ರೂ. 26 ಲಕ್ಷ ತೆತ್ತು ಎರಡು ಹಳ್ಳಿಕಾರ್ ತಳಿ ಬಿತ್ತನೆ ಹೋರಿಗಳನ್ನು ಖರೀದಿಸಿದರು ಬಿಜೆಪಿ ಶಾಸಕ ಮಸಾಲೆ ಜಯರಾಂ | BJP MLA Masale Jayaram buys a pair of Hallikar breed bulls for a whopping Rs 26 lakhs


ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ (Masale Jayaram) ಅವರಿಗೆ ದುಬಾರಿ ಎತ್ತು-ಹೋರಿಗಳನ್ನು ಖರೀದಿಸುವ ಹವ್ಯಾಸ ಇದ್ದಂತೆ ಕಾಣುತ್ತದೆ ಮಾರಾಯ್ರೇ. ವಿಷಯ ಏನು ಗೊತ್ತಾ? ಜಯರಾಂ ಅವರು ಬರೋಬ್ಬರಿ 26 ಲಕ್ಷ ರೂಪಾಯಿಗಳನ್ನು ತೆತ್ತು ಹಳ್ಳಿಕಾರ್ ತಳಿಯ (Hallikar Breed) ಎರಡು ಬಿತ್ತನೆ ಎತ್ತುಗಳನ್ನು ಖರೀದಿಸಿದ್ದಾರೆ. ಮೂರು ವರ್ಷ ಪ್ರಾಯದ ಎತ್ತುಗಳನ್ನು ಅವರಿಗೆ ಮಾರಿದ್ದು ಮಂಡ್ಯ (Mandya) ಜಿಲ್ಲೆಯ ಬನ್ನೂರು ಗ್ರಾಮದ ರೈತ ಕೃಷ್ಣೇಗೌಡ (Krishnegowda). ಇತ್ತಿಚಿಗೆ ಮಂಡ್ಯ ಭಾಗದಲ್ಲೇ ರೈತರೊಬ್ಬರು ಪ್ರಾಯಶಃ ರೂ. 7 ಲಕ್ಷ ಗಳಿಗೆ ಒಂದು ಹಳ್ಳಿಕಾರ್ ಹೋರಿಯನ್ನು ಖರೀದಿಸಿದ್ದರು. ಜಯರಾಂ ಅವರು ಅದರ ಎರಡು ಪಟ್ಟು ಹಣ ತೆತ್ತು ಎತ್ತುಗಳನ್ನು ಖರೀದಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಾಸಕರಲ್ಲಿ ಅಮೃತ್ ಮಹಲ್ ತಳಿಯ ಎರಡು ಎತ್ತುಗಳು ಸಹ ಇವೆ. ಅದಕ್ಕೇ ನಾವು ಹೇಳಿದ್ದು ಅವರಿಗೆ ದುಬಾರಿ ಹೋರಿಗಳನ್ನು ಕೊಳ್ಳುವ ಹವ್ಯಾಸ. ಅಂದಹಾಗೆ, ಅಮೃತ್ ಮಹಲ್ ಎತ್ತುಗಳನ್ನು ಅವರು ರೂ 6.5 ಲಕ್ಷ ಕೊಟ್ಟು ಖರೀದಿಸಿದ್ದರಂತೆ.

ಒಬ್ಬೊಬ್ಬರಿಗೆ ಒಂದೊಂದು ಬಗೆಯ ಹವ್ಯಾಸ. ಕೆಲ ಜನರಿಗೆ ಕಾರು ಇಲ್ಲವೇ ಬೈಕ್ಖರೀದಿಸುವ ಖಯಾಲಿ ಇರುತ್ತದೆ. ಆದರೆ ಎತ್ತುಗಳನ್ನು ಖರೀದಿಸುವ ಖಯಾಲಿ ಇರುವವರು ಬಹಳ ಕಮ್ಮಿ ಮಾರಾಯ್ರೇ. ತುರುವೇಕೆರೆಗೆ ಹತ್ತಿರದ ಅಂಕಲಕೊಪ್ಪ ಗ್ರಾಮದಲ್ಲಿ ಶಾಸಕ ಜಯರಾಂ ಅವರ ತೋಟದ ಮನೆಯಿದೆ. ಅಲ್ಲಿಗೆ ಹೋದರೆ, ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಯ ಎತ್ತುಗಳ ಜೊತೆಗೆ ಇನ್ನೂ ಬೇರೆ ತಳಿಯ ಹೋರಿಗಳು ಸಹ ನೋಡಲು ಸಿಗುತ್ತವೆ.

ಕೆಲ ದಿನಗಳ ಹಿಂದೆ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿ ಸುದ್ದಿಯಲ್ಲಿದ್ದ ಮಸಾಲೆ ಜಯರಾಂ ಅವರು ಈಗ ಎತ್ತುಗಳನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.

TV9 Kannada


Leave a Reply

Your email address will not be published.