ರೆಡ್​ ಕಾರ್ಪೆಟ್​ನಲ್ಲಿ ಕೈ ಕೊಟ್ಟಿತ್ತು ಮಲೈಕಾ ಬಟ್ಟೆ; ಎಲ್ಲರ ಎದುರು ನಟಿಗೆ ಭಾರಿ ಮುಜುಗರ | Throwback photo of Malaika Arora wardrobe malfunction goes viral


ರೆಡ್​ ಕಾರ್ಪೆಟ್​ನಲ್ಲಿ ಕೈ ಕೊಟ್ಟಿತ್ತು ಮಲೈಕಾ ಬಟ್ಟೆ; ಎಲ್ಲರ ಎದುರು ನಟಿಗೆ ಭಾರಿ ಮುಜುಗರ

ಮಲೈಕಾ ಅರೋರಾ

ನಟಿ ಮಲೈಕಾ ಅರೋರಾ (Malaika Arora) ಅವರು ಗ್ಲಾಮರ್​ ಕಾರಣದಿಂದ ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಾರೆ. ಸಿಕ್ಕಾಪಟ್ಟೆ ಹಾಟ್​ ಅವತಾರದಲ್ಲಿ ಅವರು ಫೋಟೋಗಳಿಗೆ ಪೋಸ್​ ನೀಡುತ್ತಾರೆ. ಕ್ಯಾಟ್​ ವಾಕ್​ ಮಾಡುವಾಗ ಅವರನ್ನು ನೋಡುವುದೇ ಪಡ್ಡೆಗಳಿಗೆ ಹಬ್ಬ. ಈಗ ಮಲೈಕಾಗೆ 48 ವರ್ಷ ವಯಸ್ಸು. ಹದಿಹರೆಯದ ಯುವತಿಯರೂ ನಾಚುವಂತೆ ಅವರು ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ರೆಡ್​ ಕಾರ್ಪೆಟ್​​ ಮೇಲೆ ಅವರು ಭಾರಿ ಕಾನ್ಫಿಡೆನ್ಸ್​ನಿಂದ ಹೆಜ್ಜೆ ಹಾಕುತ್ತಾರೆ. ಆದರೆ ಅವರ ಆತ್ಮವಿಶ್ವಾಸವನ್ನು ಅಡಗಿಸುವಂತಹ ಅನಿರೀಕ್ಷಿತ ಘಟನೆ (Wardrobe Malfunction) ಒಮ್ಮೆ ನಡೆದಿತ್ತು. ಮಲೈಕಾ ಧರಿಸಿದ್ದ ಬಟ್ಟೆ ಕೈ ಕೊಟ್ಟಿತ್ತು. ಎಲ್ಲರ ಎದುರು ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಒಂದು ವರ್ಷದ ಹಿಂದೆ ನಡೆದ ಆ ಘಟನೆಯ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಅದು 2020ರಲ್ಲಿ ನಡೆದ ಮಿಸ್​ ದಿವಾ ಕಾರ್ಯಕ್ರಮ. ಹಳದಿ ಬಣ್ಣದ ಗೌನ್​ ಧರಿಸಿ ಮಲೈಕಾ ಮಿಂಚುತ್ತಿದ್ದರು. ಭಾರಿ ಆತ್ಮವಿಶ್ವಾದದಿಂದ ರೆಡ್​ ಕಾರ್ಪೆಟ್​ ಮೇಲೆ ನಡೆದು ಬರುತ್ತಿದ್ದ ಅವರ ಡ್ರೆಸ್​ ಕೈ ಕೊಟ್ಟಿತ್ತು. ಮಾಧ್ಯಮದ ನೂರಾರು ಕ್ಯಾಮೆರಾಗಳು ಅವರನ್ನು ಫೋಕಸ್​ ಮಾಡುತ್ತಿರುವಾಗಲೇ ಈ ಮುಜುಗರದ ಸಂದರ್ಭ ಎದುರಾಗಿತ್ತು. ಕೆಲವು ಛಾಯಾಗ್ರಾಹಕರು ‘ಜೋಪಾನ ಮೇಡಂ’ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಕೂಡಲೇ ಪರಿಸ್ಥಿತಿಯನ್ನು ನಿಭಾಯಿಸಿದ ಮಲೈಕಾ ಅವರು ಹೆಚ್ಚಿನ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಂಡಿದ್ದರು.

ಒಂದಿಲ್ಲೊಂದು ಕಾರಣಕ್ಕೆ ಮಲೈಕಾ ಅರೋರಾ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಅನೇಕ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡಿ ಫೇಮಸ್​ ಆಗಿರುವ ಅವರು ಮಾಡೆಲ್​ ಆಗಿ ಕೆಲಸ ಮಾಡುತ್ತಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರೂಪದರ್ಶಿ ಆಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವೈಯಕ್ತಿಕ ಬದುಕಿನ ಕಾರಣದಿಂದಲೂ ಅವರು ಗಾಸಿಪ್​ ಕಾಲಂಗಳಿಗೆ ಆಹಾರ ಆಗುತ್ತಾರೆ.

ಅರ್ಬಾಜ್​ ಖಾನ್​ ಜೊತೆಗಿನ ದಾಂಪತ್ಯಕ್ಕೆ 2017ರಲ್ಲಿ ಅಂತ್ಯ ಹಾಡಿದ ಮಲೈಕಾ ಅವರು ನಂತರ ನಟ ಅರ್ಜುನ್​ ಕಪೂರ್​ ಜೊತೆ ಸಂಬಂಧ ಬೆಳೆಸಿದರು. ಈಗ ಅವರಿಬ್ಬರೂ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಅರ್ಜುನ್​ ಕಪೂರ್​ ಅವರಿಗೆ ಈಗಿನ್ನೂ 36 ವರ್ಷ ವಯಸ್ಸು. ಅಂದರೆ, ವಯಸ್ಸಿನಲ್ಲಿ ತಮಗಿಂತ 12 ವರ್ಷ ಕಿರಿಯ ವ್ಯಕ್ತಿ ಜೊತೆ ಮಲೈಕಾ ಲಿವಿಂಗ್​ ಟುಗೆದರ್​ನಲ್ಲಿ ಇದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ತಮ್ಮ ಸಂಬಂಧವನ್ನು ಈ ಜೋಡಿ ಮುಚ್ಚಿಟ್ಟಿಲ್ಲ.

ಇದನ್ನೂ ಓದಿ:

ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ

ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *