ಚಿತ್ರದುರ್ಗ: ತರಕಾರಿ ಮಾರುಕಟ್ಟೆಯಲ್ಲಿ ರೂಲ್ಸ್​ ಬ್ರೇಕ್ ಮಾಡಿದ್ದ ಯುವಕನಿಗೆ ಲೇಡಿ ಪಿಎಸ್​ಐ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ನಗರದ ಮುರುಘ ರಾಜೇಂದ್ರ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನ ಕೊಳ್ಳಲು ಜನರು ಬಂದಿದ್ದರು. ಈ ವೇಳೆ ಕೊರೊನಾ ನಿಯಮ ಪಾಲಿಸದ ಯುವಕನನ್ನ ಪೊಲೀಸರು ತಡೆದು ಪ್ರಶ್ನೆ ಮಾಡಿದ್ದಾರೆ. ಆಗ ಯುವಕ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ ಎನ್ನಲಾಗಿದೆ.

ಅದಕ್ಕೆ ಕೋಪಿಸಿಕೊಂಡ ಪಿಎಸ್​ಐ ಗೀತಾ, ಯುವಕನ ಕಪಾಳಕ್ಕೆ ಬಾರಿಸಿದ್ದಾರೆ. ಅಲ್ಲದೇ ಯುವಕ ಖರೀದಿ ಮಾಡಿದ್ದ ತರಕಾರಿಯನ್ನ ನೆಲಕ್ಕೆ ಎಸೆದಿದ್ದಾರೆ ಫೈನ್ ಕಟ್ಟು ಇಲ್ಲ, ಠಾಣೆಗೆ ನಡಿ ಎಂದು ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಬೈಕ್ ಸಮೇತ ಮಾರುಕಟ್ಟೆಯಲ್ಲಿ ಯುವಕ ಓಡಾಡುತ್ತಿದ್ದ. ಹೀಗಿದ್ದೂ ನಾನೇನು ಮಾಡಿದ್ದೇನೆ? ತಪ್ಪು ಮಾಡಿಲ್ಲ ಎಂದ ಯುವಕ ಹೇಳಿದ್ದಾನೆ ಎನ್ನಲಾಗಿದೆ.

The post ರೂಲ್ಸ್​ ಬ್ರೇಕ್​ ಮಾಡಿ ವಾಗ್ವಾದಕ್ಕೆ ಇಳಿದಿದ್ದ ಯುವಕನಿಗೆ ಮಹಿಳಾ PSI ಕಪಾಳಮೋಕ್ಷ appeared first on News First Kannada.

Source: newsfirstlive.com

Source link