಂತ್ ಬ್ಯಾಟಿಂಗ್ ಶೈಲಿಯನ್ನ​ ಹಲವರು ಹಲವು ರೀತಿಯಲ್ಲಿ ಬಣ್ಣಿಸಿದ್ರು. ಪಂತ್​ರ ಫಿಯರ್​ಲೆಸ್​​ ಹಾಗೂ ಡೇರ್​​ಡೆವಿಲ್​ ಅಪ್ರೋಚ್​ ಅನ್ನ ಗುಣಗಾನ ಮಾಡಿದ್ದಾರೆ. ಆದ್ರೆ, 2ನೇ ಇನ್ನಿಂಗ್ಸ್​ನಲ್ಲಿ ಪಂತ್​ ಔಟ್​​ ಆದ ರೀತಿ ಎಲ್ಲರಿಗೂ ನಿರಾಸೆ ಮೂಡಿಸಿದೆ. ಇದನ್ನ ಸೂಕ್ಷ್ಮವಾಗಿ ಅವಲೋಕಿಸಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್​, ಕೇರ್​ ಫ್ರೀ – ಕೇರ್​ಲೆಸ್ ನಡುವಿನ ವ್ಯತ್ಯಾಸ ಪಂತ್​ಗೆ ತಿಳಿದಿಲ್ಲ ಎಂದು ಚಾಟಿ ಬೀಸಿದ್ದಾರೆ.

‘ಕೇರ್​ ಫ್ರೀ – ಕೇರ್​ಲೆಸ್ ನಡುವಿನ ವ್ಯತ್ಯಾಸ ತಿಳಿದಿಲ್ಲ’
‘ಕೇರ್​ ಫ್ರೀ – ಕೇರ್​ಲೆಸ್​ ನಡುವೆ ಸಣ್ಣದಾದ ರೇಖೆಯಿದೆ. ಪಂತ್​ ಕೇರ್​ ಫ್ರಿ – ಕೇರ್​ಲೆಸ್​ ನಡುವಿನ ರೇಖೆಯನ್ನ ಉಲ್ಲಂಘಿಸಿದ್ಧಾರೆ. ಹಲವು ಸಲ ಆತ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾನೆ. ಅದೂ 90ರನ್​ಗಳಿಸಿದ ಮೇಲೆ . ಹೀಗಾಗಿಯೇ ಶತಕಗಳಿಸುವ ಅವಕಾಶವನ್ನೂ ಕೈ ಚೆಲ್ಲಿದ್ದಾನೆ. ಶಾಟ್​ ಸೆಲೆಕ್ಷನ್​ನಲ್ಲಿ ಎಡವೋದೇ ಪಂತ್​ಗಿರುವ ದೊಡ್ಡ ಸಮಸ್ಯೆ’

ಸುನಿಲ್​ ಗವಾಸ್ಕರ್​​, ಮಾಜಿ ಕ್ರಿಕೆಟಿಗ

ಹೌದು..! ಗವಾಸ್ಕರ್​ ಹೇಳಿದಂತೆ ಪಂತ್​, ಕೇರ್​ ಫ್ರಿ – ಕೇರ್​ಲೆಸ್​ ನಡುವಿನ ರೇಖೆಯನ್ನ ಉಲ್ಲಂಘಿಸಿದ್ಧಾರೆ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​ ಪಂದ್ಯದಲ್ಲಿ ಪಂತ್​ ಔಟಾಗಿದ್ದು ಕೂಡ ಅನ್​ವಾಂಟೆಡ್​ ಶಾಟ್​​ಗೆ. 97 ರನ್ ​ಗಳಿಸಿ ಆಡ್ತಿದ್ದ ಪಂತ್​, ನಥನ್​ ಲಯನ್​ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ, ಕೈ ಸುಟ್ಟುಕೊಂಡಿದ್ರು.

ಪಂತ್​ ಬೇಜವಾಬ್ಧಾರಿಯುತ ಬ್ಯಾಟಿಂಗ್​ನೊಂದಿಗೆ ತಂಡದ ಜವಾಬ್ಧಾರಿಯ ಅರಿವಿಲ್ಲದಿರುವುದೂ ಈಗ ಚರ್ಚೆಯ ವಿಷಯವೇ. ಕೀಪಿಂಗ್​ನಲ್ಲಿ ಕಾಣ್ತಿರುವ ವೈಫಲ್ಯ ಹಾಗೂ ಡಿಆರ್​​ಎಸ್​​ ತೆಗೆದುಕೊಳ್ಳುವಲ್ಲಿ ನೀಡುವ ತಪ್ಪು ಸಲಹೆಗಳು ಕೂಡ ಪಂತ್​ ವೈಫಲ್ಯಗಳೇ ಆಗಿವೆ. ಹೀಗಾಗಿಯೇ ಇಷ್ಟೆಲ್ಲಾ ವೈಫಲ್ಯಗಳನ್ನ ಹೊಂದಿದ್ರೂ, ಪಂತ್​​ಗೆ ಯಾಕೆ ಅಷ್ಟೊಂದು ಹೈಪ್​ ನೀಡಲಾಗ್ತುದೆ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಈ ಎಲ್ಲಾ ಹಿನ್ನಡೆಗಳ ನಡುವೆ ಪಂತ್​ಗೆ ಪಂದ್ಯದ ನಿರ್ಧಾರಗಳನ್ನ ಬದಲಿಸಬಹುದಾದ ಸಾಮರ್ಥ್ಯವನ್ನ ಅಲ್ಲಗಳೆಯುವಂತಿಲ್ಲ. ಹೀಗಾಗಿಯೇ ತಾಳ್ಮೆಯ ಹಾಗೂ ಜವಾಬ್ಧಾರಿಯುತ ಬ್ಯಾಟಿಂಗ್​ ಶೈಲಿಯನ್ನ ಎಲ್ಲರೂ ನಿರೀಕ್ಷೆ ಮಾಡ್ತಾ ಇರೋದು. ತಮ್ಮ ಬ್ಯಾಟಿಂಗ್​ನಲ್ಲಿರೋ ಟೆಕ್ನಿಕಲ್​ ಸಮಸ್ಯೆಗಳನ್ನ ಪರಿಹರಿಸಿಕೊಂಡಿದ್ದೇ ಆದಲ್ಲಿ ಪಂತ್​, ತಂಡದ ಖಾಯಂ ಆಟಗಾರನಾಗೋದ್ರಲ್ಲಿ ಅನುಮಾನವೇ ಇಲ್ಲ.

The post ‘ರಿಶಭ್​ ಪಂತ್​ಗೆ ಕೇರ್​ ಫ್ರೀ-ಕೇರ್​ಲೆಸ್ ನಡುವಿನ ವ್ಯತ್ಯಾಸ ತಿಳಿದಿಲ್ಲ’ -ಗವಾಸ್ಕರ್​ appeared first on News First Kannada.

Source: newsfirstlive.com

Source link