ಬೆಂಗಳೂರು: ರೆಡ್‍ಮಿ ನೋಟ್‍ 9 ರ ಸರಣಿಯ ಫೋನ್‍ಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು. ಅದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಿ ‘10’ ಸರಣಿಯ ಫೋನ್‍ಗಳನ್ನು ಹೊರತರಲಾಗಿದೆ. ರೆಡ್‍ಮಿ ನೋಟ್‍ 10 ಪ್ರೊ ಮ್ಯಾಕ್ಸ್, ರೆಡ್‍ಮಿ ನೋಟ್‍ 10 ಪ್ರೊ ಹಾಗೂ ರೆಡ್‍ ಮಿ ನೋಟ್‍ 10 ಹೊಸ ಮೂರು ಮಾಡೆಲ್‍ಗಳಾಗಿವೆ. ಈ ಮೂರೂ ಮಾಡೆಲ್‍ಗಳು ಆಯಾ ದರಪಟ್ಟಿಯಲ್ಲಿ ಉತ್ತಮ ಸ್ಪೆಸಿಫಿಕೇಷನ್‍ಗಳನ್ನು ಹೊಂದಿರುವುದೇನೋ ನಿಜ. ಆದರೆ ಭಾರತದಲ್ಲಿ ಈ ವರ್ಷದ ಅಂತ್ಯದೊಳಗೆ 5ಜಿ ಸೌಲಭ್ಯ ಬರುತ್ತಿದ್ದು, ಈ ಮಾಡೆಲ್‍ಗಳಲ್ಲಿ 5ಜಿ ಇರದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ.

ರೆಡ್‍ಮಿ ನೋಟ್‍ ಸರಣಿಯ ಹಿಂದಿನ ಫೋನ್‍ಗಳಲ್ಲಿ ಎಲ್‍ಸಿಡಿ ಪರದೆ ಇರುತ್ತಿತ್ತು. 10 ಸರಣಿಯಲ್ಲಿ ಸೂಪರ್‍ ಅಮೋಲೆಡ್‍ ಪರದೆ ಕೊಟ್ಟಿರುವುದು ವಿಶೇಷ. ರೆಡ್‍ಮಿ ಫೋನ್‍ಗಳಲ್ಲಿ ಅಮೋಲೆಡ್‍ ಪರದೆ ಇರುವುದಿಲ್ಲ ಎಂಬ ದೂರೊಂದಿತ್ತು. ಅದನ್ನು ಇದರಲ್ಲಿ ನಿವಾರಿಸಲಾಗಿದೆ.

ರೆಡ್ ಮಿ ನೋಟ್‍ 10 ಪ್ರೊ ಮ್ಯಾಕ್ಸ್:  ಈ ಮೂರರ  ಪೈಕಿ ರೆಡ್‍ಮಿ ನೋಟ್‍ 10 ಪ್ರೊ ಮ್ಯಾಕ್ಸ್ ಹೆಚ್ಚಿನ ವಿಶೇಷಣಗಳನ್ನು ಹೊಂದಿದ್ದು, 108  ಮೆಗಾಪಿಕ್ಸಲ್‍ ಸ್ಯಾಮ್ಸಂಗ್ ಐಸೋಸೆಲ್ ಎಚ್‍ಎಂ2 ಪ್ರೈಮರಿ ಸೆನ್ಸರ್‍ ಕ್ಯಾಮರಾ ಹಾಗೂ 120 ಹರ್ಟ್ಜ್ ರಿಫ್ರೆಶ್‍ ರೇಟ್‍ ಉಳ್ಳ 6.67 ಇಂಚಿನ ಸೂಪರ್‍ ಅಮೋಲೆಡ್‍, ಎಫ್ಎಚ್ಡಿ ಪ್ಲಸ್ ಪರದೆ ಹೊಂದಿದೆ. ಇದಕ್ಕೆ ಗೊರಿಲ್ಲಾ ಗ್ಲಾಸ್‍ 5 ರಕ್ಷಣೆ ಸಹ ಇದೆ.  ಸ್ನಾಪ್‍ಡ್ರಾಗನ್‍ 732ಜಿ ಪ್ರೊಸೆಸರ್‍ ಹೊಂದಿದೆ. 5,020 ಎಂಎಎಚ್‍ ಬ್ಯಾಟರಿ, 33 ವ್ಯಾಟ್ಸ್ ವೇಗದ ಚಾರ್ಜರ್‍ ಸೌಲಭ್ಯವಿದೆ. 108+5+8+2 ಮೆಗಾಪಿಕ್ಸಲ್ ಗಳ ನಾಲ್ಕು ಲೆನ್ಸ್ ಹಿಂಬದಿ ಕ್ಯಾಮರಾ, 16 ಮೆ.ಪಿ. ಸೆಲ್ಫೀ ಕ್ಯಾಮರಾ ಹೊಂದಿದೆ.  ಇನ್ನೊಂದು ವಿಶೇಷವೆಂದರೆ ಬಾಕ್ಸ್‍ ಸಮೇತ ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ.

 

ಇದರ ದರ:

6GB + 64GB: 18999 ರೂ.

6GB + 128GB: 19999 ರೂ.

8GB + 128GB: 21999 ರೂ.

