ರೂಬಿಕ್ಸ್ ಆರ್ಟ್​ನಲ್ಲಿ ಅರಳಿದ ಅಪ್ಪು.. ಯುವಕನಿಂದ ‘ಯುವರತ್ನ’ನಿಗೆ ವಿಭಿನ್ನ ಶ್ರದ್ಧಾಂಜಲಿ


ಉಡುಪಿ: ಪವರ್ ಸ್ಟಾರ್ ಅಪ್ಪುವಿಗೆ ಮಲ್ಪೆ ಬೀಚ್ ನೆಚ್ಚಿನ ತಾಣ. ಉಡುಪಿಯಲ್ಲಿ ಎಲ್ಲೇ ಶೂಟಿಂಗ್ ಇದ್ರೂ ಮಲ್ಪೆ ಬೀಚ್‌ಗೆ ಅಪ್ಪು ಬಾರದೇ ಇರುತ್ತಿರಲಿಲ್ಲ. ಇಂತಹ ಮಲ್ಪೆ ಬೀಚ್‌ನಲ್ಲಿ ರೂಬಿಕ್ಸ್ ಕ್ಯೂಬ್ ಕಲಾವಿದನೊಬ್ಬ ಅಗಲಿದ ಅಪ್ಪುವಿನ ಕಲಾಕೃತಿ ರಚಿಸಿ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪವರ್ ಸ್ಟಾರ್ ಪುನೀತ್​ ರಾಜ್​​​ಕುಮಾರ್​​ಗೆ ನಾಡಿನಾದ್ಯಂತ ಹಲವಾರು ಮಂದಿ ತಮ್ಮ ತಮ್ಮ ವಿಶಿಷ್ಟ ಕಲೆಯ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಪ್ರೀತಿ ತೋರಿಸುತ್ತಿದ್ದಾರೆ.. ಅದರಂತೆ ಉಡುಪಿಯ ರೂಬಿಕ್ಸ್ ಕಲಾವಿದ ಮಹೇಶ್ ಮಲ್ಪೆ ತಮ್ಮ ಕೈಚಳಕದಿಂದ ರೂಬಿಕ್ಸ್ ಕ್ಯೂಬ್ ಮೂಲಕ ಅಪ್ಪು ಭಾವಚಿತ್ರ ಬಿಡಿಸಿ ನೆಚ್ಚಿನ ನಟವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮಲ್ಪೆ ಕಡಲ‌ ಕಿನಾರೆಯಲ್ಲಿ 704 ರೂಬಿಕ್ಸ್ ಕ್ಯೂಬ್ ಗಳನ್ನು ತಮ್ಮ ಚಾಕಚಕ್ಯತೆಯಿಂದ ಜೋಡಿಸಿರುವ ಇವರೇ ಮಹೇಶ್ ಮಲ್ಪೆ. ಇವರು ಅಪ್ಪುವಿನ ಅಭಿಮಾನಿ… ಹೀಗೆ ರೂಬಿಕ್ಸ್ ಕ್ಯೂಬ್ ಮೂಲಕ ಅಪ್ಪು ಭಾವಚಿತ್ರ ರಚಿಸುವ ಮೂಲಕ ನೋಡುಗರನ್ನ ಮಂತ್ರಮುಗ್ಧರನ್ನಾಗುವಂತೆ ಮಾಡಿದ್ದಾರೆ.

ಇನ್ನು ಅಪ್ಪು ಅಭಿಮಾನಿ ಮಹೇಶ್ ಮಲ್ಪೆ ಬಗ್ಗೆ ಹೇಳೋದಾದ್ರೆ… ಇತ್ತೀಚೆಗೆ ರೂಬಿಕ್ಸ್ ಕ್ಯೂಬ್‌ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ ರೂಬಿಕ್ಸ್ ಕ್ಯೂಬ್‌ನಲ್ಲಿ ಮಹೇಶ್ ಸಾಧನೆ ಅಪಾರ. ಭಾರತದ ಕೆಲವೇ ಕೆಲವು ರೂಬಿಕ್ಸ್ ಕ್ಯೂಬ್ ಕಲಾವಿದರಲ್ಲಿ ಇವರೂ ಒಬ್ವರು. ಮಂಚ್ ಸ್ಟಾರ್ ರಾಷ್ಟ್ರಮಟ್ಟದ ಪ್ರತಿಭಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನದೊಂದಿಗೆ 5 ಲಕ್ಷ ನಗದು ಪುರಸ್ಕಾರವನ್ನು ಪಡೆದಿರುವ ಹೆಗ್ಗಳಿಗೆ ಇವರದ್ದು.

ಇನ್ನು ಈ ಹಿಂದೆ ಮಹಾತ್ಮ ಗಾಂಧೀಜಿ, ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ಮಹನೀಯರ ಚಿತ್ರವನ್ನು ರೂಬಿಕ್ ಕ್ಯೂಬ್ ಮೂಲಕ ರಚಿಸಿ ಮಹೇಶ್ ಚಾಕಚಕ್ಯತೆ ಮೆರೆದಿದ್ದಾರೆ. ಸದ್ಯ ಅಪ್ಪು ಅಭಿಮಾನಿಯಾಗಿರುವ ಮಹೇಶ್ ಅಪ್ಪುಗೆ ಇಷ್ಟವಾದ ಕಡಲ ಕಿನಾರೆಯಲ್ಲಿ ಪ್ರೀತಿಯ ಅಪ್ಪುವಿನ ಚಿತ್ರವನ್ನ ರೂಬಿಕ್ಸ್ ಕ್ಯೂಬ್ ಮೂಲಕ ಮೂಡಿಸಿ ತಮ್ಮ ಅಭಿಮಾನದ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ವಿಶೇಷ ವರದಿ: ದಿನೇಶ್ ಕಾಶಿಪಟ್ಣ ನ್ಯೂಸ್ ಫಸ್ಟ್ ಉಡುಪಿ

The post ರೂಬಿಕ್ಸ್ ಆರ್ಟ್​ನಲ್ಲಿ ಅರಳಿದ ಅಪ್ಪು.. ಯುವಕನಿಂದ ‘ಯುವರತ್ನ’ನಿಗೆ ವಿಭಿನ್ನ ಶ್ರದ್ಧಾಂಜಲಿ appeared first on News First Kannada.

News First Live Kannada


Leave a Reply

Your email address will not be published. Required fields are marked *