ರೀಲ್ ಲೈಫ್ ಹೀರೋ..ರಿಯಲ್ ಲೈಫ್ ವಿಲನ್? ಹೈ-ಕೋರ್ಟ್​ ಮೊರೆ ಹೋಗಿದ್ದೇಕೆ ಸಮೀರ್ ವಾಂಖೆಡೆ?

ನವದೆಹಲಿ: ಶಾರೂಖ್ ಪುತ್ರ ಆರ್ಯನ್ ಖಾನ್ ಬಂಧನ ಪ್ರಕರಣ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ತಿದೆ. ಇದೀಗ ಎನ್​ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬೈನ ಸೆಷನ್ಸ್​ ಕೋರ್ಟ್​ ಮೊರೆ ಹೋಗಿದ್ದಾರೆ.

ಎರಡು ಅಫಿಡೆವಿಟ್
25 ಕೋಟಿ ಡೀಲ್ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಎರಡು ಪ್ರತ್ಯೇಕ ಅಫಿಡೆವಿಟ್ ಸಲ್ಲಿಸಿದ್ದಾರೆ. ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ವತಿಯಿಂದ ಒಂದು ಅಫಿಡೆವಿಟ್ ಸಲ್ಲಿಸಿದ್ರೆ, ಇನ್ನು ವೈಯಕ್ತಿಕವಾಗಿ ಅಫಿಡೆವಿಟ್ ಸಲ್ಲಿಸಿದ್ದಾರೆ.

‘ಪ್ರಭಾವ ಬಳಸಿ ತನಿಖೆಗೆ ಅಡ್ಡಿ ಪಡಿಸ್ತಿದ್ದಾರೆ’
ಡ್ರಗ್​ ಕೇಸ್​​ನಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ತನಿಖೆಗೆ ಅಡ್ಡಿಪಡಿಸಿ ಅದರ ಹಾದಿಯನ್ನ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಕೆಲವರು ತಮ್ಮ ಪ್ರಭಾವವನ್ನ ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಕೋರ್ಟ್​ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಸಮೀರ್ ವಾಂಖೆಡೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ.

ಎನ್​ಸಿಬಿ ವಿರುದ್ಧ 25 ಕೋಟಿ ಡೀಲ್ ಆರೋಪ
ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಕೇಸ್​ಗೆ ಸಂಬಂಧಿಸಿದಂತೆ ನಿನ್ನೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್​​ರನ್ನ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದ ಸಂದರ್ಭದಲ್ಲಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕೆಲವು ಖಾಲಿ ಪೇಪರ್​ಗಳು ಕಾಣಿತ್ತಿದ್ದವು. ಅಲ್ಲದೇ ಆರ್ಯನ್ ಖಾನ್ ಹಾಗೂ ಅವರ ಆಪ್ತ ಕೆಪಿ ಗೋಸಾವಿ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿ ಕಾಣುವ ಪೇಪರ್​​ನಲ್ಲಿ ಆರ್ಯನ್​ ಖಾನ್​ ಬಳಿ ಎನ್​ಸಿಬಿ ಅಧಿಕಾರಿಗಳು ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರ್ಯನ್ ಖಾನ್ ಬಾಡಿಗಾರ್ಡ್​​, ಕೆಪಿ ಗೋಸವಿ ಆರೋಪಿಸಿದ್ದಾರೆ. ಅಲ್ಲದೇ ಎನ್​​ಸಿಬಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಈ ಕೇಸ್ ಮುಚ್ಚಿ ಹಾಕಲು ಬರೋಬ್ಬರಿ 25 ಕೋಟಿಗೆ ಡೀಲ್ ಮಾಡಿಕೊಂಡಿದ್ದರು. ಅದರಲ್ಲಿ 8 ಕೋಟಿ ಸಮೀರ್ ವಾಂಖೆಡೆಗೆ ನೀಡಲು ನಿರ್ಧರಿಸಲಾಗಿತ್ತು. ಇದನ್ನ ಸ್ವತಃ ನಾನೇ ಕಣ್ಣಾರೆ ಕಂಡಿದ್ದೇನೆ. ನಂತರ ಹಣ ಕಮ್ಮಿ ಆಯಿತು ಅನ್ನೋ ಕಾರಣಕ್ಕೆ ಆರ್ಯನ್ ಖಾನ್​ರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಕೆಪಿ ಗೋಸವಿ ಆರೋಪಿಸಿದ್ದಾರೆ.

The post ರೀಲ್ ಲೈಫ್ ಹೀರೋ..ರಿಯಲ್ ಲೈಫ್ ವಿಲನ್? ಹೈ-ಕೋರ್ಟ್​ ಮೊರೆ ಹೋಗಿದ್ದೇಕೆ ಸಮೀರ್ ವಾಂಖೆಡೆ? appeared first on News First Kannada.

News First Live Kannada

Leave a comment

Your email address will not be published. Required fields are marked *