ರೆಕಾರ್ಡ್​..ರೆಕಾರ್ಡ್​..ರೆಕಾರ್ಡ್​..; ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್​ 2’ | KGF 2 Collection KGF 2 Overall Collection KGF Chapter 2 Wrote 29 records in Just four Days


ರೆಕಾರ್ಡ್​..ರೆಕಾರ್ಡ್​..ರೆಕಾರ್ಡ್​..; ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್​ 2’

ಯಶ್

‘ಕೆಜಿಎಫ್ ಚಾಪ್ಟರ್ 2’ ಹಲವು ದಾಖಲೆ  (KGF Chapter 2 Records)ಬರೆಯಲಿದೆ ಎಂಬುದನ್ನು ಮೊದಲೇ ಊಹಿಸಲಾಗಿತ್ತು. ಆದರೆ, ಈ ಸಿನಿಮಾ ಮುಟ್ಟಿದ್ದೆಲ್ಲ ರೆಕಾರ್ಡ್​ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ 29 ದಾಖಲೆಗಳನ್ನು ಬರೆದಿದೆ. ಅದು ಕೇವಲ ನಾಲ್ಕು ದಿನಗಳಲ್ಲಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ವಿಚಾರ ಇಡೀ ಚಿತ್ರತಂಡಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಯಶ್ (Yash) ಫ್ಯಾನ್ಸ್​ ಅಕ್ಷರಶಃ ಹಬ್ಬವನ್ನೇ ಮಾಡುತ್ತಿದ್ದಾರೆ. ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಈ ಸಿನಿಮಾದಿಂದ ಇನ್ನೂ ಹಲವು ದಾಖಲೆಗಳು ಬರೆಯಲ್ಪಡಲಿದೆ.

‘ಕೆಜಿಎಫ್ 2’ ಸ್ಯಾಂಡಲ್​ವುಡ್​ ಹಾಗೂ ಬಾಲಿವುಡ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಬಾಲಿವುಡ್ ಚಿತ್ರಗಳೇ ಮಾಡದ ದಾಖಲೆಗಳನ್ನು ಈ ಸಿನಿಮಾ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿಈ ಚಿತ್ರ ಬಾಲಿವುಡ್​ ಮಾರುಕಟ್ಟೆಯಿಂದ 300 ಕೋಟಿ ಕಮಾಯಿ ಮಾಡಲಿದೆ ಎಂಬುದು ಲೆಕ್ಕಾಚಾರ ಬಲ್ಲ ಪಂಡಿತರ ಊಹೆ. ಹಾಗಾದರೆ, ಈ ಸಿನಿಮಾ ಬರೆದ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

 1. ಹಿಂದಿ ಬೆಲ್ಟ್​ನಲ್ಲಿ ರೆಕಾರ್ಡ್​ ಓಪನಿಂಗ್
 2. ಹಿಂದಿಯಲ್ಲಿ ರೆಕಾರ್ಡ್ ವೀಕೆಂಡ್ ಕಲೆಕ್ಷನ್
 3. ಹಿಂದಿ ಬೆಲ್ಟ್‌ಗಳಲ್ಲಿ ಒಂದೇ ದಿನ ಅತಿಹೆಚ್ಚು ಗಳಿಕೆ
 4. ಬಾಲಿವುಡ್ ಬಾಕ್ಸ್​ ಆಫೀಸ್​ನಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
 5. ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಭಾನುವಾರ ಅತಿ ಹೆಚ್ಚು ಹಣ ಬಾಚಿದ ಚಿತ್ರ
 6. ಹಿಂದಿ ಬೆಲ್ಟ್​ನಲ್ಲಿ ನಾಲ್ಕು ದಿನಗಳಲ್ಲಿ ಹೆಚ್ಚು ದುಡ್ಡು ಮಾಡಿದ ಚಿತ್ರ
 7. ಕರ್ನಾಟಕದಲ್ಲಿ ರೆಕಾರ್ಡ್ ಓಪನಿಂಗ್
 8. ಕರ್ನಾಟಕದಲ್ಲಿ ವೀಕೆಂಡ್​ ಅವಧಿಯಲ್ಲಿ ‘ಕೆಜಿಎಫ್ 2’ ದಾಖಲೆಯ ಕಲೆಕ್ಷನ್
 9. ಕರ್ನಾಟಕದಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
 10. ಕರ್ನಾಟಕದಲ್ಲಿ ಮೂರನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
 11. ಕರ್ನಾಟಕದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
 12. ಕರ್ನಾಟಕದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್​ ಮಾಡಿದ ಚಿತ್ರ
 13. ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ
  ಕೇರಳದಲ್ಲೂ ರೆಕಾರ್ಡ್​ ಓಪನಿಂಗ್
 14. ಕೇರಳದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
 15. ಕೇರಳದಲ್ಲಿ ಎರಡನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
 16. ಕೇರಳದಲ್ಲಿ ಮೂರನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
 17. ಕೇರಳದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
 18. ಕೇರಳದಲ್ಲಿ ಒಂದೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಸಿನಿಮಾ
 19. ಕೇರಳದ ಸಂಡೇ ಬಾಕ್ಸ್ ಆಫೀಸ್​ನಲ್ಲಿ ಧಮಾಕಾ
 20. ಟಾಲಿವುಡ್​ನಲ್ಲಿ ರೆಕಾರ್ಡ್ ಓಪನಿಂಗ್
 21. ವಾರಾಂತ್ಯದಲ್ಲಿ ಟಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 22. ವಾರಾಂತ್ಯದಲ್ಲಿ ಟಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 23. ಟಾಲಿವುಡ್​ನಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 24. ಟಾಲಿವುಡ್​ನಲ್ಲಿ ಮೂರನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 25. ಟಾಲಿವುಡ್​ನಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 26. ಟಾಲಿವುಡ್​ನಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
 27. ಟಾಲಿವುಡ್​ನಲ್ಲಿ ಭಾನುವಾರದ ಕಲೆಕ್ಷನ್​ನಲ್ಲಿ ತೆಲುಗೇತರ ಸಿನಿಮಾ ಪೈಕಿ ‘ಕೆಜಿಎಫ್ 2’ಗೆ ಮೊದಲ ಸ್ಥಾನ
 28. ಭಾರತದಲ್ಲಿ ಐಮ್ಯಾಕ್ಸ್ ಕಲೆಕ್ಷನ್​ನಲ್ಲಿ ದಾಖಲೆ
 29. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ

TV9 Kannada


Leave a Reply

Your email address will not be published.