ರಿಷಭ್​ ಪಂತ್ ಕಂಡ್ರೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್​​ಗೆ ಆತಂಕ..?

ರಿಷಭ್​ ಪಂತ್ ಕಂಡ್ರೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್​​ಗೆ ಆತಂಕ..?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಫೈಟ್,​ ದಿನೇ ದಿನೆ ರೋಚಕತೆ ಪಡೆದುಕೊಳ್ತಿದೆ. ಐಸಿಸಿಯ ಈ ಮಹತ್ವದ ಪಂದ್ಯ ಗೆಲ್ಲಲೇಬೇಕೆಂದು ಪಣತೊಟ್ಟಿರೋ ನ್ಯೂಜಿಲೆಂಡ್,​ ಟೀಮ್​​ ಇಂಡಿಯಾದ ಈ ಆಟಗಾರನ ಮೇಲೆ ಕಣ್ಣಿಟ್ಟಿದೆ​. ಕಿಂಗ್​​ ಕೊಹ್ಲಿ, ಹಿಟ್​​ಮ್ಯಾನ್​ ರೋಹಿತ್​ ಶರ್ಮಾರಂಥ ಆಟಗಾರರನ್ನು ಫೋಕಸ್​​ ಮಾಡೋದಿಲ್ಲ ಎಂದಿರುವ ಬ್ಲ್ಯಾಕ್ ​​ಕ್ಯಾಪ್ಸ್​​​, ಫಿಯರ್​ಲೆಸ್, ಅಗ್ರೆಸ್ಸಿವ್​ ಆಟವಾಡುವ ರಿಷಭ್​ ಪಂತ್​ ನಮ್ಮ ಬಿಗ್​​ ಫಿಶ್​​. ಹಾಗಾಗಿ ಈತನನ್ನೇ ಹೆಚ್ಚು ಟಾರ್ಗೆಟ್​ ಮಾಡಿದ್ದೇವೆ. ಹೀಗೆ ಹೇಳಿದ್ದು ಕಿವೀಸ್​​ ಬೌಲಿಂಗ್​ ಕೋಚ್ ​ಶೇನ್ ​​ಜರ್ಗೆನ್ಸನ್​​​.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ, ಈಗಾಗಲೇ ಆಂಗ್ಲರ ನಾಡಲ್ಲಿ ಬೀಡು ಬಿಟ್ಟಿರುವ ಕಿವೀಸ್​, ಭರ್ಜರಿ ತಯಾರಿ ನಡೆಸ್ತಿದೆ. ಇನ್ನು ಹೋಟೆಲ್​ ಕ್ವಾರಂಟೀನ್​​​ನಲ್ಲಿರೋ ಭಾರತ, ಜೂನ್​ 2ರಂದು ಇಂಗ್ಲೆಂಡ್​ಗೆ ಹಾರಲಿದೆ. ಕಿವೀಸ್​​​ ಬೌಲಿಂಗ್​ ಕೋಚ್​​​ ಎದೆ​ ನಡುಗಿಸುವಂತೆ ಮಾಡಿರುವ​ ಪಂತ್​​, ಪಂದ್ಯಕ್ಕೂ ಮುನ್ನವೇ ಭಯ ಹುಟ್ಟಿಸಿದ್ದು, ಮತ್ತಷ್ಟು ಹೈವೋಲ್ಟೇಜ್​ಗೆ ಕಾರಣವಾಗಿದೆ.

