ಜೂನ್ 10 ಮತ್ತೊಂದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಬೆಂಕಿಯ ಉಂಗುರದಂತೆ ಸೂರ್ಯ ಅವತ್ತು ಗೋಚರಿಸಲಿದ್ದಾನೆ. ಇದೊಂದು ವಿಶೇಷ ಸೂರ್ಯಗ್ರಹಣ. ಈ ವರ್ಷದ ಮೊದಲ ಸೂರ್ಯ ಗ್ರಹಣವೂ ಹೌದು.

ಸೂರ್ಯ ಗ್ರಹಣ ಪದೇ ಪದೇ ಸಂಭವಿಸುತ್ತಲೇ ಇರುತ್ತೆ. ಒಮ್ಮೊಮ್ಮೆ ಒಂದೊಂದು ಭಾಗದಲ್ಲಿ ಇದು ಗೋಚರವಾಗುತ್ತೆ. ಕಾರಣ ಸೂರ್ಯನ ಸುತ್ತ ಭೂಮಿ ಸುತ್ತುತ್ತಾ ಇರೋದ್ರಿಂದ. ಈ ಬಾರಿಯೂ ಮತ್ತೊಂದು ವಿಸ್ಮಯ ಇದೇ 10ರಂದು ಕಾಣಿಸಲಿದೆ. ಅವತ್ತು ಸೂರ್ಯ ಬೆಂಕಿಯ ಉಂಗುರದಂತೆ ಗೋಚರಿಸಲಿದ್ದಾನೆ. ಇದನ್ನು ಕಂಕಣ ಸೂರ್ಯ ಗ್ರಹಣ ಅಂತಾನೂ ಹೇಳ್ತಾರೆ. ಇದು ವರ್ಷದ ಮೊದಲ ಸೂರ್ಯ ಗ್ರಹಣವೂ ಹೌದು. ನಾವಿಲ್ಲಿ ಸೂರ್ಯಗ್ರಹಣದ ಶಾಸ್ತ್ರ ಹೇಳ್ತಾ ಇಲ್ಲ. ಆದರೆ ಸೂರ್ಯನ ಸುತ್ತ ನಿರ್ಮಾಣವಾಗುವ ವಿಸ್ಮಯ ಹೇಗೆಲ್ಲಾ ಇರುತ್ತೆ ಅನ್ನೋದನ್ನು ಹೇಳ್ತಾ ಹೋಗ್ತಿವಿ.

ವಿಸ್ಮಯಕಾರಿ ವಿದ್ಯಮಾನಗಳಲ್ಲಿ ಸೂರ್ಯಗ್ರಹಣ ಅತ್ಯಂತ ಪ್ರಮುಖವಾದುದು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಅಪರೂಪದ ವಿದ್ಯಮಾನ ಖಗೋಳಪ್ರಿಯರಿಗೆ ಹಬ್ಬವೇ ಸರಿ. ಈ ಗ್ರಹಣ ಬಂದರೆ ಕೆಲ ಸಾಂಪ್ರದಾಯಿಕ ನಂಬಿಕೆಗಳು ಹೆಚ್ಚಾಗಿ ಇರುತ್ತದೆ. ಕೆಲವರು ಸೂರ್ಯ ಗ್ರಹಣವನ್ನು ಒಂದು ಪ್ರಮುಖ ಖಗೋಳಶಾಸ್ತ್ರದ ಘಟನೆ ಎಂದು ವೀಕ್ಷಿಸಿದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಪುರಾಣಿಕ ಗ್ರಂಥಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಾಭಾರತದಲ್ಲಿ ಸೂರ್ಯ ಗ್ರಹಣವನ್ನು ಬಣ್ಣಿಸಲಾಗಿದೆ. ಇಲ್ಲಿ ವಿಶೇಷತೆ ಎಂದರೆ ಈ ಗ್ರಹಣವನ್ನು ಸೂತಕ ಕಾಲವೆಂದು ಹೇಳುತ್ತಾರೆ. ಅಲ್ಲದೆ ತುಂಬಾ ಮಹತ್ವ ಪಡೆದುಕೊಂಡಿದೆ. ಗ್ರಹಣ ಕಾಲಕ್ಕೆ 12 ಗಂಟೆ ಮುಂಚಿತವಾಗಿ ಸೂತಕ ಕಾಲ ಆರಂಭವಾಗುತ್ತದೆ. ಹಾಗೂ ಗ್ರಹಣ ಮುಕ್ತಾಯದ ಬಳಿಕ ಇದು ಕೂಡ ಅಂತ್ಯವಾಗುತ್ತದೆ ಎನ್ನುವುದು ನಂಬಿಕೆ. ಆದರೆ ವಿಜ್ಞಾನಿಗಳ ಪಾಲಿಗೆ ಇದು ವಿಶೇಷ ಹಬ್ಬ. ಕೆಲವರಂತು ಸೂರ್ಯನ ಸಂಪೂರ್ಣ ಚಲನೆಯನ್ನು ಇಂಚಿಂಚೂ ಬಿಡದೆ ವಿಕ್ಷಿಸುತ್ತಾರೆ.

ಬ್ಲಡ್​ಮೂನ್ ಬೆನ್ನಲ್ಲೇ ಸೂರ್ಯಗ್ರಹಣ
ಕಳೆದ ಹುಣ್ಣಿಮೆ ದಿನ ವಿಶ್ವ.. ರೆಡ್ ಬ್ಲಡ್ ಮೂನ್ ಎನ್ನುವ ಚಂದ್ರ ಗ್ರಹಣಕ್ಕೆ ಸಾಕ್ಷಿಯಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಇನ್ನೊಂದು ಗ್ರಹಣ ವಿಶ್ವಕ್ಕೆ ತನ್ನ ದರ್ಶನ ನೀಡಲು ಸಿದ್ದವಾಗಿದೆ. ಈ ಗ್ರಹಣ 2021ರ ಮೊದಲ ಸೂರ್ಯ ಗ್ರಹಣ ಆಗಿದ್ದು ಜೂನ್ 10 ರಂದು ಈ ವಿಶೇಷ ರಿಂಗ್ ಆಫ್ ಫೈರ್ ಎನ್ನುವ ಅದ್ಭತವನ್ನು ವೀಕ್ಷಿಸಲು ಪ್ರಪಂಚ ರೆಡಿಯಾಗಿ ಕೂತಿದೆ. ಸೂರ್ಯ, ಚಂದ್ರ ಸಮವಾದ ಒಂದೇ ರೇಖೆಯಲ್ಲಿ ಬಂದು ಸೂರ್ಯನ ಸುತ್ತ ಒಂದು ದೊಡ್ಡ ಬೆಂಕಿ ಚಕ್ರದಂತೆ ಕಾಣಿಸೋದು ಈ ಗ್ರಹಣದ ವಿಶೇಷ. ಈ ಗ್ರಹಣ ಸತತ ಒಂದು ಗಂಟೆಗಳ ಕಾಲ ನಡೆಯಲಿದ್ದು ಈ ಸೌಂದರ್ಯವನ್ನು ಮಿಸ್ ಮಾಡ್ದೆ ಎಲ್ಲರು ನೋಡ್ಲೆ ಬೇಕು.

ಸಹಜವಾಗಿ ಸೂರ್ಯ ಗ್ರಹಣ ಆದಾಗ ಭೂಮಿ ಸೂರ್ಯನ ನಡುವೆ ಚಂದ್ರನು ಭೂಮಿಯ ಮೇಲೆ ತನ್ನ ನೆರಳನ್ನು ಬಿತ್ತರಿಸುತ್ತಾನೆ. ಇದರಿಂದ ಸೂರ್ಯನಿಂದ ನೇರವಾಗಿ ಬರುತ್ತಿದ್ದ ಬೆಳಕನ್ನು ತಡೆಹಿಡಿದಂತಾಗುತ್ತದೆ. ಆದರೆ ಚಂದ್ರನು ಭೂಮಿ ಮತ್ತು ಸೂರ್ಯನ ನಟ್ಟ ನಡುವು ಭಾಗಕ್ಕೆ ಬಂದಾಗ ಸೂರ್ಯನ ಸುತ್ತ ಒಂದು ಬೆಂಕಿಯ ರಿಂಗ್ ಸೃಷ್ಟಿಯಾಗುತ್ತದೆ. ಮಧ್ಯೆ ದೊಡ್ಡ ಖಾಲಿ ಜಾಗವಾಗಿ ಅಂಚುಗಳಲ್ಲಿ ಹೊಳೆಯುವ ಪ್ರಬಲ ಬೆಳಕು ಭೂಮಿಗೆ ಕಾಣಿಸುತ್ತದೆ. ಇದನ್ನು ಬೆಂಕಿಯ ಉಂಗುರ, ಕಂಕಣ ಸೂರ್ಯ ಗ್ರಹಣ ಅಥವಾ ರಿಂಗ್ ಆಫ್ ಫೈರ್ ಎನ್ನುವ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.


