‘ರೂಪಾಂತರಿ ಕೊರೊನಾಗೆ ಲಸಿಕೆ​ ಹಾಕ್ತೀವಿ’ ಎಂದು ಎಂಟ್ರಿ ಕೊಟ್ಟು ಹಣೆಗೆ ಗನ್ ಹಿಡಿದು ಆಭರಣ ದೋಚಿದ  ಕಳ್ಳರು..!


ಬೆಂಗಳೂರು: ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಬಂದ ಮೂರ್ನಾಲ್ಕು ಯುವಕರು ಪಿಸ್ತೂಲ್​ ತೋರಿಸಿ ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿ ಪರಾರಿಯಾದ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್.ಬಿ.ಎಂ ಕಾಲೋನಿಯಲ್ಲಿ ನಡೆದಿದೆ.

ಕಾಲೋನಿಯ ನಿವಾಸಿ ಸಂಪತ್ ಸಿಂಗ್ ತಾಯಿ ಹಾಗೂ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ಕಾರು ಹಾಗೂ ಬೈಕಿನಲ್ಲಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ರೂಪಾಂತರಿ ಕೋವಿಡ್​ಗೆ ವ್ಯಾಕ್ಸಿನೇಷನ್‌ ಹಾಕುವುದಾಗಿ ಮನೆಯೊಳಗೆ ಬಂದು ಪಿಸ್ತೂಲ್ ತೋರಿಸಿ 50ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪಕ್ಕಾ ಪ್ಲಾನ್​ ಮಾಡಿ ಎಂಟ್ರಿ ಕೊಟ್ಟಿದ್ದ ಆರೋಪಿಗಳು..
ಪಕ್ಕಾ ಫ್ಲ್ಯಾನ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದ ಮೂವರು ಆರೋಪಿಗಳು ವೈದ್ಯಕೀಯ ಸಿಬ್ಬಂದಿಯಂತೆ ವೈಟ್ ಡ್ರೆಸ್ ಧರಿಸಿ 1 ಕಾರು ಹಾಗೂ 1 ಬೈಕಿನಲ್ಲಿ ಮನೆ ಬಳಿ ಬಂದಿದ್ರು. ಆ ಬಳಿಕ ಮನೆಗೆ ಬಂದು ಹೊಸ ತಳಿಯ ಕೋವಿಡ್​​ಗೆ ವ್ಯಾಕ್ಸಿನೇಷನ್‌ ಹಾಕಲು ಬಂದಿದ್ದೇವೆ ಎಂದಿದ್ರು. ಆಗ ಸಂಪತ್ ಸಿಂಗ್ ಪತ್ನಿ ಮನೆಯಲ್ಲಿ ಯಾರೂ ಇಲ್ಲ ಎಂದು ಗಂಡನಿಗೆ ಫೋನ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಅವರ ಹಣೆಗೆ ಪಿಸ್ತೂಲ್​ ಇಟ್ಟ ಖದೀಮರು ಅತ್ತೆ-ಸೊಸೆ ಇಬ್ಬರನ್ನೂ ರೂಮಿನಲ್ಲಿ‌ ಕೂಡಿ ಹಾಕಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಕೃತ್ಯದ ವೇಳೆಯಲ್ಲಿ ಮನೆಯ ಬಳಿ‌ ಬಂದಿದ್ದ ಸಂಪತ್ ಹಿರಿಯ ಮಗ ವಿಕ್ರಂ ಸಿಂಗ್ ಮನೆ ಕೆಳಗಡೆ ನಿಂತು ತಾಯಿಯನ್ನ ಕರೆದಿದ್ದಾರೆ. ಇದರಿಂದ ಅಲರ್ಟ್​ ಆದ ಕಳ್ಳರು ವಿಕ್ರಂ ಸಿಂಗ್ ಬಳಿ ನಯವಾಗಿ ನಿಮ್ಮದು ವ್ಯಾಕ್ಸಿನೇಷನ್  ಆಗಿದ್ಯಾ ಎಂದು ಕೇಳಿ ಹೊರ ನಡೆದಿದ್ದಾರೆ. ಆ ಬಳಿಕ ವಿಕ್ರಂ ಮನೆಯ ಒಳಗಡೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಕರಿತು ಸದ್ಯ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.

News First Live Kannada


Leave a Reply

Your email address will not be published. Required fields are marked *