ಉದಯ್​, ಅನಿಲ್​ ಸಾವಿನ ಘಟನೆಯ ಬಳಿಕ ಇಡೀ ಕನ್ನಡ ಚಿತ್ರರಂಗವೇ ಸ್ಟಂಟ್​ ಮಾಸ್ಟರ್​ ರವಿವರ್ಮಾರನ್ನ ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡೋದ್ರಿಂದ ದೂರ ಇಟ್ಟಿತ್ತು. ಈ ಬಗ್ಗೆ ನ್ಯೂಸ್​ ಫಸ್ಟ್​ ಜೊತೆ ಮಾತನಾಡುತ್ತಾ, ಆ ಸಂದರ್ಭದಲ್ಲಿ ಇಡೀ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಪರವಾಗಿ ನಿಂತವರು ಇಬ್ಬರು ಮಾತ್ರ ಅಂತ ಹಂಚಿಕೊಂಡಿದ್ದಾರೆ.

ಹೌದು.. ಕುಟುಂಬದಂತಿದ್ದ ಇಡೀ ಸ್ಯಾಂಡಲ್​ವುಡ್​ ಬಳಗವೇ ರವಿವರ್ಮಾ ಪಾಲಿಗೆ ಅಂದಿಗೆ ಇಲ್ಲದಂತಾಗಿತ್ತು. ಅದೇ ಸಮಯಕ್ಕೆ ರವಿವರ್ಮಾರಿಗೆ ಹೆಗಲು ಕೊಟ್ಟು ನಿಂತಿದ್ದು ನಟ ರೆಬೆಲ್​ ಸ್ಟಾರ್​ ಅಂಬರೀಶ್​ ಹಾಗೂ ಕಿಚ್ಚ ಸುದೀಪ್​. ಇವರಿಬ್ಬರು ತಮ್ಮನ್ನ ನೋಡಿದ ರೀತಿಯ ಬಗ್ಗೆ ರವಿವರ್ಮಾ ಹೆಮ್ಮೆಯಿಂದ ಮಾತನಾಡಿದ್ದಾರೆ. ಘಟನೆ ಆದಾಗ, ‘ರೀ..ಅವನು ಸಾವಿರ ಹೇಳ್ತಾನೆ. ಬಿದ್ದವರಿಗೆ ತಲೆ ಇಲ್ವಾ.?’ ಅಂತ ಅಂಬರೀಶ್ ಕೇಳಿದ ಪ್ರಶ್ನೆಯನ್ನ ರವಿವರ್ಮಾ ನೆನಪು ಮಾಡಿಕೊಂಡಿದ್ದಾರೆ.

ಆ ಟೈಮ್​ನಲ್ಲಿ ನನಗೆ ಸಹಾಯ ಮಾಡಿದ್ದು ಇಬ್ಬರೇ. ಒಂದು ಅಂಬರೀಶ್​ ಅಣ್ಣ, ಮತ್ತೊಂದು ಸುದೀಪ್​ ಅವರು. ಅಂಬರೀಶ್​ ಅಣ್ಣ ಒಂದೇ ಮಾತು ಹೇಳಿದ್ದು, ‘ರೀ.. ಅವನು ಸಾವಿರ ಹೇಳ್ಲಿ. ಬಿದ್ದಂತವರು ದಡ್ಡ ನನ್ನ ಮಕ್ಕಳು. ಅವರಿಗೆ ತಲೆ ಇಲ್ವಾ?’ ಅಂತ ಕೇಳಿದ್ರು. ಅಂದ್ಹಾಗೇ, ಈ ಫೈಟ್​ ಸೀಕ್ವೆನ್ಸ್​ ನಮ್ಮ ಪ್ಲ್ಯಾನ್​ ಅಲ್ವೇ ಅಲ್ಲ. ನಿರ್ದೇಶಕ ನಾಗಶೇಖರ್​ CG ಮಾಡೋಣ ಅಂದ್ರು. ಪ್ರೊಡ್ಯೂಸರ್​ಗೂ ಅಷ್ಟೊಂದು ರಿಸ್ಕ್​ ತೆಗೆದುಕೊಳ್ಳೋಕೆ ಇಷ್ಟ ಇರ್ಲಿಲ್ಲ. ಈ ಮೂರು ಜನ ಆರ್ಟಿಸ್ಟ್​ಗಳು ಸೇರಿಕೊಂಡು ಏನೋ ಮಾಡೋಣ ಅಂತ ಮಾಡಿದ್ರು.

ರವಿವರ್ಮಾ, ಸ್ಟಂಟ್​ ಮಾಸ್ಟರ್​

The post ‘ರೀ..ಅವನು ಸಾವಿರ ಹೇಳ್ತಾನೆ.. ಬಿದ್ದವರಿಗೆ ತಲೆ ಇಲ್ವಾ.?’ ಅಂತ ಅಣ್ಣ ಕೇಳಿದ್ರು appeared first on News First Kannada.

Source: newsfirstlive.com

Source link