ರೆಡ್‍ಮಿ ನೋಟ್‍ 10 ಪ್ರೊ: ಇದು ಸಹ ಪ್ರೊ ಮ್ಯಾಕ್ಸ್ ನಲ್ಲಿರುವ ಪರದೆಯನ್ನೇ ಹೊಂದಿದೆ. ಸೂಪರ್‍ ಅಮೋಲೆಡ್‍, ಪರದೆಯ ಅಳತೆ, ಎಲ್ಲ ಪ್ರೊ ಮ್ಯಾಕ್ಸ್ ನದೇ ಡಿಟ್ಟೋ. ಅಲ್ಲದೇ ಪ್ರೊಸೆಸರ್‍, ಬ್ಯಾಟರಿ, ಚಾರ್ಜರ್‍ ಅಂಡ್ರಾಯ್ಡ್ 11 ಇತ್ಯಾದಿ ಇನ್ನೆಲ್ಲವೂ ಸೇಮ್‍ ಟು ಸೇಮ್‍ ರೆಡ್‍ ಮಿ ನೋಟ್‍ ಪ್ರೊ ಮ್ಯಾಕ್ಸ್ ನದ್ದೇ.

ಆದರೆ 10 ಪ್ರೊ ಮ್ಯಾಕ್ಸ್ ಗೂ, 10 ಪ್ರೊಗೂ ಏನು ವ್ಯತ್ಯಾಸ? ಎಂದರೆ, ಹಿಂಬದಿ ಕ್ಯಾಮರಾ ಮಾತ್ರ. ಇದರಲ್ಲಿ 64+5+8+2 ಮೆಗಾ ಪಿಕ್ಸಲ್‍ ಗಳ ನಾಲ್ಕು ಲೆನ್ಸಿನ ಹಿಂಬದಿ ಕ್ಯಾಮರಾ ಇದೆ. 64 ಮೆ.ಪಿ. ಸ್ಯಾಮ್ಸಂಗ್ ಐಸೋಸೆಲ್‍ ಜಿಡಬ್ಲೂ3 ಪ್ರೈಮರಿ ಸೆನ್ಸರ್‍ ಇದೆ. ಸೆಲ್ಫೀ ಕ್ಯಾಮರಾ ಅದರಲ್ಲಿರುವಂಥದ್ದೇ 16 ಮೆಗಾಪಿಕ್ಸಲ್‍.

ಇದರ ದರ:

6GB + 64GB:  15999 ರೂ.

6GB + 128GB: 16999 ರೂ.

8GB + 128GB:  18999 ರೂ.

ರೆಡ್‍ಮಿ ನೋಟ್‍ 10:  ಇದು ಈ ಸರಣಿಯಲ್ಲಿ ಅಗ್ಗದ ಫೋನ್‍. 6.43 ಇಂಚಿನ ಎಫ್‍ಎಚ್‍ಡಿ ಪ್ಲಸ್‍ ಅಮೋಲೆಡ್‍ ಪರದೆ ಹೊಂದಿದೆ. 60 ಹರ್ಟ್ಜ್ ರಿಫ್ರೆಶ್‍ ರೇಟ್‍ ಹೊಂದಿದೆ. ಕಾರ್ನಿಂಗ್‍ ಗೊರಿಲ್ಲಾ ಗ್ಲಾಸ್‍ 3 ರಕ್ಷಣಾ ಪದರ ಹೊಂದಿದೆ. ಇದರಲ್ಲಿ ಸ್ನಾಪ್‍ಡ್ರಾಗನ್‍ 678 ಪ್ರೊಸೆಸರ್‍ ಇದೆ. 48 ಮೆ.ಪಿ. ಸೋನಿ ಐಎಂಎಕ್ಸ್ 583 ಪ್ರೈಮರಿ ಸೆನ್ಸರ್‍, 8ಮೆ.ಪಿ 2 ಮೆ.ಪಿ.ಮತ್ತು 2 ಮೆಪಿ ಉಳ್ಳ ನಾಲ್ಕು ಲೆನ್ಸಿನ ಹಿಂಬದಿ ಕ್ಯಾಮರಾ ಇದೆ. 13 ಮೆ.ಪಿ. ಮುಂಬದಿ ಕ್ಯಾಮರಾ ಇದೆ. ಇದು ಸಹ ಆಂಡ್ರಾಯ್ಡ್ 11 ಹೊಂದಿದೆ. 5000 ಎಂಎಎಚ್‍ ಬ್ಯಾಟರಿ ಇದ್ದು, 33 ವ್ಯಾಟ್ಸ್ ವೇಗದ ಚಾರ್ಜರ್‍ ಇದೆ.

 ಇದರ ದರ:

4GB + 64GB:  11,999 ರೂ.

6GB + 128GB:  13,999 ರೂ.

ರೆಡ್ ಮಿ ನೋಟ್ 10,ಮಾರ್ಚ್ 16 ರಿಂದ, 10 ಪ್ರೊ ಮಾ. 17ರಿಂದ, 10 ಪ್ರೊ ಮ್ಯಾಕ್ಸ್ ಮಾ. 18ರಿಂದ  ಮಿ.ಕಾಮ್‍, ಅಮೆಜಾನ್‍.ಇನ್, ಮಿ ಹೋಮ್‍, ಮಿ ಸ್ಟುಡಿಯೋ ಸ್ಟೋರ್‍ ಗಳಲ್ಲಿ ದೊರಕಲಿದೆ.

 

-ಕೆ.ಎಸ್‍. ಬನಶಂಕರ  ಆರಾಧ್ಯ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More