ಚಿತ್ರದುರ್ಗ: ಜಿಲ್ಲೆಯಲ್ಲಿ ಕಠಿಣ ಲಾಕ್‍ಡೌನ್ ಮಧ್ಯೆ ಯುವಕನೋರ್ವ ರೂಲ್ಸ್ ಬ್ರೇಕ್ ಮಾಡಿದ ಕಾರಣ ಸಿಟ್ಟಿಗೆದ್ದ ಚಿತ್ರದುರ್ಗದ ಬಡಾವಣೆ ಠಾಣೆ ಲೇಡಿ ಪಿಎಸ್‍ಐ ಯುವಕನಿಗೆ ಕಪಾಳಮೋಕ್ಷ ಮಾಡಿರುವ ಕುರಿತು ವರದಿಯಾಗಿದೆ.

ಕೊರೊನಾ ಟಫ್ ರೂಲ್ಸ್ ಭಾಗವಾಗಿ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಿರುವ ಜಯದೇವ ಕ್ರೀಡಾಂಗಣದ ಮುರುಘಾರಾಜೇಂದ್ರ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಮೋಟರ್ ಬೈಕನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸದೇ ಯುವಕನೋರ್ವ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಇದನ್ನು ಕಂಡು ಆಕ್ರೋಶಗೊಂಡ ಪಿಎಸ್‍ಐ ಗೀತಾ ಅವರು ಯುವಕನನ್ನು ಥಳಿಸಿ, ಆತನ ಬೈಕ್‍ನಲ್ಲಿದ್ದ ತರಕಾರಿಯನ್ನು ನೆಲಕ್ಕೆಸೆದರು.

ಈ ವೇಳೆ ತೀವ್ರ ಸಿಟ್ಟಿಗೆದ್ದ ಯುವಕನು, ಪೊಲೀಸರೊಂದಿಗೆ ವಾಗ್ವಾದ ನಡೆಸಿದನು. ಆಗ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೇ ನಮ್ ವಿರುದ್ಧವೇ ಮಾತನಾಡುತ್ತಿಯಾ ಫೈನ್ ಕಟ್ಟು, ಇಲ್ಲ ಠಾಣೆಗೆ ನಡಿ ಎಂದು ಪೊಲೀಸರು ವಾರ್ನಿಂಗ್ ಮಾಡಿದರು. ಯುವಕ ನಾನೇನು ಮಾಡಿದ್ದೇನೆ, ನಾನೇನು ತಪ್ಪು ಮಾಡಿಲ್ಲ ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬೈಕ್ ಸಹಿತ ಪೊಲೀಸ್ ಠಾಣೆಗೆ ಕರೆದೊಯ್ಯಲು ಯತ್ನಿಸಿದರು.

The post ರೂಲ್ಸ್ ಬ್ರೇಕ್ ಮಾಡಿದ ಯುವಕನಿಗೆ ಲೇಡಿ ಪಿಎಸ್‍ಐ ಕಪಾಳಮೋಕ್ಷ appeared first on Public TV.

Source: publictv.in

Source link