ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್? ಪ್ಲೇಯಿಂಗ್ 11 ನಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​? | Rishabh Pant on competition with Dinesh Karthik for spot in Indian team


Team India; ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ.

ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್? ಪ್ಲೇಯಿಂಗ್ 11 ನಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​?

rishabh pant vs dinesh karthik

ಈ ಬಾರಿಯ ಏಷ್ಯಾಕಪ್​ಗಾಗಿ (Asia Cup 2022) ಭಾರತವು 15 ಸದಸ್ಯರ ಬಲಿಷ್ಠ ಪಡೆಯನ್ನೇ ಪ್ರಕಟಿಸಿದೆ. ಈ ತಂಡದಲ್ಲಿ ವಿಕೆಟ್ ಕೀಪರ್​-ಬ್ಯಾಟ್ಸ್​​ಮನ್​ಗಳಾಗಿ ರಿಷಭ್ ಪಂತ್ (Rishabh Pant) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ವಿಕೆಟ್​ ಕೀಪರ್​ಗಳ ಕೋಟಾದಲ್ಲಿ ತಂಡದಲ್ಲಿರುವ ಈ ಇಬ್ಬರು ಆಟಗಾರರ ಪ್ಲೇಯಿಂಗ್ ಇಲೆವೆನ್​ನಲ್ಲಿ ಭಾಗವಾಗಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಪಂತ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಜವಾಬ್ದಾರಿಯನ್ನು ನಿರ್ವಹಿಸಿದರೆ, ಡಿಕೆ ಫಿನಿಶರ್ ಪಾತ್ರದಲ್ಲಿ ಈಗಾಗಲೇ ಹಲವು ಸರಣಿಗಳನ್ನು ಆಡಿದ್ದಾರೆ. ಆದರೆ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡುವುದರಿಂದ  ತಂಡದ ಸಮತೋಲನ ತಪ್ಪುತ್ತಿದೆ ಎಂದು ಹಲವು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರೂ ವಿಕೆಟ್‌ಕೀಪರ್‌ಗಳು ತಂಡದಲ್ಲಿದ್ದರೆ, ಭಾರತವು ಕೇವಲ 3 ಬೌಲರ್‌ಗಳೊಂದಿಗೆ ಮಾತ್ರ ಆಡಲು ಸಾಧ್ಯವಾಗುತ್ತದೆ. ಇದು ಸಮಸ್ಯೆಯನ್ನು ಉಂಟು ಮಾಡಬಹುದು. ಅಲ್ಲದೆ ಭಾರತವು 6 ಬೌಲರ್​ಗಳ ಆಯ್ಕೆಯೊಂದಿಗೆ ಕಣಕ್ಕಿಳಿಯುವುದು ಉತ್ತಮ ಎಂಬ ಅಭಿಪ್ರಾಯಗಳನ್ನು ಮುಂದಿಡಲಾಗುತ್ತಿದೆ. ಅಂದರೆ ಇಲ್ಲಿ ಐದನೇ ಬೌಲರ್​ ಆಗಿ ಹಾರ್ದಿಕ್ ಪಾಂಡ್ಯ ಇದ್ದರೂ, ಹೆಚ್ಚುವರಿ ಬೌಲರ್​ರೊಬ್ಬರನ್ನು ಆಡಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಇದೇ ಕಾರಣದಿಂದಾಗಿ ಇದೀಗ ಏಷ್ಯಾಕಪ್ ಪ್ಲೇಯಿಂಗ್ ಇಲೆವೆನ್​ನಲ್ಲಿ ವಿಕೆಟ್ ಕೀಪರ್ ಆಗಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇಲ್ಲಿ ಪಂತ್ ಹಾಗೂ ಡಿಕೆ ನಡುವೆ ನೇರ ಪೈಪೋಟಿ ಇರುವ ಕಾರಣ ಒಬ್ಬರನ್ನು ಕೈ ಬಿಟ್ಟರೂ ಅಚ್ಚರಿಪಡಬೇಕಿಲ್ಲ. ಆದರೆ ಇಲ್ಲಿ ಯಾರನ್ನು ಕೈ ಬಿಡುವುದು ಎಂಬುದೇ ಪ್ರಶ್ನೆ.

ಇಂತಹದೊಂದು ಪ್ರಶ್ನೆಯನ್ನು ಖುದ್ದು ರಿಷಭ್ ಪಂತ್ ಅವರಲ್ಲಿಯೂ ಕೇಳಲಾಗಿದೆ. ಇದಕ್ಕೆ ನೇರ ಉತ್ತರ ನೀಡಿದ ಪಂತ್, ನಾವು ಅದರ ಬಗ್ಗೆ ಯೋಚಿಸುತ್ತಿಲ್ಲ. ನಾವು ವೈಯಕ್ತಿಕವಾಗಿ ಯಾವಾಗಲೂ ನಮ್ಮ 100 ಪ್ರತಿಶತವನ್ನು ತಂಡಕ್ಕೆ ನೀಡಲು ಬಯಸುತ್ತೇವೆ. ಉಳಿದವು ಕೋಚ್ ಮತ್ತು ನಾಯಕನ ಮೇಲೆ ಅವಲಂಬಿತವಾಗಿದೆ. ನಮ್ಮಿಂದ ತಂಡವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆಯಾಗಲಿ, ಸಿಗದಿರುವ ಬಗ್ಗೆಯಾಗಲಿ ನಾವು ಯಾರು ಚಿಂತಿಸುತ್ತಿಲ್ಲ ಎಂದು ಪಂತ್ ತಿಳಿಸಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೂಡ ಏಷ್ಯಾಕಪ್ ತಂಡಕ್ಕೆ ಮರಳಿದ್ದಾರೆ. ಇಲ್ಲಿ ರಾಹುಲ್ ಆರಂಭಿಕರಾಗಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು. ಹಾಗೆಯೇ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬಹುದು. 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆಯಬಹುದು. ಇನ್ನು 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ 6ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ 7ನೇ ಕ್ರಮಾಂಕದಲ್ಲಿ ಯಾರು ಸ್ಥಾನ ಪಡೆಯಲಿದ್ದಾರಾ ಎಂಬುದೇ ಈಗ ಪ್ರಶ್ನೆಯಾಗಿದೆ. ಅದರಂತೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ನೇರ ಪೈಪೋಟಿ ಇದ್ದು, ಇವರಿಬ್ಬರಲ್ಲಿ ಯಾರಿಗೆ ಮಣೆಹಾಕಲಿದ್ದಾರೆ ಕಾದು ನೋಡಬೇಕಿದೆ.

ಏಷ್ಯಾಕಪ್​ಗಾಗಿ ಟೀಮ್ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.

TV9 Kannada


Leave a Reply

Your email address will not be published. Required fields are marked *