ಚಂದ್ರ ಭೂಮಿಯ ಸುತ್ತ ಮೊಟ್ಟೆ ಆಕಾರದಲ್ಲಿ ಸುತ್ತುತ್ತಿರುತ್ತಾನೆ. ಇದರಿಂದ ಒಮ್ಮೆ ಚಂದ್ರ ಭೂಮಿಯಿಂದ ದೂರ ಹಾಗೂ ಒಮ್ಮೊಮ್ಮೆ ಹತ್ತಿರ ಇರುವ ಹಾಗೆ ಕಾಣಿಸುತ್ತಿರುತ್ತಾನೆ. ಆಗಾಗ ಸೂರ್ಯ ಭೂಮಿಯ ನಡುವೆ ಚಂದ್ರ ಬಂದು ಸೂರ್ಯ ಗ್ರಹಣ ಸಂಭವಿಸುತ್ತಲೆ ಇರುತ್ತದೆ. ಈ ಸೂರ್ಯ ಗ್ರಹಣದಲ್ಲಿ ಮೂರು ಬಗೆ ಇದೆ. ಒಂದು ಸಂಪೂರ್ಣ ಸೂರ್ಯ ಗ್ರಹಣ. ಈ ಗ್ರಹಣದಲ್ಲಿ ಚಂದ್ರ ಭೂಮಿಗೆ ತುಂಬ ಹತ್ತಿರ ಇರುತ್ತಾನೆ. ಇದರಿಂದ ಮೂರು ಒಂದೇ ರೇಖೆಯಲ್ಲಿ ಬಂದಾಗ ಚಂದ್ರ ಸೂರ್ಯನಿಗಿಂತ ಹಿರಿದಾಗಿ ಕಂಡು ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿ ಬಿಡುತ್ತಾನೆ. ಇನ್ನೊಂದು ಅಪೂರ್ಣ ಸೂರ್ಯಗ್ರಹಣ, ಇದರಲ್ಲಿ ಚಂದ್ರ ಎರಡರ ನಡು ಅಂತರದಲ್ಲಿ ಇದ್ದು, ಆಗ್ಗಾಗೆ ಹಾದು ಹೋಗುತ್ತಾನೆ. ಇದರಿಂದ ಸೂರ್ಯ ಸಂಪೂರ್ಣ ಮುಚ್ಚದೆ ಕಟ್ ಮಾಡಲಾಗಿರುವ ಬೆಂಕಿ ಚಂಡಿನಂತೆ ಕಾಣಿಸುತ್ತಾನೆ. ಇನ್ನು ವಾರ್ಷಿಕ ಸೂರ್ಯ ಗ್ರಹಣ. ಇದು ಚಂದ್ರ ಭೂಮಿಗಿಂತ ಸೂರ್ಯನಿಗೆ ಸಮೀಪದಲ್ಲಿ ಇರುತ್ತದೆ. ಈ ಕಾರಣ ಚಂದ್ರನಿಗಿಂತ ಸೂರ್ಯ ಹಿರಿದಾಗಿ ಕಾಣಿಸಿ, ಗ್ರಹಣ ಕಾಲದಲ್ಲಿ ಈ ರೀತಿ ಬೆಂಕಿಯ ಉಂಗರಗಳು ಗೋಚರವಾಗುತ್ತವೆ.