21 ವಾರಗಳಲ್ಲಿ ಜಗತ್ತನ್ನೇ ತನ್ನತ್ತ ಸೆಳೆದುಕೊಂಡ​ ಪಂತ್
ಯೆಸ್​​..! 2020ರ ಅಂತ್ಯದಲ್ಲಿ ಟೀಮ್​ ಇಂಡಿಯಾ ಆಸಿಸ್​ ಪ್ರವಾಸ ಕೈಗೊಂಡಿತ್ತು. ಸೀಮಿತ ಓವರ್​ಗಳ ಸರಣಿಗೆ ಬೆಂಚ್​ ಕಾದಿದ್ದ ಪಂತ್​, ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿದಿದ್ದ. ಸಿರೀಸ್​​ನ 2ನೇ ಪಂದ್ಯದಲ್ಲಿ ಬ್ಯಾಟಿಂಗ್​​ಗೆ ಬಂದ ಪಂತ್​, ತಕ್ಕಮಟ್ಟಿಗೆ ಪ್ರದರ್ಶನ ನೀಡಿದ್ರು. ಬಳಿಕ ಉಳಿದೆರಡು ಪಂದ್ಯಗಳಲ್ಲಿ ಘರ್ಜಿಸಿದ ಮ್ಯಾಚ್​ ​ಫಿನಿಷರ್​​​, ಸರಣಿಗೆ ಗೆಲುವಿಗೆ ಮೇಜರ್​ ರೋಲ್​ ಪ್ಲೇ ಮಾಡಿದ್ರು. ಹಾಗೆಯೇ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್​ ಸರಣಿಯಲ್ಲೂ, ಪಂತ್​ ಫಿಯರ್​ಲೆಸ್​​ ಆಟಕ್ಕೆ, ರೂಟ್​​ ಪಡೆ ಬೆಚ್ಚಿ ಬಿತ್ತು. ತಂಡದಲ್ಲಿ ಮೇನ್​ ವಿಕೆಟ್​​ಗಳು ಪೆವಿಲಿಯನ್​ನತ್ತ ಹೆಜ್ಜೆ ಹಾಕ್ತಿದ್ರೆ, ಪಂತ್​ ಮಾತ್ರ ಸಿಂಗಲ್ಲಾಗಿ ಪಂದ್ಯ ಗೆಲ್ಲಿಸಿಕೊಟ್ಟು ಗೇಮ್​ ಚೇಂಜರ್​ ಎನಿಸಿಕೊಂಡ್ರು.

ಆಸಿಸ್​ ವಿರುದ್ಧ ಪಂತ್​​
ಪಂದ್ಯ                    03
ರನ್​                     274
ಸರಾಸರಿ               68.50
50/100               02/00

ಇನ್ನು ಇಂಗ್ಲೆಂಡ್​ ವಿರುದ್ಧವೂ ಪಂತ್, ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು.

ಆಂಗ್ಲರ​ ವಿರುದ್ಧ ಪಂತ್​​
ಪಂದ್ಯ                04
ರನ್​                  270
ಸರಾಸರಿ            54.00
50/100             02/01

ಪಂತ್, ಈ ಎರಡೂ ಸರಣಿಗಳಲ್ಲಿ ನಡೆಸಿದ ಅಬ್ಬರದ ಪ್ರದರ್ಶನ, ಎಲ್ಲರ ಗಮನ ಸೆಳೆಯಿತು. ಇದೀಗ ನ್ಯೂಜಿಲೆಂಡ್​ ಬೌಲಿಂಗ್​​ ಕೋಚ್​ ಕೂಡ ಇದೇ ರೀತಿ ಆತಂಕ ವ್ಯಕ್ತಪಡಿಸಿದ್ದು, ರಿಷಭ್​ ಪಂತ್​ ನಮ್ಮ ತಂಡಕ್ಕೆ ಬಿಗ್​​ ಟಾರ್ಗೆಟ್​ ಎಂದಿದ್ದಾರೆ.

ನಮ್ಮ ಟಾರ್ಗೆಟ್​ ಪಂತ್
‘ರಿಷಭ್​ ಪಂತ್​ ಅತ್ಯಂತ ಭಯಾನಕ ಆಟಗಾರ. ಆಸಿಸ್​​-ಇಂಗ್ಲೆಂಡ್​​ ಸರಣಿಗಳಲ್ಲಿ ಪಂತ್​ ಆಕ್ರಮಣಕಾರಿ ಆಟವನ್ನ ಗಮನಿಸಿದ್ದೇನೆ. ಆತನಿಂದಲೇ ಈ ಎರಡೂ ಸರಣಿಗಳನ್ನ ಭಾರತ ಗೆಲ್ಲೋಕೆ ಸಾಧ್ಯವಾಯ್ತು. ಯಾವ ಸಮಯದಲ್ಲಿ ಬೇಕಾದರೂ ಪಂದ್ಯದ ಗತಿ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಪಂತ್​​ರಿಂದ, ನಮಗೆ ತಲೆಬಿಸಿ ಹೆಚ್ಚಾಗಿದೆ. ಹಾಗಾಗಿ ನಾವು ಬೇರೆಯದವರ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಿಲ್ಲ. ನಮ್ಮ ಗುರಿ ಏನಿದ್ದರೂ ಪಂತ್​ ವಿಕೆಟ್​ ಅಷ್ಟೆ’
-ಶೇನ್​​ ಜರ್ಗೆನ್ಸನ್​, ನ್ಯೂಜಿಲೆಂಡ್ ಬೌಲಿಂಗ್​​ ಕೋಚ್​

