ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮೊದಲನೇ ಅಲೆಗಿಂತ ಜೋರಾಗಿದೆ. 2019ರಲ್ಲಿ ಕಾಣಿಸಿಕೊಂಡ ಈ ಸೋಂಕಿಗೆ ಕೊರೊನಾ ಅಂತಾ ಹೆಸರಿಟ್ಟಾಗಿದೆ. ಆದ್ರೆ, ಇದೀಗ ಬೇರೆ ಬೇರೆ ದೇಶಗಳಲ್ಲಿ ರೂಪಾಂತರಗೊಂಡು ಅಬ್ಬರಿಸ್ತಿರೋ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ನಾಮಕರಣವನ್ನೇ ಮಾಡಿದೆ. ಗ್ರೀಕ್​ ಆಲ್ಫಬೆಟ್​​​ಗಳನ್ನ ವಿವಿಧ ತಳಿಗಳಿಗೆ ಲೇಬಲ್ ಮಾಡಲಾಗಿದೆ.

ಭಾರತದಲ್ಲಿ ಪತ್ತೆಯಾಯ್ತು ಎನ್ನಲಾದ ತಳಿ ಇನ್ಲೇಲೆ ‘ಡೆಲ್ಟಾ’
ಭಾರತ ಸೇರದಂತೆ ಹಲವಾರು ದೇಶಗಳು ಕೊರೊನಾ ವೈರಸ್‌ನ ರೂಪಾಂತರಿತ ತಳಿಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ಭಾರತದಲ್ಲೂ ಈ ಸ್ಥಿತಿ ಭೀಕರವಾಗೋಕೆ ಕಾರಣವಾಗಿದೆ ಕೊರೊನಾ 2ನೇ ಅಲೆ. ಭಾರತದಲ್ಲಿ ಪತ್ತೆಯಾಗಿ ಅತೀ ವೇಗವಾಗಿ ಹರಡುತ್ತಿರೋ ಮಹಾಮಾರಿಗೆ ಇಡೀ ವಿಶ್ವವೇ ಆತಂಕ ವ್ಯಕ್ತಪಡಿಸಿದೆ. ಅಂದ್ಹಾಗೇ ಭಾರತದಲ್ಲಿ ರೂಪಾಂತರಗೊಂಡಿದ್ದು ಅಂತಾ ಹೇಳಲಾಗ್ತಿರೋ B.1.617.2 ತಳಿಗೆ ಡೆಲ್ಟಾ ಅಂತಾ ಹೆಸರಿಡಲಾಗಿದೆ.

ಹಾಗೇ ಬೇರೆ ಬೇರೆ ದೇಶದ ರೂಪಾಂತರಿತ ವೈರಸ್​​ಗಳಿಗೂ ಆಲ್ಪಾ, ಬೀಟಾ, ಗಾಮಾ ಮುಂತಾದ ಆಲ್ಫಬೆಟ್​ಗಳನ್ನ ಹೆಸರಿಸಲಾಗಿದೆ. ಇದೇ ಹೆಸರಿನಲ್ಲಿ ಇನ್ಮುಂದೆ ಸಂಶೋಧನೆಗಳು ಕೂಡಾ ನಡೆಯುತ್ತೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಯಾವ ತಳಿಗೆ ಯಾವ ಹೆಸರು?

  • ಯುಕೆಯಲ್ಲಿ ಪತ್ತೆಯಾದ B.1.1.7 ತಳಿ -ಅಲ್ಫಾ
  • ಸೌತ್‌ ಆಫ್ರಿಕಾದಲ್ಲಿ ರೂಪಾಂತರಿತ ತಳಿ B.1.351 ಬೀಟಾ
  • ಬ್ರೆಜಿಲ್​​ನ P.1 ತಳಿ -ಗಾಮಾ
  • ಭಾರತದಲ್ಲಿ ಪತ್ತೆಯಾಯ್ತು ಎನ್ನಲಾದ B.1.617.2 ವೈರಸ್​​​ -ಡೆಲ್ಟಾ
  • ಇದಿಷ್ಟೇ ಅಲ್ಲ, ಭಾರತದಲ್ಲಿ B.1.617.2 ತಳಿಗೂ ಮುಂಚೆ ಸಿಕ್ಕ B1.617.2 ವೈರಸ್​​ಗೆ ಕಪ್ಪಾ ಅಂತಾ ವಿಶ್ವಸಂಸ್ಥೆ ಹೆಸರಿಟ್ಟಿದೆ.
  • ಇದರ ಜೊತೆಗೆ ಇನ್ನೂ ವಿವಿಧ ದೇಶಗಳಲ್ಲಿ ಪತ್ತೆಯಾದವು ಎನ್ನಲಾದ ತಳಿಗಳಿಗೂ ಎಪ್ಸಿಲಾನ್, ಝೆಟಾ, ಈಟಾ, ತೀಟಾ, ಲೊಟಾ ಆಲ್ಫಬೆಟ್​ಗಳಿಂದ ಕರೆಯಲು ವಿಶ್ವಸಂಸ್ಥೆ ನಿರ್ಧರಿಸಿದೆ.

ಈ ಲೇಬಲ್‌ಗಳು ಸದ್ಯ ಅಸ್ತಿತ್ವದಲ್ಲಿರುವ ವೈಜ್ಞಾನಿಕ ಹೆಸರುಗಳನ್ನು ಬದಲಿಸುವುದಿಲ್ಲ, ಅದು ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ತಿಳಿಸುತ್ತದೆ ಮತ್ತು ಸಂಶೋಧನೆಯಲ್ಲಿ ಅದೇ ಹಸರು ಬಳಸುವುದನ್ನು ಮುಂದುವರಿಸಲಾಗುತ್ತದೆ. ರೂಪಾಂತರಿಗಳನ್ನ ದೇಶಗಳ ಹೆಸರಿನಿಂದ ಕರೆಯುವುದು ತಾರತಮ್ಯವಾಗುತ್ತದೆ ಮತ್ತು ಆ ದೇಶಕ್ಕೆ ಕಳಂಕ ಉಂಟು ಮಾಡುತ್ತದೆ. ಹೀಗಾಗಿ ಕೋವಿಡ್​ ರೂಪಾಂತರಿ ಪತ್ತೆಯಾದ ದೇಶದ ಹೆಸರಿನಿಂದ ಅವುಗಳನ್ನ ಕರೆಯುವುದನ್ನು ತಡೆಯುವ ಉದ್ದೇಶದಿಂದ ಈ ಹೆಸರುಗಳನ್ನ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

The post ರೂಪಾಂತರಿ ಕೊರೊನಾ ತಳಿಗಳಿಗೆ ಗ್ರೀಕ್ ಆಲ್ಫಬೆಟ್ಸ್​​ ನಾಮಕರಣ.. ಭಾರತದ ತಳಿಗೆ ಹೆಸರೇನು ಗೊತ್ತಾ? appeared first on News First Kannada.

Source: newsfirstlive.com

Source link