ಎಲ್ಲೆಲ್ಲಿ ಕಾಣುತ್ತೆ ರಿಂಗ್ ಆಫ್ ಫೈರ್ 

ವರ್ಷದ ಮೊದಲ ಚಂದ್ರಗ್ರಹಣ ನಡೆದ ಹದಿನೈದು ದಿನಗಳ ಒಳಗಾಗಿ ಈ ವರ್ಷದ ಮೊದಲ ಸೂರ್ಯಗ್ರಹಣವೂ ಸಂಭವಿಸಲಿದೆ. ಜೂನ್‌ 10ರಂದು ನಡೆಯುವ ಸೂರ್ಯ ಗ್ರಹಣವು ಎಲ್ಲೆಲ್ಲಿ ಕಾಣಿಸುತ್ತದೆ ಎನ್ನುವುದನ್ನು ನೋಡುವುದಾದರೆ. ಉತ್ತರ ಅಮೆರಿಕಾ, ಯುರೋಪ್‌ ಮತ್ತು ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರುತ್ತದೆ. ಅಲ್ಲದೇ ಉತ್ತರ ಕೆನಡಾ, ಗ್ರೀನ್‌ಲ್ಯಾಂಡ್‌ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದು. ಅಲ್ಲದೆ ಸೂರ್ಯಗ್ರಹಣವು ಗುರುವಾರ ಮಧ್ಯಾಹ್ನ 1:42ಕ್ಕೆ ನಡೆಯಲಿದ್ದು, ಸಂಜೆ 6: 41ಕ್ಕೆ ಕೊನೆಗೊಳ್ಳುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಭಾಗಶಃ ಗೋಚರ
ಇನ್ನು ಭಾರತದಲ್ಲಿ ಕೂಡ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಕಾಣಿಸಿಕೊಳ್ಳಲಿದೆ. ಭಾರತೀಯರು ಈ ಅವಧಿಯಲ್ಲಿ ಕಾದು ಸೂರ್ಯನ ದರ್ಶನ ಮಾಡಿದರೆ ರಿಂಗ್ ಆಫ್ ಫೈರ್ ವಿಕ್ಷಿಸುವ ಭಾಗ್ಯ ಪ್ರಾಪ್ತಿಯಾಗಬಹುದು. ಆದರೆ ಭಾರತದಲ್ಲಿ ಗ್ರಹಣದ ಬಗ್ಗೆ ಅನೇಕ ನಂಬಿಕೆಗಳಿವೆ. ಧಾರ್ಮಿಕ ನಂಬಿಕೆಯ ಪ್ರಕಾರ ಗ್ರಹಣ ಅಶುಭ ಎಂದು ನಂಬಲಾಗುತ್ತದೆ. ಹಾಗಾಗಿ ಗ್ರಹಣ ಕಾಲದಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡುವುದಿಲ್ಲ. ಸೂರ್ಯಗ್ರಹಣ ಸಮಯದಲ್ಲಿ ಹಸುಗಳಿಗೆ ಹುಲ್ಲು ತಿನ್ನಿಸುವುದು, ಪಕ್ಷಿಗಳಿಗೆ ಧಾನ್ಯವನ್ನು ನೀಡುವುದು ಮತ್ತು ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಭಾರತೀಯರ ಬಲವಾದ ನಂಬಿಕೆಯಾಗಿದೆ.

ಏನೇ ಆದರು ಸೃಷ್ಟಿ ವಿಸ್ಮಯವನ್ನು ಮಿಸ್ ಮಾಡ್ಕೊಬಾರ್ದು. ಈ ಕಂಕಣ ಸೂರ್ಯ ಗ್ರಹಣವೂ ಪ್ರತಿ 18 ತಿಂಗಳಿಗೊಮ್ಮೆ ನಡೆಯುತ್ತದೆ. ಹೀಗೆ ನೀಲವಾದ ತಿಳಿ ಆಕಾಶದ ಮದ್ಯೆ ಬೆಂಕಿಯ ರಿಂಗ್ ತೇಲುತ್ತಿರುವುದು ಮನಸ್ಸಿಗೆ ಸಂತಸ ತರೋದ್ರಲ್ಲಿ ಡೌಟೆ ಇಲ್ಲ.

ಕಂಕಣ ಸೂರ್ಯ ಗ್ರಹಣ, ರಿಂಗ್ ಆಫ್ ಫೈಯರ್ ಹೀಗೆ ವಿವಿಧ ಹೆಸರುಗಳು ಹೇಗಿದ್ಯೂ ಅಷ್ಟೇ ವಿಸ್ಮಯ ಈ ಸೂರ್ಯ ಗ್ರಹಣ. ಕೊರೊನಾ ಆದ್ರಿಂದ ಮನೆಯಲ್ಲೆ ಸೇಫ್ ಆಗಿ ಇರಿ, ಆದ್ರೆ ಈ ಖಗೋಳ ವಿಸ್ಮಯ ಗ್ರಹಣ ಮಾತ್ರ ಮಿಸ್ ಮಾಡ್ಕೊಬೇಡಿ.

 

The post ರೆಡ್​​ಮೂನ್ ಆಯ್ತು ಈಗ ರಿಂಗ್ ಆಫ್ ಫೈರ್.. ಜೂ. 10ಕ್ಕೆ ಗೋಚರವಾಗಲಿರೋ ಈ ವಿಸ್ಮಯ ಏನು? appeared first on News First Kannada.

Source: newsfirstlive.com

Source link