ಪಂತ್​ನನ್ನೇ ಟಾರ್ಗೆಟ್​​ ಮಾಡ್ತಿರೋದೇಕೆ ಗೊತ್ತಾ..?
ರಿಷಭ್ ಪಂತ್​ನನ್ನ ಟಾರ್ಗೆಟ್​ ಮಾಡ್ತಿರೋದಕ್ಕೆ ಬಲವಾದ ಕಾರಣ ಇದೆ. ಇಂಗ್ಲೆಂಡ್​ -ಆಸೀಸ್​​ ಸರಣಿಗಳಲ್ಲಿ ಪಂತ್​ ಬಿಟ್ಟರೆ, ಯಾರೊಬ್ಬರೂ ಕೂಡ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​​ ನೀಡಿಲ್ಲ. ವಿರಾಟ್​ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಶುಭ್ಮನ್​ ಗಿಲ್​​. ಹೀಗೆ ಪ್ರಮುಖ ಆಟಗಾರರು ಕೈಕೊಟ್ಟಿದ್ದೇ ಹೆಚ್ಚು. ಆ ಸಂದರ್ಭದಲ್ಲಿ ಏಕಾಂಗಿಯಾಗಿ ಪಂದ್ಯಗಳನ್ನ ಗೆಲ್ಲಿಸಿದ್ದು, ರಿಷಭ್ ಪಂತ್.

ಕಿವೀಸ್​ ಬೌಲಿಂಗ್ ಕೋಚ್​​ ಹೆದರಲು ಸಾಹ ಕೂಡ ಕಾರಣ
ಕಿವೀಸ್​ ಬೌಲಿಂಗ್​ ಕೋಚ್​ ಹೆದರಲು ಕಾರಣವೇನು ಅಂತ ನಿಮಗೆ ಅನಿಸಬಹುದು. ಅದಕ್ಕೆ ಪ್ರಮುಖ ಕಾರಣ, ಇತ್ತೀಚಿಗಷ್ಟೇ ಟೀಮ್ ಇಂಡಿಯಾ ವಿಕೆಟ್​ ಕೀಪರ್​​​ ಬ್ಯಾಟ್ಸ್​ಮನ್ ವೃದ್ಧಿಮಾನ್​ ಸಾಹ ನೀಡಿದ್ದ ಹೇಳಿಕೆ! ಯೆಸ್​! ವಿಕೆಟ್​​​ ಕೀಪರ್​​ನಲ್ಲಿ ಮೊದಲ ಆದ್ಯತೆ ಪಂತ್​ಗೇ ನೀಡುತ್ತೇನೆ. ಅದಾದ ಮೇಲೆಯೇ ನಾನು ಎಂದಿದ್ದರು. ಹೀಗಾಗಿ ಭಾರತಕ್ಕೆ ಪಂತೇ ಆಧಾರ ಅನ್ನೋದು, ಆ ಮೂಲಕ ತಿಳಿಸಲಾಗಿದೆ. ಈ ಹೇಳಿಕೆಯನ್ನ ಲೆಕ್ಕಾಚಾರ ಮಾಡಿರುವ ಕಿವೀಸ್​ ಪಡೆ, ಮಹತ್ವದ ಪಂದ್ಯಕ್ಕೂ ಮುನ್ನವೇ ಪಂತ್​​ರಿಂದ ಸಖತ್​ ಟೆನ್ಶನ್​ಗೆ ಒಳಗಾಗಿದೆ.

ಒಟ್ನಲ್ಲಿ 21 ವಾರಗಳಲ್ಲಿ ಅಂದರೆ 5 ತಿಂಗಳಲ್ಲಿ ಈ ರೇಂಜಿಂಗೆ ಇಂಪ್ರೂವ್​ ಆಗಿರುವ ಪಂತ್​, ಫೈನಲ್​ ಪಂದ್ಯದಲ್ಲೂ ಇದೇ ರೀತಿ ಮಿಂಚಿದ್ರೆ, ಟೀಮ್​ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್​ ಆಗೋದ್ರಲ್ಲಿ ಅನುಮಾನವೇ ಇಲ್ಲ..!!

The post ರಿಷಭ್​ ಪಂತ್ ಕಂಡ್ರೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್​​ಗೆ ಆತಂಕ..? appeared first on News First Kannada.

Source: newsfirstlive.com

Source link